ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಕೊಟ್ಟ 'ಕೊಡಗಿಗೆ' ಮಿಡಿದ ಕರುನಾಡ ಹೃದಯ: ಧನ್ಯವಾದ ಕರ್ನಾಟಕ!

|
Google Oneindia Kannada News

ಕೊಡಗಿನ ಜನತೆ ಕಂಡು ಕೇಳರಿಯದ ನೈಸರ್ಗಿಕ ವಿಕೋಪ ಯಾವ ಜಾತಿ, ಧರ್ಮ ಎನ್ನುವುದನ್ನು ನೋಡದೇ ಗುಡಿಸಿ ಗುಂಡಾಂತರ ಮಾಡಿದೆ. ಅದೇ ರೀತಿ, ಪ್ರವಾಹ ಪೀಡಿತ ಸಂತ್ರಸ್ತರು ಯಾವ ಜಾತಿ, ಧರ್ಮ ಎನ್ನುವುದನ್ನು ನೋಡದೆ ಕರ್ನಾಟಕದ ಜನತೆ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯನ್ನು ಗೆಲ್ಲಿಸಿದ್ದಾರೆ. ಮನುಷ್ಯ ಮನುಷ್ಯ ನಡುವಿನ ಸಂಬಂಧ ಎಲ್ಲದಕ್ಕಿಂತ ದೊಡ್ಡದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕೊಡಗಿನ 'ನಮ್ಮವರು' ತೊಂದರೆಯಲ್ಲಿದ್ದಾರೆ ಎನ್ನುವುದನ್ನು ಅರಿತ ಕರುನಾಡಿನ ಜನತೆ, ಅಲ್ಲಿನ ಜನರ ಕಷ್ಟಕ್ಕೆ ಅಭೂತಪೂರ್ವಕವಾಗಿ ಸ್ಪಂದಿಸಿದ್ದಾರೆ. ಎಷ್ಟರ ಮಟ್ಟಿಗೆ ಕರ್ನಾಟಕದ ಜನತೆ ಸಂತ್ರಸ್ತರ ಮತ್ತು ನಿರಾಶ್ರಿತರ ಕೂಗಿಗೆ ಓಗೂಡಿದ್ದಾರೆಂದರೆ, ಆಹಾರ ಸಾಮಗ್ರಿಯ ದಾಸ್ತಾನು ಸಾಕಷ್ಟು ಬಂದಿದೆ. ಯಾವುದರ ಅವಶಕ್ಯತೆ ತುರ್ತಾಗಿ ಬೇಕಾಗಿದೆ ಎನ್ನುವುದನ್ನು ತಿಳಿಸುತ್ತೇವೆ ಎಂದು ಖುದ್ದು ಕೊಡಗು ಜಿಲ್ಲಾ ಉಸ್ತುವಾರಿ ಸಾ.ರಾ. ಮಹೇಶ್ ಹೇಳಿದ್ದಾರೆ.

ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!

ಸಂತ್ರಸ್ತರಿಗೆ ಆಹಾರ ಸಾಮಗ್ರಿ, ಮೆಡಿಸಿನ್, ಹೊದಿಕೆ, ನ್ಯಾಪ್ಕಿನ್ ಮುಂತಾದವವು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಹರಿದುಬರುತ್ತಿರುವುದು ಒಂದೆಡೆಯಾದರೆ, ಪರಿಹಾರ ಕಾರ್ಯಕ್ಕೆ ಯುವಕರ ತಂಡಗಳು ಕೊಡಗಿನಲ್ಲಿ ಬೀಡುಬಿಟ್ಟಿವೆ. ವಿವಿಧ ಸಂಘಟನೆಯ ಸದಸ್ಯರು, ರಕ್ಷಣಾ ಕಾರ್ಯ ನಡೆಸುತ್ತಿರುವ ಮಿಲಿಟರಿ, ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸಾಥ್ ನೀಡುತ್ತಿದ್ದಾರೆ.

ಕಣ್ಣೆದುರೇ ತಾವು ಹುಟ್ಟಿಬೆಳೆದ ಮನೆ ಭೂತಾಯಿಯ ಒಡಲು ಸೇರಿಕೊಂಡಿದ್ದನ್ನು ಇನ್ನೂ ಜೀರ್ಣಿಸಲು ಸಾಧ್ಯವಾಗದೇ ಕಣ್ಣೀರಿಡುತ್ತಿರುವ ಕುಟುಂಬಗಳ ನೋವು, ಯಾವ ಶತ್ರುವಿಗೂ ಬೇಡ. ಇನ್ನೆರಡು ವಾರದಲ್ಲಿ ನಿಗದಿಯಾಗಿದ್ದ ಮಗಳ ಮದುವೆಗೆ ಖರೀದಿಸಿದ್ದ ಲಕ್ಷಾಂತರ ರೂಪಾಯಿ ಬೆಲೆಯ ಒಡವೆ, ಜವಳಿ ಇತ್ಯಾದಿಗಳು , ನೀರಿನಲ್ಲಿ ತೇಲಿಕೊಂಡು ಹೋಗುತ್ತಿರಬೇಕಾದರೆ ಪೋಷಕರ ಹೃದಯ ಅದೆಷ್ಟು ಬಿಕ್ಕಿಬಿಕ್ಕಿ ಅಳುತ್ತಿರಬಹುದು.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ರಕ್ಷಣಾ ಕಾರ್ಯಾಚರಣೆಯಲ್ಲಿ ಜನರನ್ನು ಸೇನೆ ರಕ್ಷಿಸಿದರೂ, ಮನೆಮಠ ಕಳೆದುಕೊಂಡವರು ಅಂಡರ್ವೇರ್ ನಿಂದ ಹಿಡಿದು, ಎಲ್ಲದನ್ನೂ ಹೊಸದಾಗಿ ಖರೀಸಿದಬೇಕಾಗಿದೆ. ನಿರಾಶ್ರಿತ ಕೇಂದ್ರದಲ್ಲಿರುವ ಸಂತ್ರಸ್ತರು, ಈ ಜಲಪ್ರಳಯದ ಶಾಕ್ ನಿಂದ ಹೊರಬಂದಿಲ್ಲ. ಅಲ್ಲಿರುವ ಎಲ್ಲಾ ಕುಟುಂಬಗಳಿಗೆ, ಆಹಾರವನ್ನು ನೀಡುತ್ತಾ, ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿರುವ ಮಹಿಳಾ ಸಂಘಟನೆಯ ಸದಸ್ಯೆಯರಿಗೆ ರಾಜ್ಯದ ಜನತೆ ಧನ್ಯವಾದ ಹೇಳಬೇಕಿದೆ. ಯಾರ್ಯಾರು ಸಂತ್ರಸ್ತರಿಗೆ ನೆರವಾಗಿದ್ದಾರೆ, ಕೆಲವೊಂದು ಪ್ರಮುಖಾಂಶಗಳು (ಜನಪ್ರತಿನಿಧಿ, ಸೆಲೆಬ್ರೆಟಿಗಳನ್ನು ಹೊರತು ಪಡಿಸಿ)

ಸದ್ಯದ ಮಟ್ಟಿಗೆ ಸರಿಪಡಿಸಲಾಗದಷ್ಟು ಅಸ್ತವ್ಯಸ್ತಗೊಂಡಿರುವ ಕೊಡಗು

ಸದ್ಯದ ಮಟ್ಟಿಗೆ ಸರಿಪಡಿಸಲಾಗದಷ್ಟು ಅಸ್ತವ್ಯಸ್ತಗೊಂಡಿರುವ ಕೊಡಗು

ಸುಮಾರು 4,100 sq.km ವಿಸ್ತೀರ್ಣದ ಕೊಡಗು ಸದ್ಯದ ಮಟ್ಟಿಗೆ ಸರಿಪಡಿಸಲಾಗದಷ್ಟು ಅಸ್ತವ್ಯಸ್ತಗೊಂಡಿದೆ. ರಾಜ್ಯ ಸರಕಾರದ ಸಹಕಾರದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು, ಪಿಎಂ ಮೋದಿಗೆ ಇಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸುತ್ತೇನೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ. ಇಷ್ಟು ದಿನವಾದ ಮೇಲೆ ಇಲ್ಲಿಗೆ ಬರುತ್ತಿದ್ದೀರಾ ಎಂದು ಸಂತ್ರಸ್ತರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Array

Array

>ಕುಕ್ಕೇ ಸುಬ್ರಮಣ್ಯ ದೇವಾಲಯದಿಂದ ಎರಡು ಕೋಟಿ. ಅತಿವೃಷ್ಟಿ ಕಮ್ಮಿಯಾಗಲೆಂದು ಆಗಸ್ಟ್ 21ರಂದು ಸಿಹಿಯಾಳ ಅಭಿಷೇಕ.
>ದಾವಣಗೆರೆಯ ಚನ್ನಬಸಪ್ಪ & ಸನ್ಸ್ ಮಾಲೀಕರಿಂದ ಹದಿನೈದು ಲಕ್ಷ ರೂಪಾಯಿ ಉಡುಪು, ಹೊದಿಕೆ, ಕುಡಿಯುವ ನೀರು, ಸ್ಯಾನಿಟರಿ ಪ್ಯಾಡ್, ನೈಟಿ, ಸ್ವೆಟ್ಟರ್, ಬೇಬಿ ಡೈಪರ್ ಇತ್ಯಾದಿಯನ್ನು ಶನಿವಾರ (ಆ 18) ರವಾನಿಸಲಾಗಿದೆ.
>ದಾವಣಗೆರೆ ಜಿಲ್ಲಾ ವರ್ತಕರು, ಸಹಕಾರ ಸಂಘ, ನಾಗರೀಕರು, ಸಹಕಾರೀ ಬ್ಯಾಂಕ್ ನಿಂದ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು

>ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ರಾಜ್ಯ ವಿವಿ, ಪದವಿಪೂರ್ವ ಕಾಲೇಜುಗಳ ಒಕ್ಕೂಟದ ನೌಕರರಿಂದ ಒಂದು ದಿನ ವೇತನ (ಅಂದಾಜು ಐದು ಕೋಟಿ)

>ಇಸ್ಕಾನ್ ದೇವಾಲಯದಿಂದ ಒಂದು ಲಕ್ಷ ಚಪಾತಿ ಮತ್ತು ಇತರ ಆಹಾರ ಸಾಮಗ್ರಿ ಈಗಾಗಲೇ ರವಾನೆ. ಪ್ರತೀ ದಿನ ಮೂವತ್ತು ಸಾವಿರ ಜನರಿಗೆ ಊಟದ ವ್ಯವಸ್ಥೆ

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಉತ್ತರಾದಿ ಮಠದಿಂದ ದೇಣಿಗೆ

ಉತ್ತರಾದಿ ಮಠದಿಂದ ದೇಣಿಗೆ

>ಮೈಸೂರಿನ ಡಿ ಎಫ್ ಆರ್ ಎಲ್ ಮತ್ತು ಅಹಾರ ಸಂಶೋಧನಾ ಕೇಂದ್ರದಿಂದ ಪ್ರತೀ ದಿನ ಒಂದು ಟನ್ ಆಹಾರ ಪೂರೈಕೆ

>ಉತ್ತರಾದಿ ಮಠದಿಂದ ದೇಣಿಗೆ

>ಯುವ ತೇಜಸ್ಸು ಟ್ರಸ್ಟಿನಿಂದ ಕೊಡಗು ಜಿಲ್ಲೆಯ ಜೋಡುಪಾಳದಲ್ಲಿ ರಕ್ಷಣಾ ಕಾರ್ಯಕ್ಕೆ ಸಹಾಯ, 75ಸಾವಿರ ರೂಪಾಯಿ ದೇಣಿಗೆ

>ಸೇನಾ ಕುಟುಂಬದ ಹಿನ್ನೆಲೆಯುಳ್ಳ ನೂರಾರು ಸ್ಥಳೀಯ ಯುವಕರು ಕಳೆದ ಕೆಲವು ದಿನಗಳಿಂದ ಮನೆ ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಯುವಕರು ಹತ್ತು ಇಪ್ಪತ್ತು ಜನರ ತಂಡ ಮಾಡಿಕೊಂಡು ಸಂತ್ರಸ್ತರನ್ನು ರಕ್ಷಿಸುತ್ತಿದ್ದಾರೆ.

>ರಾಣೆಬೆನ್ನೂರು ತಾಲೂಕು ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್, ಜಯ ಕರ್ನಾಟಕ ಸಂಘಟನೆಯಿಂದ, ಬಿಸ್ಕಟ್, ಟೂತ್ ಪೇಸ್ಟ್, ಬಟ್ಟೆ, ಬೇಬಿ ಸೋಪ್ ಮತ್ತಿತರರ ವಸ್ತುಗಳ ರವಾನೆ.

22 ಕೋಟಿ ರೂ.ಗಿಂತ ಹೆಚ್ಚು ಹಣ ಮುಖ್ಯಮಂತ್ರಿ ಪ್ರಕೃತಿ ವಿಕೋಪ ನಿಧಿಗೆ

22 ಕೋಟಿ ರೂ.ಗಿಂತ ಹೆಚ್ಚು ಹಣ ಮುಖ್ಯಮಂತ್ರಿ ಪ್ರಕೃತಿ ವಿಕೋಪ ನಿಧಿಗೆ

>ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ 1.88 ಲಕ್ಷ ಶಿಕ್ಷಕರ ಒಂದು ದಿನದ ವೇತನ, 22 ಕೋಟಿ ರೂ.ಗಿಂತ ಹೆಚ್ಚು ಹಣ ಮುಖ್ಯಮಂತ್ರಿ ಪ್ರಕೃತಿ ವಿಕೋಪ ನಿಧಿಗೆ.

>ಭೀಕರ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ 10 ವರ್ಷದ ಬಾಲಕಿಯೋರ್ವಳು ಮಾನವೀಯ ಕಳಕಳಿ ಪ್ರದರ್ಶಿಸಿದ್ದಾಳೆ.ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹತ್ತು ವರ್ಷದ ಬಾಲಕಿ, ಕೂಡಿಟ್ಟ ಹಣ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತರಿಗೆ ರವಾನೆ.

>ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಿಂದ ಹದಿನೇಳು ಸಾವಿರ ಲೀಟರ್ ಹಾಲು ರವಾನೆ.

>ಹಾಸನ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕತ್, 200 ಕ್ವಿಂಟಲ್ ಅಕ್ಕಿ ಮತ್ತು ತೊಗರಿ ಬೇಳೆ, ಒಂದು ಸಾವಿರ ಬಾಕ್ಸ್ ಕುಡಿಯುವ ನೀರು

ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದಿಂದ ದೇಣಿಗೆ

ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದಿಂದ ದೇಣಿಗೆ

>ಮೈಸೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಅವಶ್ಯ ಸಾಮಗಿಗಳ ಸ್ವೀಕಾರ ಕೇಂದ್ರ, ಸಾರ್ವಜನಿಕರಿಂದ ಉತ್ತಮ ಸ್ಪಂದನೆ

>ಭಾರತೀಯ ವೈದ್ಯಕೀಯ ಸಂಘಟನೆಯ ಕರ್ನಾಟಕ ಶಾಖೆಯಿಂದ ವೈದ್ಯಕೀಯ ನೆರವು ,20 ಲಕ್ಷದವರೆಗಿನ ವೈದ್ಯಕೀಯ ನೆರವು ರವಾನೆ.

>ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದಿಂದ 300ಕ್ಕೂ ಅಧಿಕ ಅಕ್ಕಿ ಮೂಟೆ, 700ಕ್ಕೂ ಅಧಿಕ ಹೊದಿಕೆ, 700 ಲೀ. ಗುಡ್‌ ಲೈಫ್ ಹಾಲು ಮತ್ತು ಹಾಲಿನ ಪುಡಿ

ಕೊಡವ ಸಮಾಜದ ಕಚೇರಿಗೆ ಹರಿದುಬರುತ್ತಿರುವ ಸಾಮಗ್ರಿಗಳು

ಕೊಡವ ಸಮಾಜದ ಕಚೇರಿಗೆ ಹರಿದುಬರುತ್ತಿರುವ ಸಾಮಗ್ರಿಗಳು

>ಬಾಗೇಪಲ್ಲಿಯ ಸಾಮಾಜಿಕ ತಾಣದ ವಾಟ್ಸಾಪ್ ಗ್ರೂಪ್ ನಿಂದ ಚಪಾತಿ, ಆಹಾರ ಧಾನ್ಯ, ಬಿಸ್ಕತ್ ಮತ್ತು ತುರ್ತು ಅಗತ್ಯ ವಸ್ತುಗಳ ರವಾನೆ.

>ವಿವಿಧ ಮಾಧ್ಯಮ ಸಂಸ್ಥೆಗಳ ಮನವಿಗೆ ಉತ್ತಮ ರೆಸ್ಪಾನ್ಸ್ ಬೆಂಗಳೂರು ವಸಂತನಗರದಲ್ಲಿರುವ ಕೊಡವ ಸಮಾಜದ ಕಚೇರಿಗೆ ಹರಿದುಬರುತ್ತಿರುವ ಸಾಮಗ್ರಿಗಳು.

>ಕೊಲ್ಲೂರು ದೇವಾಲಯದಿಂದ ಸಿಎಂ ಪರಿಹಾರ ನಿಧಿಗೆ 25ಲಕ್ಷ ದೇಣಿಗೆ

English summary
Residents, industrialists, various organization, companies are showing their solidarity with the people of Kodagu district by making generous donations of relief material. Large number of people donating food items, toiletries, first aid kits, blankets, clothes, cash and other materials for the flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X