ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ಕೋಸಳ್ಳಿ ಜಲಪಾತಕ್ಕೆ ಹೋಗಿಬನ್ನಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಬೇಸಿಗೆಯಲ್ಲಿ ತಂಪಾದ ಪ್ರದೇಶಕ್ಕೆ ಪ್ರವಾಸ ಹೋಗುವ ಆಲೋಚನೆ ನಡೆಸುತ್ತಿವವರು 'ಕೋಸಳ್ಳಿ ಅಬ್ಬಿ' ಜಲಪಾತಕ್ಕೆ ಬರಬಹುದು. ಇದು ಉಡುಪಿ ಜಿಲ್ಲೆಯ ಅತ್ಯಂತ ದೊಡ್ಡ ಜಲಪಾತವಾಗಿದ್ದು, ಇದನ್ನು ದಕ್ಷಿಣದ ಜೋಗ ಎಂದು ಕರೆಯುತ್ತಾರೆ.

ಕುಂದಾಪುರದ ಭಾಷೆಯಲ್ಲಿ 'ಅಬ್ಬಿ' ಎಂದರೆ ತಾಯಿ ಎಂದರ್ಥ. ಈ ಜಲಪಾತವನ್ನು ತಾಯಿಗೆ ಹೋಲಿಸಿ ಕೋಸಳ್ಳಿ ಅಬ್ಬಿ ಫಾಲ್ಸ್ ಎಂದು ಕರೆಯುವುದು ವಿಶೇಷ. ಪಶ್ಚಿಮ ಘಟ್ಟದ ಹಸಿರು ಸೊಬಗಿನ ನಡುವೆ ಕಂಗೊಳಿಸುತ್ತಿರುವ ಈ ಜಲಪಾತವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ನಿತ್ಯ ಬರುತ್ತಾರೆ. [ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ]

koosalli falls

ಈ ಜಲಪಾತವನ್ನು ಕೋಸಳ್ಳಿ ತೂದಳ್ಳಿ ಎಂದು ಕರೆಯಲಾಗುತ್ತದೆ. ಪ್ರಕೃತಿಯ ರಮ್ಯತೆಗೆ ಅಪೂರ್ವ ನಿದರ್ಶನ ಎಂಬಂತೆ ಇರುವ ಜಲಪಾತ ಚಾರಣಿಗರಿಗೆ, ಪ್ರವಾಸಿಗರಿಗೆ ಅಂತ್ಯತ ಸೂಕ್ತವಾದ ಸ್ಥಳಗಿದೆ. ಇದೊಂದು ಅದ್ಭುತ ಪ್ರವಾಸಿ ಸ್ಥಳ ಎಂಬುದು ಇಲ್ಲಿಗೆ ಪ್ರವಾಸ ಬಂದವರ ಮಾತು. [ಕಪಿಲ ತೀರದಲ್ಲಿರುವ ಶಿಶಿಲೇಶ್ವರದ ಬಗ್ಗೆ ತಿಳಿಯಿರಿ]

ಜಲಪಾತದ ವಿಶೇಷತೆಗಳು : ಈ ಜಲಪಾತದ ಸುತ್ತಮುತ್ತ 6 ಸಾವಿರಕ್ಕೂ ಅಧಿಕ ಔಷಧೀಯ ಸಸ್ಯಗಳಿವೆ. ಇಲ್ಲಿ ತಂಪಾದ ವಾತಾವರಣವಿದ್ದು ಮನಸ್ಸಿಗೆ ಮುದ ನೀಡುತ್ತದೆ. ಜಲಪಾತದ ನೀರಿನ ನಿನಾದ ಕಿವಿಗೆ ಇಂಪು ನೀಡುತ್ತದೆ. ಬಂಡೆಕಲ್ಲುಗಳ ನಡುವೆ ಇಳಿಯುವ ಜಲಧಾರೆಯ ತಂಪು ನೀರಲ್ಲಿ ಸ್ನಾನ ಮಾಡುವ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಒಂದು ಎಚ್ಚರಿಕೆ ಇಳಿಯುವ ಮುನ್ನ ಸ್ಥಳೀಯರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಿ. [ಬೇಕಲ ಕೋಟೆಗೆ ಪ್ರವಾಸ ಹೋಗಬಹುದು]

falls

ಎಲ್ಲಿದೆ ಜಲಪಾತ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರೂರು ಬಳಿ ಈ ಜಲಪಾತವಿದೆ. ಮಂಗಳೂರಿನಿಂದ 143 ಕಿ.ಮೀ ದೂರವಾಗುತ್ತದೆ. ಮಂಗಳೂರಿನಿಂದ ಉಡುಪಿ, ಅಲ್ಲಿಂದ ಕುಂದಾಪುರದ ಶಿರೂರಿನ ಚೆಕ್‌ಪೋಸ್ಟ್‌ ತಲುಪಬೇಕು. ಅಲ್ಲಿಂದ ಪೂರ್ವಾಭಿಮುಖವಾಗಿ ಕೋಸಳ್ಳಿ ದಾರಿಯಲ್ಲಿ ಸುಮಾರು 10 ಕಿ.ಮೀ. ವಾಹನದಲ್ಲಿ ಸಾಗಬೇಕು. ಅಲ್ಲಿಂದ 3 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಹೋಗಬೇಕು.

udupi
English summary
Koosalli Falls near Shiroor of Kundapur taluk, Udupi is one of the tourist spots that is unique in its attraction, especially during the rainy season. One has to visit here and feel the beauty of this place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X