ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶಕ್ಕೆ 24 ಗಂಟೆ ಮುನ್ನ ಕೋಡಿಶ್ರೀಗಳ ಭವಿಷ್ಯ

|
Google Oneindia Kannada News

ಅರಸೀಕೆರೆ, ಮೇ 15: ತಮ್ಮ ಒಗಟಿನ ಮೂಲಕ ಮಾರ್ಮಿಕವಾಗಿ ಭವಿಷ್ಯ ನುಡಿಯುವ ಹಾರನಹಳ್ಳಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಫಲಿತಾಂಶಕ್ಕೆ ಮುನ್ನ ಮತ್ತೊಂದು ಭವಿಷ್ಯ ನುಡಿದಿದ್ದಾರೆ.

ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ಭವಿಷ್ಯ ನುಡಿದು ರಾಜಕೀಯ ಪಕ್ಷಗಳ ಜೊತೆ ಮತದಾರನ ಮಂಡೆಯನ್ನೂ ಬಿಸಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ, ಯಾಕೆಂದರೆ ಮತಗಳು ವ್ಯಾಪಾರದ ವಸ್ತುವಾಗಿರುವುದೇ ಇದಕ್ಕೆ ಕಾರಣ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.

ಏಪ್ರಿಲ್ ಮೊದಲ ವಾರ ಧಾರವಾಡದಲ್ಲಿ ನುಡಿದಿದ್ದ ಭವಿಷ್ಯವನ್ನು ಪುನರುಚ್ಚಿಸಿದ ಕೋಡಿಶ್ರೀಗಳು, ಕೇಂದ್ರದಲ್ಲಿ ಅಸ್ಥಿರ ಸರಕಾರ ಖಾಯಂ. ಯಾವಾಗ ಮತವನ್ನು ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಖರೀದಿಸಲಾರಂಭಿಸಿದರೋ, ಅಂದೇ ಮತದಾನದ ಪಾವಿತ್ರ್ಯತೆ ಹೋಯಿತು ಎಂದಿದ್ದಾರೆ. (ಕೋಡಿಮಠಶ್ರೀ ಭವಿಷ್ಯದಲ್ಲಿ ಬದಲಾವಣೆ)

ಈ ವರ್ಷ ನಡೆಯುವ ಚುನಾವಣೆಯಲ್ಲಿ ದೇಶ ಬಯಸುತ್ತಿರುವ ಬ್ರಹ್ಮಚಾರಿಯೊಬ್ಬರು ದೇಶದ ಪ್ರಧಾನಿ ಆಗುತ್ತಾರೆಂದು ಕೊಪ್ಪಳದ ಟಣಕನಕಲ್ ಮಠದ ಶರಣಬಸವಸ್ವಾಮಿ ಶರಣರು ಭವಿಷ್ಯವಾಣಿ ನುಡಿದಿದ್ದರು. ಕಳೆದ ವರ್ಷವೇ ಇದನ್ನು ಹೇಳಿದ್ದೆ. ಈ ಬಾರಿ ಮತ್ತೆ ಅದೇ ಭವಿಷ್ಯವಾಣಿಯನ್ನು ನುಡಿಯುತ್ತಿದ್ದೇನೆಂದು ಶರಣರು ಸುರುಪುರದಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಭವಿಷ್ಯ ನುಡಿದ್ದರು. (ಬ್ರಹ್ಮಚಾರಿ ದೇಶದ ಮುಂದಿನ ಪ್ರಧಾನಿ)

ಕೋಡಿಶ್ರೀಗಳ ಭವಿಷ್ಯವಾಣಿಯ ಜೊತೆ ಹುಬ್ಬಳ್ಳಿಯ ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷರು ನುಡಿದ ಭವಿಷ್ಯ ಸ್ಲೈಡಿನಲ್ಲಿ...

ಕೋಡಿಶ್ರೀಗಳ ಮುಂದುವರಿದ ಭಾಗ

ಕೋಡಿಶ್ರೀಗಳ ಮುಂದುವರಿದ ಭಾಗ

ನಡೆವ ಹಾದಿ ಮೂರು ಭಾಗವಾದೀತು. ಮುದುಕನ ಕೋಲ ಮೇಲೆ ಕಾಗೆ ಕುಂತೀತು, ಮುತ್ತಿನ ಗಿಣಿ ಮುದುಕಾಗಿ ಮುತ್ತಾದೀತು. ಹಂತಕನ ಸುದ್ದಿ ಹರಡೀತು. ಅಂತರದಲ್ಲಿಯೇ ಹಾರೀತು, ಅಸ್ಥಿರ ಸರಕಾರ ಖಾಯಂ ಆದೀತು ಎಂದು ಒಗಟಿನ ಮೂಲಕ ಭವಿಷ್ಯ ನುಡಿದ್ದಾರೆ.

ಏನಿದರ ಅರ್ಥ

ಏನಿದರ ಅರ್ಥ

ಒಗಟಿನ ಮೂಲಕ ಹೇಳಿದ ಭವಿಷ್ಯವನ್ನು ಸಂಪೂರ್ಣವಾಗಿ ವಿವರಿಸದ ಕೋಡಿಶ್ರೀಗಳು, ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಮತದಾನ ತನ್ನ ನೈತಿಕತೆ ಕಳೆದುಕೊಂಡಿದೆ ಎಂದು ಶ್ರೀಗಳು ಭವಿಷ್ಯ ನುಡಿದ್ದಾರೆ.

ರಾಜ್ಯ ಸುಭಿಕ್ಷ

ರಾಜ್ಯ ಸುಭಿಕ್ಷ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಸಿಎಂ ಪಟ್ಟ ಎನ್ನುವುದು ಮರೀಚಿಕೆಯಾಗಲಿದೆ ಎಂದೂ ಹೇಳಿದ್ದೆ. ರಾಜ್ಯದಲ್ಲಿ ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗಲಿದೆ, ನಾಡು ಸುಭಿಕ್ಷವಾಗಲಿದೆ - ಕೋಡಿಶ್ರೀಗಳು.

NDA ಅಧಿಕಾರಕ್ಕೆ

NDA ಅಧಿಕಾರಕ್ಕೆ

ಇತರ ಪಕ್ಷಗಳ ಸಹಕಾರ ಪಡೆದು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಂಡಿತ. 250ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ಇತರ ಪಕ್ಷಗಳ ಸಹಕಾರದೊಂದಿಗೆ ಸರಕಾರ ರಚಿಸಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ - ಹುಬ್ಬಳ್ಳಿ ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷ ವಿ ಗಣೇಶ ಹೆಗಡೆ.

ರಾಜ್ಯದಲ್ಲಿ ಯಾರಿಗೆ ಎಷ್ಟು?

ರಾಜ್ಯದಲ್ಲಿ ಯಾರಿಗೆ ಎಷ್ಟು?

ಗಣೇಶ ಹೆಗಡೆ ನುಡಿದ ಭವಿಷ್ಯ ಪ್ರಕಾರ ರಾಜ್ಯದಲ್ಲಿ ಪಕ್ಷಗಳು ಗಳಿಸುವ ಸೀಟು ಇಂತಿದೆ
ಬಿಜೆಪಿ : 16 - 18
ಕಾಂಗ್ರೆಸ್ : 8 - 10
ಜೆಡಿಎಸ್ : 3 - 4

English summary
Kodimutt seer prediction on Lok Sabha election : Seer predicts none of the party will get the majority and hung parliament ahead. In Karnataka, Seer predicts BJP will get 16 to 18 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X