ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್-ಕೊಲ್ಲಾಪುರ ನೂತನ ರೈಲು ಸೇವೆಗೆ ಚಾಲನೆ

By Gururaj
|
Google Oneindia Kannada News

ಬೀದರ್, ಜೂನ್ 14 : ಬೀದರ್-ಕೊಲ್ಲಾಪುರ ನಡುವಿನ ನೂತನ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ಬೀದರ್, ಭಾಲ್ಕಿ ಮುಂತಾದ ಭಾಗದ ಜನರಿಗೆ ಈ ರೈಲು ಸೇವೆಯಿಂದಾಗಿ ಅನುಕೂಲವಾಗುವ ನಿರೀಕ್ಷೆ ಇದೆ.

ಬೀದರ್ ಸಂಸದ ಭಗವಂತ ಖೂಬಾ ಅವರು ಶುಕ್ರವಾರ ನೂತನ ಬೀದರ್-ಕೊಲ್ಲಾಪುರ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು. ಪ್ರತಿ ಬುಧವಾರ ಈ ರೈಲು ಬೀದರ್-ಕೊಲ್ಲಾಪುರ ನಡುವೆ ಸಂಚಾರ ನಡೆಸಲಿದೆ.

ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ

ವೇಳಾಪಟ್ಟಿ : ಪ್ರತಿ ಬುಧವಾರ ರಾತ್ರಿ 11.35ಕ್ಕೆ ಕೊಲ್ಲಾಪುರದಿಂದ ಹೊರಡುವ ರೈಲು, ಗುರುವಾರ ಬೆಳಗ್ಗೆ 10 ಗಂಟೆಗೆ ಬೀದರ್‌ಗೆ ತಲುಪಲಿದೆ.

Kollapur Bidar new rail service flagged off

ಬೀದರ್‌ನಿಂದ ಗುರುವಾರ ಬೆಳಗ್ಗೆ 11.45ಕ್ಕೆ ಹೊರಡುವ ರೈಲು, ರಾತ್ರಿ 12.35ಕ್ಕೆ ಕೊಲ್ಲಾಪುರವನ್ನು ತಲುಪಲಿದೆ.

ಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆ

ಮಾರ್ಗ :ಕೊಲ್ಲಾಪುರದಿಂದ ಹೊರಡುವ ರೈಲು ಮಿರಜ, ಪಂಢರಾಪುರ, ಕುರ್ಡುವಾಡಿ, ಉಸ್ಮಾನಾಬಾದ್, ಲಾತೂರ, ಉದಗೀರ, ಭಾಲ್ಕಿ ಮಾರ್ಗವಾಗಿ ಬೀದರ್‌ಗೆ ತಲುಪಲಿದೆ.

ಕರ್ನಾಟಕದ ಬೀದರ್, ಭಾಲ್ಕಿ ಮುಂತಾದ ಭಾಗದ ಜನರಿಗೆ ಕೊಲ್ಲಾಪುರದತ್ತ ಪ್ರಯಾಣ ಮಾಡಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಒಪ್ಪಿಗೆ ನೀಡಿ, ಹೊಸ ರೈಲು ಸೇವೆ ಆರಂಭಿಸಲಾಗಿದೆ.

English summary
Bidar MP Bhagwanth Hhuba on Friday, June 15, 2018 flagged off the new train service between Kollapur-Bidar. Every Wednesday train will run between Kollapur-Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X