ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ, ಕಲಬುರಗಿ: ಕೋಡಿಶ್ರೀಗಳು ಭವಿಷ್ಯ ನುಡಿದಿದ್ದೇನು, ಆಗಿದ್ದೇನು?

|
Google Oneindia Kannada News

Recommended Video

ಕೋಡಿ ಶ್ರೀಗಳು ನುಡಿದ ಭವಿಷ್ಯ ನಿಜವಾಯ್ತಾ?

ಚುನಾವಣೆ, ರಾಜಕೀಯ ಸ್ಥಿತ್ಯಂತರ, ಪ್ರಾಕೃತಿಕ ವಿಕೋಪ ಮುಂತಾದ ವಿಚಾರಗಳಲ್ಲಿ ಭವಿಷ್ಯ ನುಡಿಯುವ ಖಾವಿಧಾರಿಗಳು ಯಾರು 'ಥಟ್ಟನೇ ಹೇಳಿ' ಎನ್ನುವ ಪ್ರಶ್ನೆ ಬಂದಾಗ, ಮಂಚೂಣಿಯಲ್ಲಿ ಬರುವ ಹೆಸರು ಕೋಡಿಶ್ರೀಗಳ ಭವಿಷ್ಯ.

ಮೈಲಾರ ಲಿಂಗೇಶ್ವರನ ಜಾತ್ರೆಯಲ್ಲಿ ನುಡಿಯುವ ಕಾರ್ಣಿಕ ನುಡಿಗಳೂ ಈ ವಿಚಾರದಲ್ಲಿ ಖ್ಯಾತಿಯನ್ನು ಪಡೆದಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರ, ಭವಿಷ್ಯ ನುಡಿದಿದ್ದ ಕೋಡಿಶ್ರೀಗಳಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದ್ದು ಬಹುದೊಡ್ಡ ಸುದ್ದಿಯಾಗಿತ್ತು.

ಏಳು ದಿನದೊಳಗೆ ನೊಟೀಸ್ ಗೆ ಉತ್ತರ ನೀಡುವಂತೆ ಕೋಡಿಶ್ರೀಗಳಿಗೆ ಸೂಚಿಸಲಾಗಿತ್ತು ಕೂಡಾ. ಯಾದಗಿರಿಯಲ್ಲಿ ಮಾರ್ಚ್ ಹನ್ನೊಂದರಂದು ಭವಿಷ್ಯ ನುಡಿದಿದ್ದ ಶ್ರೀಗಳು, ಪರೋಕ್ಷವಾಗಿ ಮೋದಿ ಮತ್ತೆ 'ಚೌಕೀದರ್' ಎನ್ನುವ ಮಾತನ್ನು ಹೇಳಿದ್ದರು.

ಮೂರು ಮೆಟ್ರೋ ಸಿಟಿಗಳಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್ ಧೂಳೀಪಟ ಮೂರು ಮೆಟ್ರೋ ಸಿಟಿಗಳಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್ ಧೂಳೀಪಟ

ಇವೆಲ್ಲದರ ನಡುವೆ, ಆಗಲೇ ಅಂದರೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಂಡ್ಯದಿಂದ ಸುಮಲತಾ ಮತ್ತು ಕಲ್ಬುರ್ಗಿಯಿಂದ ಡಾ. ಉಮೇಶ್ ಜಾಧವ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು.

ಸುಮಲತಾ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುತ್ತಾರಾ ಎನ್ನುವ ಕುತೂಹಲವಿತ್ತು

ಸುಮಲತಾ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುತ್ತಾರಾ ಎನ್ನುವ ಕುತೂಹಲವಿತ್ತು

ಆ ವೇಳೆ, ಮಂಡ್ಯದಿಂದ ಸುಮಲತಾ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರಾ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರಾ ಎನ್ನುವ ವಿಷಯ ಮಾತ್ರ ಇತ್ಯರ್ಥವಾಗಬೇಕಿತ್ತು. ಅದೇ ರೀತಿ, ಕಾಂಗ್ರೆಸ್ ತೊರೆಯುವ ಜಾಧವ್ ನಿರ್ಧಾರವನ್ನು ಸ್ಪೀಕರ್ ಊರ್ಜಿತಗೊಳಿಸಲಿದ್ದಾರಾ ಎನ್ನುವ ಕುತುಹಲವೂ ಪೆಂಡಿಂಗ್ ಇತ್ತು.

ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು! ಮೋದಿ ಇಳಿಸಲು ಊರೆಲ್ಲಾ ಸುತ್ತಿ ಬಂದಾಗ ತನ್ನ ಕುರ್ಚಿಯೇ ಹೋಗಿತ್ತು!

ರತ್ನಖಚಿತ ಸುವರ್ಣ ಕಿರೀಟ ಸ್ಥಿರ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ

ರತ್ನಖಚಿತ ಸುವರ್ಣ ಕಿರೀಟ ಸ್ಥಿರ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ

ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎನ್ನುವ ಭವಿಷ್ಯವನ್ನು ನುಡಿದಿದ್ದರು. ರತ್ನಖಚಿತ ಸುವರ್ಣ ಕಿರೀಟ ಎನ್ನುವುದು ಪ್ರಧಾನಮಂತ್ರಿ ಹುದ್ದೆ, ಸ್ಥಿರವಾಗಿರುತ್ತದೆ ಎಂದರೆ, ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಕೋಡಿಶ್ರೀಗಳ ಭವಿಷ್ಯವನ್ನು ವ್ಯಾಖ್ಯಾನಿಸಲಾಗಿತ್ತು.

ಸೆರಗೊಡ್ಡಿ ಮತಯಾಚಿಸಿದ್ದ ಅಂಬರೀಶ್ ಪತ್ನಿ

ಸೆರಗೊಡ್ಡಿ ಮತಯಾಚಿಸಿದ್ದ ಅಂಬರೀಶ್ ಪತ್ನಿ

'ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು.. ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು..' ಎನ್ನುವ ಒಗಟಿನ ಮೂಲಕ ಕೋಡಿಶ್ರೀಗಳು ಮಂಡ್ಯ ಚುನಾವಣೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಚುನಾವಣಾ ಪ್ರಚಾರದ ಕೊನೆಯ ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಸೆರಗೊಡ್ಡಿ ಮತಯಾಚನೆ ಮಾಡಿದ್ದರು.

ಕುಟುಂಬ ಸರಪಳಿ ತುಂಡಾತು... ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು

ಕುಟುಂಬ ಸರಪಳಿ ತುಂಡಾತು... ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು

'ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು... ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು' ಇದು ಸುಮಲತಾ ಜಯಸಾಧಿಸಲಿದ್ದಾರೆ ಎನ್ನುವ ಭವಿಷ್ಯ ಎಂದೇ ವ್ಯಾಖ್ಯಾನಿಸಲಾಗಿತ್ತು. ಇದರ ಜೊತೆಗೆ, ಸುಮಲತಾ ಕೂಡಾ, ಕೋಡಿಶ್ರೀಗಳಿಗೆ ನಮಸ್ಕಾರ ಮತ್ತು ಅಭಿನಂದನೆ ಸಲ್ಲಿಸಿದ್ದರು.

ಹೋಗು... ಚುನಾವಣೆನೂ ಗೆಲ್ತೀಯಾ.. ಮಿನಿಸ್ಟರ್ ಕೂಡಾ ಆಗುತ್ತೀಯಾ

ಹೋಗು... ಚುನಾವಣೆನೂ ಗೆಲ್ತೀಯಾ.. ಮಿನಿಸ್ಟರ್ ಕೂಡಾ ಆಗುತ್ತೀಯಾ

ಇನ್ನು, ಕಲ್ಬುರ್ಗಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಡಾ. ಉಮೇಶ್ ಜಾಧವ್, ಕೋಡಿಶ್ರೀಗಳನ್ನು ಅರಸೀಕರೆ ಮಠದಲ್ಲಿ ಭೇಟಿಯಾಗಿದ್ದರಂತೆ. 'ಹೋಗು... ಚುನಾವಣೆನೂ ಗೆಲ್ತೀಯಾ.. ಮಿನಿಸ್ಟರ್ ಕೂಡಾ ಆಗುತ್ತೀಯಾ' ಎಂದು ಹರಸಿದ್ದರು ಎನ್ನುವ ಸುದ್ದಿ, ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಹರಿದಾಡುತ್ತಿದೆ. ಜಾಧವ್ ಕೇಂದ್ರ ಸಚಿವರಾಗುತ್ತಾರಾ ಕಾದು ನೋಡಬೇಕಿದೆ..

English summary
Kodi Mutt Dr. Rajendra Seer earlier prediction on Mandya, Kalaburagi LS constituency, came out perfectly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X