ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ 2,621 ಎಚ್‍ಐವಿ ಸೋಂಕಿತರು!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 1: ಕೊಡಗು ಜಿಲ್ಲೆಯಲ್ಲಿ ಒಟ್ಟು 2,31,333 ಜನರನ್ನು ಪರೀಕ್ಷಿಸಲಾಗಿದ್ದು, 2,621 ಎಚ್ ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಸಾಮಾನ್ಯ ವರ್ಗದವರಲ್ಲಿ 2,405 ಹಾಗೂ ಗರ್ಭಿಣಿಯರಲ್ಲಿ 216 ಎಚ್ ಐವಿ ಸೋಂಕಿತರು ಇದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.

"ಎಚ್ ಐವಿ ತಡೆಗೆ ಕೈಜೋಡಿಸಿ" ಘೋಷಣೆಯಡಿ ಡಿಸೆಂಬರ್ 1 ರಂದು "ವಿಶ್ವ ಏಡ್ಸ್ ದಿನ-2016" ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಆಯೋಜಿಸಿದ್ದೇವೆ. 1988ರಿಂದ "ವಿಶ್ವ ಏಡ್ಸ್" ದಿನಾಚರಣೆಯನ್ನು ಪ್ರಾರಂಭಿಸಲಾಯಿತು. ವರ್ಷಂಪ್ರತಿ ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನವನ್ನು ಡಿಸೆಂಬರ್ 1ರಂದು ಆಚರಿಸಲಾಗುತ್ತದೆ ಎಂದರು.[ಏಡ್ಸ್ ಮನೋರೋಗಕಾರಿ, ಅರಿತರೆ ಸಹಕಾರಿ]

Kodagu recorded 2,621 HIV positive cases

ಪ್ರಮುಖವಾಗಿ ಎಚ್ ಐವಿ ಹರಡುವುದನ್ನು ಹೇಗೆ ತಡೆಯಬಹುದು, ಏಡ್ಸ್ ನಿರ್ದಿಷ್ಟ ಲಕ್ಷಣಗಳು, ಎಚ್ ಐವಿಗೆ ಚಿಕಿತ್ಸೆ ಇನ್ನಿತರ ಮಾರ್ಗೋಪಾಯಗಳನ್ನು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು. ಕೊಡಗು ಜಿಲ್ಲೆಯಲ್ಲಿ 2002ರಿಂದ 2016 ಅಕ್ಟೋಬರ್ ವರೆಗೆ ಒಟ್ಟು 2,31,333 ಜನರನ್ನು ಪರೀಕ್ಷಿಸಲಾಗಿತ್ತು. ಕ್ಷಯ ರೋಗವು ಎಚ್ ಐವಿ ಸೋಂಕಿತರಲ್ಲಿ ಸಾಮಾನ್ಯ ಸಂಭವನೀಯ ಸೋಂಕು.[ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ]

2009ರಲ್ಲಿ ಶೇ 25ರಷ್ಟು ಇತ್ತು. 2015ರಲ್ಲಿ ಶೇ 5ಕ್ಕೆ ಇಳಿಮುಖಗೊಂಡು ಒಟ್ಟು 108 ಕ್ಷಯ ರೋಗಿಗಳಲ್ಲಿ ಎಚ್ ಐವಿ ಸೋಂಕನ್ನು ಪತ್ತೆ ಹಚ್ಚಲಾಗಿದೆ. ಕೊಡಗು ಜಿಲ್ಲೆಯಲ್ಲಿ 685 ಮಹಿಳಾ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಸುಮಾರು 123 ಎಂಎಸ್‍ಎಂ (ಪುರುಷ-ಪುರುಷರೊಂದಿಗೆ ಲೈಂಗಿಕ ಸಂಪರ್ಕವಿರುವವರು) ಇದ್ದಾರೆ ಎಂದು ಡಾ.ಶಿವಕುಮಾರ್ ತಿಳಿಸಿದ್ದಾರೆ.

English summary
2,621 HIV cases recorded in Kodagu district. 2,31,333 people tested, among them 2,621 HIV positive cases found, said by Dr Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X