ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ : 20 ಟನ್ ಈರುಳ್ಳಿ ಲಾರಿ ಅಪಹರಿಸಿದವರು ಸಿಕ್ಕಿಬಿದ್ರು

|
Google Oneindia Kannada News

ಕೋಲಾರ, ಸೆಪ್ಟೆಂಬರ್, 03 : ಈರುಳ್ಳಿ ಬೆಲೆಯನ್ನೇ ಬಂಡವಾಳ ಮಾಡಿಕೊಂಡು 20 ಟನ್ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಅಪಹರಣ ಮಾಡಿದ್ದ ಗುಂಪಿನ ಒಬ್ಬ ಆರೋಪಿಯನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ. ಈರುಳ್ಳಿ ಲಾರಿ ಮತ್ತು ಚಾಲಕನ ಬಳಿ ಇದ್ದ 24 ಸಾವಿರ ಹಣದೊಂದಿಗೆ ಗುಂಪು ಪರಾರಿಯಾಗಿತ್ತು.

ಬಂಧಿತ ಆರೋಪಿಯನ್ನು ಮಾಲೂರು ತಾಲೂಕಿನ ನಿವಾಸಿ ಚಿನ್ನಪ್ಪ (22) ಎಂದು ಗುರುತಿಸಲಾಗಿದೆ. ಪೇಮ್ ಕುಮಾರ್ ಮತ್ತು ಪ್ರಭು ಎಂಬುವವರ ಜೊತೆ ಸೇರಿ ಚಿನ್ನಪ್ಪ ಈರುಳ್ಳಿ ಲಾರಿಯನ್ನು ಅಪಹರಣ ಮಾಡಿದ್ದ. [ಸಿಮ್ ಖರೀದಿಸಿ ಈರುಳ್ಳಿ ಉಚಿತವಾಗಿ ಪಡೆಯಿರಿ]

onion

ಘಟನೆ ವಿವರ : ಆ.31ರ ಸೋಮವಾರ ರಾತ್ರಿ ಬೆಂಗಳೂರಿನಿಂದ-ಆಂಧ್ರಪ್ರದೇಶಕ್ಕೆ 20 ಟನ್ ಈರುಳ್ಳಿ ಹೊತ್ತ ಲಾರಿ ಹೊರಟ್ಟಿತ್ತು. ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಬೈಕ್‌ನಲ್ಲಿ ಬಂದ ಚಿನ್ನಪ್ಪ ಮತ್ತು ಇತರ ಇಬ್ಬರು ಲಾರಿಯನ್ನು ಅಡ್ಡಗಟ್ಟಿದ್ದರು. [ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

ಲಾರಿ ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿಗಳು ಆತನ ಬಳಿ ಇದ್ದ 24 ಸಾವಿರ ರೂ. ಹಣ, ಮೊಬೈಲ್ ಕಿತ್ತುಕೊಂಡಿದ್ದರು. ಸ್ವಲ್ಪ ದೂರ ತೆರಳಿದ ಬಳಿಕ ಚಾಲಕನನ್ನು ಲಾರಿಯಿಂದ ಕೆಳಗೆ ತಳ್ಳಿ, ಲಾರಿಯೊಂದಿಗೆ ಪರಾರಿಯಾಗಿದ್ದರು.

ಸೆ.1ರ ಮಂಗಳವಾರ ಲಾರಿ ಚಾಲಕ ಈ ಕುರಿತು ಕೋಲಾರ ನಗರ ಪೊಲೀಸರಿಗೆ ದೂರು ಕೊಟ್ಟಿದ್ದ. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಬುಧವಾರ ಸಂಜೆ ಚಿನ್ನಪ್ಪನನ್ನು ಬಂಧಿಸಿದ್ದಾರೆ. ಆರೋಪಿಗಳು ಬಂದಿದ್ದ ಬೈಕ್‌ ನಂಬರ್‌ಅನ್ನು ಲಾರಿ ಚಾಲಕ ನೀಡಿದ್ದ. ಇದರ ಆಧಾರದ ಮೇಲೆ ಚಿನ್ನಪ್ಪ ಸಿಕ್ಕಿಬಿದ್ದಿದ್ದು, ಇತರ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಚಿನ್ನಪ್ಪನನ್ನು ಬಂಧಿಸಿದ ಪೊಲೀಸರು 17 ಸಾವಿರ ಹಣ, ಬೈಕ್, ಈರುಳ್ಳಿ ಸರಕು, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿನ್ನಪ್ಪ ಮತ್ತು ಇತರ ಆರೋಪಿಗಳ ವಿರುದ್ಧ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು.

ಅಂದಹಾಗೆ ಬೆಂಗಳೂರಿನಲ್ಲಿ ಗುರುವಾರದ ಈರುಳ್ಳಿ ಬೆಲೆ ಕಲಾಸಿಪಾಳ್ಯದಲ್ಲಿ 50 ರಿಂದ 60 ರೂ. ಮತ್ತು
ಹಾಪ್‌ಕಾಮ್ಸ್‌ನಲ್ಲಿ 69 ರೂ.ಗಳು.

English summary
A truck loaded with 20 tonnes of onion was looted by three members gang near APMC market Kolar on August 31st, 2015. Complaint registered in Kolar police station, On Wednesday police arrested one accused Chinappa (22).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X