ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ ಕಾಂಗ್ರೆಸ್‌ ನಾಯಕರನ್ನು ಭೇಟಿಯಾದ ಇಬ್ಬರು ಜೆಡಿಎಸ್ ಶಾಸಕರು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15; ಒಂದು ಕಡೆ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಮತ್ತೊಂದು ಕಡೆ ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆ ನಡೆಯುತ್ತಿದೆ. ಬುಧವಾರ ಒಂದೇ ದಿನ ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ. ಜಿ. ಟಿ. ದೇವೇಗೌಡರು ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ದೇವೇಗೌಡರು ಗರಂ; ಜೆಡಿಎಸ್‌ ಶಾಸಕ ಪಕ್ಷದಿಂದ ಉಚ್ಛಾಟನೆ?ದೇವೇಗೌಡರು ಗರಂ; ಜೆಡಿಎಸ್‌ ಶಾಸಕ ಪಕ್ಷದಿಂದ ಉಚ್ಛಾಟನೆ?

ಕೆ. ಸಿ. ವ್ಯಾಲಿ ಯೋಜನೆ ಮುಂದಿಟ್ಟುಕೊಂಡು ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾದರು.

ಜಿಟಿ ಹರೀಶ್ ಸ್ಪರ್ಧೆಗೆ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರೋಧ!ಜಿಟಿ ಹರೀಶ್ ಸ್ಪರ್ಧೆಗೆ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರೋಧ!

ಶಾಸಕ ಕೆ. ಶ್ರೀನಿವಾಸ ಗೌಡ ಈಗಾಗಲೇ ಜೆಡಿಎಸ್ ತೊರೆಯಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇಂತಹ ಸಮಯದಲ್ಲಿಯೇ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕೆ.ಆರ್ ನಗರ ಕ್ಷೇತ್ರ; ಜಿಟಿ ದೇವೇಗೌಡ ಕುಟುಂಬಕ್ಕೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್ಕೆ.ಆರ್ ನಗರ ಕ್ಷೇತ್ರ; ಜಿಟಿ ದೇವೇಗೌಡ ಕುಟುಂಬಕ್ಕೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್

ಡಿ. ಕೆ. ಶಿವಕುಮಾರ್ ಭೇಟಿ

ಡಿ. ಕೆ. ಶಿವಕುಮಾರ್ ಭೇಟಿ

ಬುಧವಾರ ಸದಾಶಿವ ನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ರನ್ನು ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಭೇಟಿ ಮಾಡಿದರು. ಮತ್ತೊಂದು ಕಡೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾದರು. ಜಿ. ಟಿ. ದೇವೇಗೌಡರು ಈಗಾಗಲೇ ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

ಎಚ್. ಡಿ. ದೇವೇಗೌಡರು ಗರಂ

ಎಚ್. ಡಿ. ದೇವೇಗೌಡರು ಗರಂ

ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, "ಕೋಲಾರ ಶಾಸಕರ ವಿಚಾರದಲ್ಲಿ ಇನ್ನು ಸಹಿಸುವುದು ಸಾಧ್ಯವಿಲ್ಲ. ನೇರವಾಗಿ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚಿಸಿದ್ದೇನೆ" ಎಂದು ಹೇಳಿದ್ದರು.

ಕೆ. ಸಿ. ವ್ಯಾಲಿ ಯೋಜನೆ ಬಗ್ಗೆ ಮಾತು

ಕೆ. ಸಿ. ವ್ಯಾಲಿ ಯೋಜನೆ ಬಗ್ಗೆ ಮಾತು

ಕೆಲವು ದಿನಗಳ ಹಿಂದೆ ಕೆ. ಶ್ರೀನಿವಾಸ ಗೌಡ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಕೋಲಾರ ಜಿಲ್ಲೆಗೆ ಕೆ. ಸಿ. ವ್ಯಾಲಿ ನೀರು ತಂದು ರಮೇಶ್ ಕುಮಾರ್ ಎಂದೂ ಮರೆಯಲಾರದಂತಹ ಕೆಲಸ ಮಾಡಿದ್ದಾರೆ. ಆದರೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅದನ್ನು ಕೊಳಚೆ ನೀರು ಎಂದು ಹೇಳಿರುವುದು ಸರಿಯಲ್ಲ. ಬರಡು ಭೂಮಿ ಎನಿಸಿಕೊಂಡಿರುವ ಕೋಲಾರಕ್ಕೆ ಕೆ. ಸಿ. ವ್ಯಾಲಿ ನೀರು ಬಹಳ ಪ್ರಾಮುಖ್ಯವಾಗಿದೆ. ಯೋಜನೆ ನೀರನ್ನು ನಾನು ಸಹ ಕುಡಿದಿದ್ದೇನೆ. ನಾನೇನು ಸುತ್ತು ಹೋಗಿದ್ದೆನೆಯೇ?" ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್ ಸೇರುವ ಸೂಚನೆ ಕೊಟ್ಟಿದ್ದರು

ಕಾಂಗ್ರೆಸ್ ಸೇರುವ ಸೂಚನೆ ಕೊಟ್ಟಿದ್ದರು

ಕೆ. ಶ್ರೀನಿವಾಸ ಗೌಡ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದಾಗಲೇ ಕಾಂಗ್ರೆಸ್ ಸೇರುವ ಸುಳಿವು ಕೊಟ್ಟಿದ್ದರು. "ನಾನು ಕೂಡಾ ಕಾಂಗ್ರೆಸ್‌ನಲ್ಲಿದ್ದವನು. ಕಳೆದ ಬಾರಿಯೇ ಕಾಂಗ್ರೆಸ್ ಟಿಕೆಟ್ ಸಿಗಬೇಕಿತ್ತು. ಇಲ್ಲಿನ ಮಹಾನುಭಾವನೊಬ್ಬ ಅದಕ್ಕೆ ಅಡ್ಡಿ ಮಾಡಿದ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಸಿಬಿಟ್ಟ" ಎಂದು ಹೇಳಿದ್ದರು. ಇಂದು ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

Recommended Video

ಅಧಿವೇಶನಕ್ಕೆ ಚಕ್ಕಡಿ ಗಾಡಿಯಲ್ಲಿ ಬಂದ ಕಾಂಗ್ರೆಸ್‌ ನಾಯಕರು.. | Oneindia Kannada

English summary
Kolar JD(S) MLA K. Srinivasa Gowda who verbally attacked former chief minister H. D. Kumaraswamy recently met KPCC president D. K. Shivakumar in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X