• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಾರಿ ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

By Srinath
|

ಗದಗ, ಫೆ.15: ಒಂದು ವಾರದ ಅಂತರದಲ್ಲಿ ಕೋಡಿಮಠ ಶ್ರೀ ಮತ್ತೊಂದು ಭವಿಷ್ಯ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷವು ತನ್ನದೇ ಸಾಮರ್ಥದಿಂದ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲವಾದರೂ ಇತರೆ ಪಕ್ಷಗಳ ನೆರವಿನೊಂದಿಗೆ ಕೇಂದ್ರದಲ್ಲಿ ನೂತನ ಸರಕಾರ ಸ್ಥಾಪಿಸಲಿದೆ ಎಂದು ಹೇಳಿದ್ದ ಹಾಸನದ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನಿನ್ನೆ ಗದಗದಲ್ಲಿ ರಾಜಕೀಯೇತರ ಭವಿಷ್ಯ ನುಡಿದಿದ್ದಾರೆ.

ಈ ಬಾರಿ ನೈಸರ್ಗಿಕ ವಿಕೋಪದ ಬಗ್ಗೆ ಮಾತನಾಡಿರುವ ಕೋಡಿಮಠ ಶ್ರೀಗಳು ಉತ್ತರಾಕಂಡದಲ್ಲಿ ಕಳೆದ ವರ್ಷ ಕಂಡುಬಂದಂತಹ ಭೀಕರ ಜಲಪ್ರಳಯ ಈ ಬಾರಿಯೂ ಕಾಡಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. [ ಕೇದಾರನಾಥಸ್ವಾಮಿಗೆ ಪೂಜೆ ಆರಂಭ; ಯಾತ್ರೆ ಇನ್ನೂ ಇಲ್ಲ ]

ಉತ್ತರ ಭಾರತದಲ್ಲಿ ನದಿ, ಸಮುದ್ರಗಳು ಉಕ್ಕಿ ಹರಿದು ಭಾರಿ ಪ್ರಮಾಣದಲ್ಲಿ ಭೂಮಿ ಮುಳುಗಡೆಯಾಗಲಿದೆ. ಇದರಿಂದ ಮರಣ ಮೃದಂಗ ಬಾರಿಸುತ್ತದೆ. ಸಾವು ನೋವು ಸಂಭವಿಸುತ್ತದೆ. ಜನರಿಗೆ ತೊಂದರೆ ಆಗಲಿದೆ ಎಂದು ಈ ಹಿಂದೆ ಹೇಳಿದ್ದೆ. ಅದರಂತೆ ಕಳೆದ ವರ್ಷ ದುರಂತ ಘಟಿಸಿತು. ಈ ವರ್ಷವೂ ಹಾಗೆಯೇ ಆಗಲಿದೆ ಎಂದು ಕೋಡಿಮಠದ ಸ್ವಾಮಿಗಳು ತಿಳಿಸಿದ್ದಾರೆ. (1200 ವರ್ಷದ ಹಿಂದೆ ಕೇದಾರನಾಥ ಸೃಷ್ಟಿ ಹೇಗಾಯ್ತು?)

ವಿಚಿತ್ರ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ:

ಈ ಸಲ ಭೂಮಿಯಿಂದ ಪ್ರಾಣಿ ಸಂಕುಲವೇ ಮೇಲೆ ಬರುತ್ತದೆ. ವಿಚಿತ್ರವಾದ ಹಾವು, ಚೇಳುಗಳು, ಕಪ್ಪೆಗಳನ್ನು ನೋಡಬೇಕಾಗುತ್ತದೆ. ಅವುಗಳು ವಿಕಾರ ರೂಪದಲ್ಲಿ ಭೂಮಿಯಿಂದ ಹೊರಬಂದು ಜನಸಾಮಾನ್ಯರಿಗೆ ತೊಂದರೆಯನ್ನುಂಟುಮಾಡುತ್ತದೆ. ಸಾವು ನೋವು ಕೂಡ ಸಂಭವಿಸುತ್ತದೆ ಎಂದು ಕೋಡಿಮಠದ ಸ್ವಾಮಿಗಳು ಭವಿಷ್ಯ ನುಡಿಸಿದ್ದಾರೆ.

English summary
Himalaya tsunami- Kodimath Seer Sri Shivananda Rajendra Swamiji has predicted that Uttarakhand tsunami that wrecked hell last year will occur this year also. Also, serpentines, snakes and scorpions will surface on the earth that damage humankind largely,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X