ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಹಳ್ಳಿ ಚಂದ್ರಶೇಖರ್ ಯುಟರ್ನ್: ಮುಂದುವರೆದ ಸಾರಿಗೆ ಮುಷ್ಕರ!

|
Google Oneindia Kannada News

ಬೆಂಗಳೂರು, ಡಿ. 14: ಫ್ರೀಡಂ ಪಾರ್ಕ್‌ನಲ್ಲಿ ಕೋರ್‌ ಟಿಂ ಜೊತೆಗೆ ಚರ್ಚಿಸಿ ಮುಷ್ಕರ ವಾಪಾಸ್ ಪಡೆಯುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದ ಕೋಡಿಹಳ್ಳಿ ಚಂದ್ರಶೇಖರ್ ಯುಟರ್ನ್ ಹೊಡೆದಿದ್ದಾರೆ. ಬೆಳಗ್ಗೆಯಷ್ಟೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೋಡಿಹಳ್ಳಿ ಚಂದ್ರ ಶೇಖರ್ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ವಾಪಾಸ್ ಪಡೆಯುವುದು ಅನಿವಾರ್ಯ. ಎಲ್ಲರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ಪ್ರಕಟಣೆ ಮಾಡುತ್ತೇವೆ ಎಂದಿದ್ದರು.

ಆದರೆ ಫ್ರೀಡಂ ಪಾರ್ಕ್‌ಗೆ ಆಗಮಿಸಿದ ಬಳಿಕ ಮಾತನಾಡಿರುವ ಅವರು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಭಟನೆ ಮಾಡುತ್ತಿರುವ ಫ್ರೀಡಂ ಪಾರ್ಕ್‌ಗೆ ಬಂದು ಲಿಖಿತ ಭರವಸೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮಧ್ಯಾಹ್ನದ ಬಳಿಕ ರಾಜ್ಯಾದ್ಯಂತ ಸಾರ್ವಜನಿಕ ಬಸ್‌ಗಳು ಸಂಚಾರ ಆರಂಭಿಸುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಸರ್ಕಾರ ಹಾಗೂ ಪ್ರತಿಭಟನಾಕಾರರಿಗೆ ಜನರು ಹಿಡಿ ಶಾಪ ಹಾಕುವಂತಾಗಿದೆ.

ಮುಷ್ಕರ ಹಿಂಪಡೆಯುವುದಿಲ್ಲ

ಮುಷ್ಕರ ಹಿಂಪಡೆಯುವುದಿಲ್ಲ

ಫ್ರೀಡಂ ಪಾರ್ಕ್‌ಗೆ ಆಗಮಿಸುವುದಕ್ಕು ಮೊಡಲು ಮಾತನಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂಬ ಅರ್ಥದಲ್ಲಿ ಮಾತನಾಡಿದ್ದರು. ಜೊತೆಗೆ ಸರ್ಕಾರ ಕೂಡ ಸಾರಿಗೆ ಇಲಾಖೆ ಸಿಬ್ಬಂದಿಯ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಏಕಾಏಕಿ ಯುಟರ್ನ್ ಹೊಡೆದ ಕೋಡಿಹಳ್ಳಿ ಹಾಗು ಇತರ ಪ್ರತಿಭಟನಾಕಾರರು ಸರ್ಕಾರ ಕೊಟ್ಟಿರುವ ಭರವಸೆಗಳನ್ನು ಲಿಖಿತ ರೂಪದಲ್ಲಿ ಕೊಡಬೇಕು ಎಂದಿದ್ದಾರೆ.

ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!

ಕ್ಷಣಕ್ಕೊಂದು ನಿರ್ಧಾರ, ಹೇಳಿಕೆ

ಕ್ಷಣಕ್ಕೊಂದು ನಿರ್ಧಾರ, ಹೇಳಿಕೆ

ಪ್ರತಿಭಟನೆ ಮಾಡುತ್ತಿರುವ ಸಿಬ್ಬಂದಿ ಕ್ಷಣಕ್ಕೊಂದು ನಿರ್ಧಾರ, ಗಂಟೆಗೊಂಡು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮುಷ್ಕರದ ಕುರಿತು ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಜೊತೆಗೆ ಸರ್ಕಾರ ಈಗಾಗಲೇ 10 ರಲ್ಲಿ 9 ಬೇಡಿಕೆಗಳನ್ನು ಈಡೇರಿಸಲಿದೆ. ಅದನ್ನು ಲಿಖಿತ ರೂಪದಲ್ಲಿಯೂ ಒಡಲು ಸರ್ಕಾರ ಎಂದು ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

ಹೇಳುವುದು ಒಂದು ಮಾಡುವುದು ಮತ್ತೊಂದು

ಹೇಳುವುದು ಒಂದು ಮಾಡುವುದು ಮತ್ತೊಂದು

ಕೋಡಿಹಳ್ಳಿ ಚಂದ್ರಶೇಖರ್ ಹೇಳುವುದು ಒಂದು, ಮಾಡುವುದು ಮತ್ತೊಂದು. ಹೀಗಾಗಿ ಅವರು ಕೋಡಿಹಳ್ಳಿ ಚಂದ್ರಶೇಖರ್ ಅವರು ಒಂದು ರೀತಿಯಲ್ಲಿ ವಿಲನ್ ಆಗಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ಪ್ರತಿಷ್ಠೆಯನ್ನು ಇಟ್ಟುಕೊಂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಲಿಖಿತ ರೂಪದಲ್ಲಿ ಕೊಡುತ್ತೇವೆ

ಲಿಖಿತ ರೂಪದಲ್ಲಿ ಕೊಡುತ್ತೇವೆ

ಈಗಾಗಲೇ ಸರ್ಕಾರ ಒಪ್ಪಿಕೊಂಡಂತೆ 10 ರಲ್ಲಿ 9 ಬೇಡಿಕೆ ಈಡೇರಿಸುವ ಕುರಿತು ಸರ್ಕಾರ ಲಿಖಿತ ರೂಪದಲ್ಲಿ ಕೊಟ್ಟಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮಾಧ್ಯಮಗಳಿಗೆ ತೋರಿಸಿದರು. ಸಚಿವರಾದ ಆರ್. ಅಶೊಕ್, ಲಕ್ಷ್ಮಣ ಸವದಿ, ಬಿಎಂಸಿಟಿ ಅಧ್ಯಕ್ಷ ನಂದೀಶ್ ರಡ್ಡಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಈ ಭರವಸೆಯನ್ನು ಸರ್ಕಾರ ಕೊಟ್ಟಿದೆ. ಜೊತೆಗೆ ಇದೀಗ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ರಾಜೂ ಗೌಡ ಅವರು ಸರ್ಕಾರದ ಲಿಖಿತ ಭರವಸೆಯೊಂದಿಗೆ ಫ್ರೀಡಂಪಾರ್ಕ್‌ಗೆ ತೆರಳಿದ್ದಾರೆ.

Recommended Video

Mandya:ಕುಮಾರಸ್ವಾಮಿ ಬಿಜೆಪಿಗೆ ಬಂದು ಸಿಎಂ ಆಗೋ ಭ್ರಮೆಯಲ್ಲಿ ಇದ್ದಾರೆ-ಸಚಿವ ನಾರಾಯಣಗೌಡ ಆಕ್ರೋಶ | Oneindia Kannada

English summary
Kodihalli Chandrashekar Taken You turn at the Freedom Park with Discussing with Core team. So Transport Department Strike continued. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X