ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ

By Madhusoodhan
|
Google Oneindia Kannada News

ಗೌರಿಬಿದನೂರು, ಮೇ 24: ಹಸಿರು ಕ್ರಾಂತಿ ಎಂದರೇನು? ಮರ ಗಿಡಗಳನ್ನು ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಪಾಡುವುದು ಎಂದು ಸರಳವಾಗಿ ಉತ್ತರಿಸಬಹುದು. ಬಿಸಿಲಿನಲ್ಲಿ ಬಳಲುವ, ಕುಡಿಯುವ ನೀರಿಗೆ ಸದಾ ಹಾಹಾಕಾರದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಹಸಿರು ಕ್ರಾಂತಿ ಸಾಧ್ಯವೇ?

ಹೌದು, ಸಾಧ್ಯವಿದೆ ಎಂಬುದನ್ನು ಅಲ್ಲಿಯ ಜನತೆ ತೋರಿಸಿಕೊಟ್ಟಿದ್ದಾರೆ. ಗೌರಿಬಿದನೂರಿನಲ್ಲಿ ಸದ್ದಿಲ್ಲದೇ ಹಸಿರು ಕ್ರಾಂತಿಗೆ ವೇದಿಕೆ ಸಿದ್ಧವಾಗಿದೆ. ಶಾಸಕ ವಿಧಾನ ಸಭೆಯ ಉಪಸಭಾಪತಿ, ಶಿವಶ೦ಕರ ರೆಡ್ಡಿ ಮರ ಗಿಡಗಳನ್ನು ಬೆಳೆಸಲು ಸ್ವತಃ ಮುಂದೆ ನಿಂತು ಕ್ರಮ ತೆಗೆದುಕೊಳ್ಳುತ್ತಿರುವುದು ಶ್ಲಾಘನೀಯ.[ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]

forest

ಈ ಬಾರಿ ಮಳೆಗಾಲಕ್ಕೆ ಮುನ್ನವೇ ಯುವಕರ ತಂಡವೊಂದು ಕಿಶೋರ್ ಎಂಬುವರ ನೇತೃತ್ವದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಲು ಸಿದ್ಧತೆ ಮಾಡಿಕೊಂಡಿದೆ. ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಬಯಲು ಸೀಮೆಯನ್ನು ಹಸಿರು ಸೀಮೆ ಮಾಡಲು ಹೊರಟವರ ಯೋಜನೆ ಮೇಲೆ ಒಂದು ನೋಟ ಇಲ್ಲಿದೆ.

MLA Shivashankar Reddy

* ಗೌರಿಬಿದನೂರು ತಾಲೂಕಿನ ಎಲ್ಲಾ ಶಾಲಾ ಆವರಣಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರೊ೦ದಿಗೆ 40,000ಸಸಿ ನೆಟ್ಟು ಮರವಾಗಿಸುವ ಯೋಜನೆ["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]
* ಮಧುಗಿರಿ ರಸ್ತೆಯಲ್ಲಿರುವ ಕುರುಡಿ ಅರಣ್ಯ ಪ್ರದೇಶದಲ್ಲಿರುವ 1200 ಎಕರೆಯಲ್ಲಿ 500 ಎಕರೆಯಷ್ಟು ಜಾಗದಲ್ಲಿದ್ದ ನೀಲಗಿರಿಯನ್ನು ತೆಗೆಸಿ, ಸ್ಥಳೀಯ ಜಾತಿಯ ಮರಗಳ ಕಾಡನ್ನು ಬೆಳೆಸಲು ಸಿದ್ಧತೆ.

* ತಾಲೂಕಿನ ಮರಳೂರು ಬಳಿ ಐ.ಐ.ಎಸ್ಸಿ, ಇಸ್ರೋ ಮತ್ತಿತರ ಸ೦ಸ್ಥೆಗಳ ಸಹಯೋಗದಲ್ಲಿ "ಜೀವ ವೈವಿಧ್ಯ ಪಾರ್ಕ್"
* ಆ೦ಧ್ರಕ್ಕೆ ಹೊ೦ದಿಕೊ೦ಡಿರುವ ಕೈಗಾರಿಕಾ ಪ್ರದೇಶದಲ್ಲಿರುವ ವಿಶ್ವೇಶ್ವರಯ್ಯನವರ ಪ್ರತಿಮೆ ಬಳಿಯ 5 ಎಕರೆ ಜಮೀನಿನಲ್ಲಿ ಸಸಿ ನೆಡುವ ಯೋಜನೆ[ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]
* ತಾಲೂಕಿನ ನಗರ ಮತ್ತು ಗ್ರಾಮಾ೦ತರ ಪ್ರದೇಶದ ರಸ್ತೆಗಳ ಎರಡೂ ಕಡೆ ಹ೦ತಹ೦ತವಾಗಿ ಸಸಿ ನೆಟ್ಟು ಮರವಾಗಿಸುವ ಯೋಜನೆ.

English summary
Chikkaballapur: A youth team led by Gauribidanur MLA Shivashankar Reddy is set for a green revolution in Gauribidanur Taluk, in Chikkaballapur district. The team is ready for sapling thousands of plants on upcoming rainy season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X