ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯದಶಮಿಯಂದು ಕೋಡಿಶ್ರೀ ಮತ್ತು ನಾಗಪ್ಪಜ್ಜ ನುಡಿದ ಭವಿಷ್ಯ

|
Google Oneindia Kannada News

ಧಾರವಾಡ, ರಾಣೆಬೆನ್ನೂರು, ಅ 12: ವಿಜಯದಶಮಿಯ ದಿನದಂದು ಕೋಡಿಮಠದ ಶ್ರೀಗಳು ಮತ್ತು ರಾಣಿಬೆನ್ನೂರು ತಾಲೂಕಿನ ದೇವರಗುಡ್ಡ ಕರಿಯಾಲದಲ್ಲಿ ನಾಗಪಜ್ಜ ಭವಿಷ್ಯ ನುಡಿದಿದ್ದಾರೆ.

ಧಾರವಾಡದ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಆಯೋಜಿಸಿದ್ದ ಜಂಬೂ ಸವಾರಿಗೆ ಚಾಲನೆ ನೀಡುತ್ತಾ ಕೋಡಿಮಠದ ಶ್ರೀಗಳು, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ದ ನಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೆಲವು ದಿನಗಳ ಹಿಂದೆ ಕಲಬುರ್ಗಿಯ ಯಾನಾಗುಂದಿ ಮಾತಾ ಮಾಣಿಕೇಶ್ವರಿ, ಎರಡು ರಾಷ್ಟ್ರಗಳ ನಡುವೆ ಯುದ್ದ ನಡೆದು, ಭಯೋತ್ಪಾದನೆ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಮಾತಾ ಮಾಣಿಕೇಶ್ವರಿ ಭವಿಷ್ಯ)

ಇನ್ನು ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದ ಕರಿಯಾಲದಲ್ಲಿ ಸೋಮವಾರ (ಅ 10) ದಸರಾ ಪ್ರಯುಕ್ತ ನಾಗಪ್ಪಜ್ಜ ಉರ್ಮಿ, ಗಲಾಟೆ, ಯುದ್ದದ ಭೀತಿ ಎದುರಾಗಲಿದೆ ಎಂದು ಕಾರ್ಣಿಕ ನುಡಿದಿದ್ದಾರೆ.

ಕಳೆದ ವರ್ಷವೇ ನಮ್ಮ ದೇಶಕ್ಕೆ ಯುದ್ದದ ಭೀತಿ ಎದುರಾಗಲಿದೆ ಎಂದು ಹೇಳಿದ್ದೆ, ಈಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಯುದ್ದ ಸ್ಥಿತಿ ನಿರ್ಮಾಣವಾಗಿದೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದ್ದಾರೆ.

ಕೋಡಿಶ್ರೀ ಮತ್ತು ನಾಗಪಜ್ಜ ನುಡಿದ ಭವಿಷ್ಯ ಇನ್ನೂ ಇದೆ, ಮುಂದೆ ಓದಿ.. (ಮಾಹಿತಿ: ವಿಜಯವಾಣಿ)

ವಿಜಯದಶಮಿ ಪ್ರಯುಕ್ತ ನಡೆಯುವ ಕಾರ್ಯಕ್ರಮ

ವಿಜಯದಶಮಿ ಪ್ರಯುಕ್ತ ನಡೆಯುವ ಕಾರ್ಯಕ್ರಮ

ಹೂವಿನಹಡಗಲಿ ಮೈಲಾರ ಲಿಂಗೇಶ್ವರನ ಜಾತ್ರೆಯ ವೇಳೆಯಲ್ಲಿ ಗೊರವಯ್ಯ ನುಡಿಯುವ ಕಾರ್ಣಿಕೋತ್ಸವದಂತೇ, ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದ ಕರಿಯಾಲದಲ್ಲಿ ದಸರಾ ಪ್ರಯುಕ್ತ ನಾಗಪಜ್ಜ ಉರ್ಮಿ ಕಾರ್ಣಿಕ ನುಡಿದರು. (ಚಿತ್ರದಲ್ಲಿ ಮೈಲಾರ ಲಿಂಗೇಶ್ವರ)

ಬಿಲ್ಲೇರಿ ಕಾರ್ಣಿಕ ನುಡಿಯುವ ನಾಗಪಜ್ಜ

ಬಿಲ್ಲೇರಿ ಕಾರ್ಣಿಕ ನುಡಿಯುವ ನಾಗಪಜ್ಜ

ನಾಗಪಜ್ಜ ಒಂಬತ್ತು ದಿನ ಉಪವಾಸ ಕೂತು, ಸುಮಾರು 25 ಅಡಿ ಎತ್ತರದ ಬಿಲ್ಲನ್ನೇರಿ , ನೆರೆದ ಭಕ್ತರ ಸಮ್ಮುಖದಲ್ಲಿ ದೇಶದ ಮುಂದಿನ ಆಗುಹೋಗಿನ ಬಗ್ಗೆ ಕಾರ್ಣಿಕ ನುಡಿದಿದ್ದಾರೆ. ಮೈಲಾರದಲ್ಲಿ ನುಡಿದದ್ದು ಮೊದಲನೇ ಕಾರ್ಣಿಕವಾದರೆ, ಇದು ಎರಡನೆಯದ್ದು. (ಚಿತ್ರದಲ್ಲಿ: ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವ)

ಕೋಡಿ ಶ್ರೀಗಳ ಭವಿಷ್ಯ

ಕೋಡಿ ಶ್ರೀಗಳ ಭವಿಷ್ಯ

ಎರಡು ದೇಶಗಳ ನಡುವೆ ಯುದ್ದ ನಡೆಯುವುದು ಖಚಿತ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯ ಜೊತೆಗೆ ಉಸಿರಾಡುವ ಗಾಳಿಗೂ ತೊಂದರೆ ಬರಬಹುದು. ಮಹಾದಾಯಿ ನೀರು ರಾಜ್ಯಕ್ಕೆ ಒಲಿಯಬೇಕು - ಕೋಡಿಶ್ರೀ.

ಮಾರ್ಮಿಕವಾಗಿ ನುಡಿಯುವ ಭವಿಷ್ಯ

ಮಾರ್ಮಿಕವಾಗಿ ನುಡಿಯುವ ಭವಿಷ್ಯ

'ಸಪ್ತಲೋಕ ಸದ್ದಲೇ, ಭೂಮಿ ಸಂಪಲೇ ಪರಾಕ್' ಎಂದು ನಾಗಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. ಇದರರ್ಥದಲ್ಲಿ ಏಳು ಲೋಕದಲ್ಲಿ ಅಶಾಂತಿ ತಲೆದೋರಲಿದೆ. ಗದ್ದಲ, ಗಲಾಟೆಯಾಗುವ ಸಾಧ್ಯತೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ. (ಚಿತ್ರದಲ್ಲಿ: ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವ)

ರಾಜಕೀಯ ಧ್ರುವೀಕರಣ

ರಾಜಕೀಯ ಧ್ರುವೀಕರಣ

ಸಪ್ತಲೋಕ ಅಂದರೆ ಭಾರತ, ಪಾಕ್ ಸೇರಿದಂತೆ ಸಾರ್ಕ್ ರಾಷ್ಟಗಳಲ್ಲಿ ಅಸಮಾಧಾನ ಹೆಚ್ಚಾಗಿ ಅಶಾಂತಿ ಉದ್ಬವವಾಗಬಹುದು.

ಭಕ್ತರ ವಿಶ್ಲೇಷಣೆಯೇ ಬೇರೆ

ಭಕ್ತರ ವಿಶ್ಲೇಷಣೆಯೇ ಬೇರೆ

ಕಾರ್ಣಿಕವನ್ನು ಭಕ್ತರು ಈ ರೀತಿಯಾಗಿಯೂ ವಿಶ್ಲೇಷಿಸುತ್ತಾರೆ. ಎಲ್ಲಾ ದೇವರ ಇಚ್ಚೆಯಂತೆ ದೇಶದಲ್ಲಿ ಮಳೆ, ಬೆಳೆ ಉತ್ತಮವಾಗಿ ಸುಖ ಸಂಪತ್ತು ಹೆಚ್ಚಲಿದೆ ಎಂದು ಭಕ್ತರು ವಿಶ್ಲೇಷಿಸುತ್ತಾರೆ.

English summary
Kodimath Seer and Nagapajja prediction : Chances of war between India and Pak
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X