ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ನಾಯಕರ ಸಂಚಿಗೆ ಬಲಿಯಾದೆ : ಕೊಂಡಯ್ಯ

|
Google Oneindia Kannada News

ಬೆಂಗಳೂರು, ನ. 28 : ಬಳ್ಳಾರಿಯಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆಂದು ಮೀಸಲಾಗಿದ್ದ ನಿವೇಶನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವನ್ನು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ನಿರಾಸಕರಿಸಿದ್ದಾರೆ. ನನ್ನ ರಾಜಕೀಯ ವಿರೋಧಿಗಳ ಷಡ್ಯಂತ್ರವಿದು ಅವರು ಅವರು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಎಲ್ಲಾ ದಾಖಲೆಗಳ ಸಮೇತ ಉತ್ತರ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೆ.ಸಿ.ಕೊಂಡಯ್ಯ, ಪಕ್ಷದ ಕಚೇರಿಗಾಗಿ ಮಂಜೂರಾಗಿದ್ದ ನಿವೇಶನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಸುಳ್ಳು. ರಾಜೀವ್ ಗಾಂಧಿ ಟ್ರಸ್ಟ್ ಗೆ ಜಾಗ ಮಂಜೂರಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲೆಯ ರಾಜಕೀಯ ವಿರೋಧಿಗಳು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. (ಕೆಸಿ ಕೊಂಡಯ್ಯ ಅಮಾನತಿಗೆ ರಾಹುಲ್ ಸೂಚನೆ!)

K.C.Kondaiah

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ, ರಾಜೀವ್ ಗಾಂಧಿ ಟ್ರಸ್ಟ್ ಗಾಗಿ ನಿವೇಶನ ನೀಡಿದ್ದರು. 2001ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ 30 ವರ್ಷಗಳ ಅವಧಿಗೆ ನಿವೇಶನವನ್ನು ಟ್ರಸ್ಟ್ ಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಮೊದಲು ಟ್ರಸ್ಟ್ ಗೆ ಎಂ.ವೈ.ಗೋರ್ಪಡೆ, ಅಲ್ಲಂ ವೀರಭದ್ರಪ್ಪ, ಎಂ.ದಿವಾಕರ ಬಾಬು ಮುಂತಾದವರನ್ನು ಟ್ರಸ್ಟ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು. (ಕೆ.ಸಿ.ಕೊಂಡಯ್ಯಗೆ ಕೆಪಿಸಿಸಿಯಿಂದ ನೋಟಿಸ್)

ಆದರೆ, ಟ್ರಸ್ಟ್ ಸದಸ್ಯರು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಆದ್ದರಿಂದ ಟ್ರಸ್ಟ್ ಗೆ ನನ್ನ ಪತ್ನಿ ಮೀನಾಕ್ಷಿ ಮತ್ತು ಪುತ್ರ ಪ್ರಸಾದ್ ಅವರನ್ನು ಸದಸ್ಯರಾಗಿ ನೇಮಕ ಮಾಡಿಕೊಂಡೆ ಎಂದು ಕೊಂಡಯ್ಯ ಸ್ಪಷ್ಟಪಡಿಸಿದರು. ಟ್ರಸ್ಟ್ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದಿಲ್ಲ ಎಂದು ಅವರು ತಿಳಿಸಿದರು.

ಟ್ರಸ್ಟ್ ಗೆ ಸಂಬಂಧಿಸಿದ ದಾಖಲೆ ಪತ್ರಗಳ ಸಮೇತ ಪಕ್ಷದ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಉತ್ತರ ನೀಡುತ್ತೇನೆ. ಬಳ್ಳಾರಿಯ ಜಿಲ್ಲಾ ಕಾಂಗ್ರೆಸ್ ನಾಯಕರು ನನ್ನ ರಾಜಕೀಯ ಏಳಿಗೆಯನ್ನು ಸಹಿಸದೆ ಸಂಚು ರೂಪಿಸಿದರ. ಆದ್ದರಿಂದ, ಇಂತಹ ಆರೋಪ ನನ್ನ ಮೇಲೆ ಬಂದಿದೆ. ಸೂಕ್ತ ಸಮಯದಲ್ಲಿ ಅವರಿಗೆ ಉತ್ತರ ಕೊಡುತ್ತೇನೆ ಎಂದು ಕೊಂಡಯ್ಯ ಹೇಳಿದರು.

English summary
Senior Congress leader K.C.Kondaiah on Wednesday, November 27 denied the allegations that he had grabbed the land allotted for construction of Bellary District Congress office. He said the land in question was in fact allotted for the Rajiv Gandhi Memorial Trust for social service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X