• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾರದಲ್ಲಿ ಪವನ್ ಕಲ್ಯಾಣ್ ಅಭಿಮಾನಿ ಕೊಲೆಯಾಗಿದ್ಯಾಕೆ?

|

ಕೋಲಾರ, ಆಗಸ್ಟ್, 25: ಇಬ್ಬರು ನಟರ ನಡುವೆ ಯಾರು ಶ್ರೇಷ್ಠ? ಯಾರು ಕನಿಷ್ಠ? ಎಂಬ ವಾದ ಕೊಲೆಯಲ್ಲಿ ಅಂತ್ಯವಾಗಿದೆ. ಇದು ಸಿನಿಮಾ ಕ್ರೇಜ್ ಅತಿಯಾಗಿರುವ ತಮಿಳುನಾಡು ಅಥವಾ ಆಂಧ್ರಪ್ರದೇಶದಲ್ಲಿ ನಡೆದ ಘಟನೆ ಅಲ್ಲ. ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಚಿನ್ನದ ನಾಡು ಕೋಲಾರ ಇಂಥದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ.

ಸಿನಿಮಾ ಅಭಿಮಾನ, ನಟರ ಮೇಮಿನ ಅಭಿಮಾನ ಅತಿಯಾದರೆ ಏನಾಗುತ್ತದೆ ಎಂಬುದಕ್ಕೆ ಕೋಲಾರದಲ್ಲಿಯೇ ಒಂದು ಉದಾಹರಣೆ ಸಿಕ್ಕಿದೆ. ಇದು ಕರ್ನಾಟಕದ ನಟರ ಅಭಿಮಾನಿಗಳಲ್ಲಿ ಆದ ಗಲಾಟೆ ಅಲ್ಲ. ತೆಲುಗು ನಟರ ವಿಷಯದಲ್ಲಿ ಉಂಟಾದ ಜಗಳ![ಮುದ್ದೇನಹಳ್ಳಿಯಲ್ಲಿ ಬೆಂಗಳೂರು ಉತ್ತರ ವಿ.ವಿ ಕ್ಯಾಂಪಸ್‌]

ಪವನ್ ಕಲ್ಯಾಣ್ ಮತ್ತು ಜೂನಿಯರ್ ಎನ್ ಟಿಆರ್ ಅಭಿಮಾನಿ ನಡುವಿನ ಗಲಾಟೆಯಲ್ಲಿ ಕಲ್ಯಾಣ್ ಅಭಿಮಾನಿ ಕೊಲೆಯಾಗಿ ಹೋಗಿದ್ದಾನೆ. ಪವನ್ ಕಲ್ಯಾಣ್ ಅಭಿಮಾನಿ ಇನ್ನೊಬ್ಬ ತೆಲುಗು ನಟ ಜೂನಿಯರ್ ಎನ್ ಟಿ ಆರ್ ಅಭಿಮಾನಿಯಿಂದ ಭಾನುವಾರ ಹತ್ಯೆಯಾಗಿದ್ದಾನೆ. ಇಬ್ಬರ ನಡುವೆ ಉಂಟಾದ ಜಗಳ ತಾರಕಕ್ಕೆ ಏರಿದ್ದು ಎನ್ ಟಿಆರ್ ಅಭಿಮಾನಿ ಕಲ್ಯಾಣ್ ಅಭಿಮಾನಿ ವಿನೋದ್ ಕುಮಾರ್ (24) ಎಂಬುವರಿಗೆ ಚಾಕುವಿನಿಂದ ಇರಿದಿದ್ದಾನೆ.[ನಟಿ ಖುಷಿ ಮಲಗಿದ್ದಾಗ ಹೋಟೆಲ್ ಸಿಬ್ಬಂದಿಯಿಂದ ಕಿರುಕುಳ]

ಇಬ್ಬರಲ್ಲಿ ಯಾರ ದೊಡ್ಡ ನಟರು ಎಂಬ ಚರ್ಚೆ ಆರಂಭವಾಗಿದ್ದೆ ಗಲಾಟೆಗೆ ಕಾರಣ. ಸಭೆಯೊಂದರ ನಂತರ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದರು.

English summary
Kolar: A fan of Telugu megastar Pawan Kalyan was allegedly stabbed to death on Sunday by a fan of another popular hero, Junior NTR, in Kolar, on Sunday 23 August. Vinod Kumar, 24, was stabbed with a knife during an argument over who is the bigger star. His attacker has been arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X