ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರಿನ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಅವರು ಟೊಯೋಟ ಕಂಪೆನಿಯ ಲ್ಯಾಂಡ್‌ ಕ್ರೂಸರ್‌ ಪ್ರಾಡೊ ಕಾರು ಬಳಸಲಿದ್ದಾರೆ ಎಂಬುದು ಸದ್ಯದ ಸುದ್ದಿ.

ಕೆಎ 03, ಎಂವೈ 4545 ನೋಂದಣಿ ಸಂಖ್ಯೆಯ ಕಾರು ಈಗ ನಡೆಯುತ್ತಿರುವ ಚರ್ಚೆಯ ಕೇಂದ್ರಬಿಂದು. 73 ವರ್ಷದ ಯಡಿಯೂರಪ್ಪ ಅವರು ರಾಜ್ಯ ಪ್ರವಾಸಕ್ಕಾಗಿ ಸುಮಾರು 1 ಕೋಟಿ ಬೆಲೆಯ ಈ ಕಾರು ಖರೀದಿ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿ ಹಬ್ಬಿತ್ತು. ಆ ನಂತರ ಅದರ ಬಗ್ಗೆ ಚರ್ಚೆ ಆರಂಭವಾಗಿದೆ. [ಅರಮನೆ ಮೈದಾನದಲ್ಲಿ ಯಡಿಯೂರಪ್ಪ ಹೇಳಿದ್ದೇನು?]

ಯಡಿಯೂರಪ್ಪ ಅವರ ಪರಮಾಪ್ತರಾದ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಈ ಕಾರನ್ನು ನೀಡಿದ್ದಾರೆ. ಇದು ಯಡಿಯೂರಪ್ಪ ಅವರು ಖರೀದಿ ಮಾಡಿರುವ ಕಾರಲ್ಲ. ಈ ಬಗ್ಗೆ ನಿರಾಣಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಕಾರಿನ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

ಬಿ.ಎಸ್.ಯಡಿಯೂರಪ್ಪ ಅವರು ಏಪ್ರಿಲ್ 14ರಂದು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದೆ ಅವರು ರಾಜ್ಯ ಪ್ರವಾಸ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅವರ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ನಿರಾಣಿ ಅವರು ಈ ಕಾರನ್ನು ನೀಡಿದ್ದಾರೆ.

ಯಡಿಯೂರಪ್ಪ ಪ್ರತಿಕ್ರಿಯೆ : ಕಾರಿನ ಬಗ್ಗೆ ವಿವಾದ ಉಂಟಾಗಿರುವ ಹಿನ್ನಲೆಯಲ್ಲಿ ಶನಿವಾರ ಪತ್ರಿಕ್ರಿಯೆ ಕೊಟ್ಟಿರುವ ಯಡಿಯೂರಪ್ಪ ಅವರು 'ನಾನು ರಾಜ್ಯದಾದ್ಯಂತ ಬರ ಪ್ರವಾಸಕ್ಕೆ ರೈಲಿನಲ್ಲಿ ಪ್ರಯಾಣ ಮಾಡುತ್ತೇನೆ. ಮುರುಗೇಶ್ ನಿರಾಣಿ ಕೊಟ್ಟ ಕಾರನ್ನು ಬಳಸುವುದಿಲ್ಲ. ಹತ್ತಿರದ ಜಿಲ್ಲೆಗಳಿಗೆ ಪ್ರವಾಸ ಮಾಡುವಾಗ ಮಾತ್ರ ಕಾರು ಬಳಸುತ್ತೇನೆ. ನನಗೆ ಮೊದಲಿನಿಂದಲೂ ರೈಲಿನಲ್ಲೇ ಪ್ರಯಾಣ ಮಾಡಿ ಅಭ್ಯಾಸ. ರೈಲಿನಲ್ಲಿ ಪ್ರಯಾಣ ಮಾಡೋದು ಆರೋಗ್ಯಕ್ಕೂ ಒಳ್ಳೆಯದು' ಎಂದು ಹೇಳಿದರು.

ಅಂದಹಾಗೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಬ್ಲೋ ವಾಚ್ ವಿವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳ ಒತ್ತಾಯಕ್ಕೆ ಮಣಿಸಿದ್ದ ಸಿದ್ದರಾಮಯ್ಯ ಅವರು ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡಿದ್ದರು. [ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]

ಬರ ಪ್ರವಾಸಕ್ಕೆ ಕೋಟಿ ಬೆಲೆಯ ಕಾರು

ಬರ ಪ್ರವಾಸಕ್ಕೆ ಕೋಟಿ ಬೆಲೆಯ ಕಾರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಟೊಯೋಟ ಕಂಪೆನಿಯ ಲ್ಯಾಂಡ್‌ ಕ್ರೂಸರ್‌ ಪ್ರಾಡೊ ಕಾರು ಬಳಸಲಿದ್ದಾರೆ ಎಂಬುದು ಸದ್ಯದ ಸುದ್ದಿ. ಕಾಂಗ್ರೆಸ್ ಬರ ಪೀಡಿತ ಜಿಲ್ಲೆಗಳಿಗೆ ಪ್ರವಾಸ ಮಾಡಲು ಕೋಟಿ ರೂ. ಬೆಲೆಬಾಳುವ ಕಾರು ಬೇಕೆ? ಎಂದು ಪ್ರಶ್ನೆ ಮಾಡುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ಕಾರಿನ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದು ಈಗ ಖರೀದಿ ಮಾಡಿದ ಕಾರಲ್ಲ

ಇದು ಈಗ ಖರೀದಿ ಮಾಡಿದ ಕಾರಲ್ಲ

ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ನಂತರ ಖರೀದಿ ಮಾಡಿದ ಕಾರು ಇದಲ್ಲ. ಯಡಿಯೂರಪ್ಪ ಅವರ ಪರಮಾಪ್ತರಾದ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಈ ಕಾರನ್ನು ನೀಡಿದ್ದಾರೆ. ಕೆಎ 03 ಎಂವೈ 4545 ಸಂಖ್ಯೆಯ ಕಾರನ್ನು ನಿರಾಣಿ ಶುಗರ್ಸ್‌ ಲಿಮಿಟೆಡ್‌ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದು, 2016ರ ಜ. 22ರಂದು ಬೆಂಗಳೂರು ಪೂರ್ವ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ.

ಎಲ್ಲಾ ಸೇರಿ ಕಾರಿನ ಬೆಲೆ 1.15 ಕೋಟಿ

ಎಲ್ಲಾ ಸೇರಿ ಕಾರಿನ ಬೆಲೆ 1.15 ಕೋಟಿ

ಕಾರ್ ವಿವಾದದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಮುರುಗೇಶ್ ನಿರಾಣಿ ಅವರು, 'ಯಡಿಯೂರಪ್ಪ ಅವರಿಗೆ ಜನವರಿ ತಿಂಗಳಿನಲ್ಲಿಯೇ ಕಾರು ಕೊಟ್ಟಿದ್ದೆ ಎಂದು ಹೇಳಿದ್ದಾರೆ. ಕಾರಿನ ಬೆಲೆ 96 ಲಕ್ಷ. ವಿಮೆ, ನೋಂದಣಿ ಮುಂತಾದವುಗಳು ಸೇರಿ ಅವರ ಮೌಲ್ಯ 1.15 ಕೋಟಿ. ರೂ.' ಎಂದು ಅವರು ಹೇಳಿದ್ದಾರೆ.

ಮುರುಗೇಶ್ ನಿರಾಣಿ ಹೇಳುವುದೇನು?

ಮುರುಗೇಶ್ ನಿರಾಣಿ ಹೇಳುವುದೇನು?

'73 ವರ್ಷದ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಈ ಕಾರಿನ ಆಸನಗಳು ಆರಾಮದಾಯಕವಾಗಿವೆ. ಹೆಚ್ಚು ಆಯಾಸವಾಗದಂತೆ, ಸುರಕ್ಷಿತವಾಗಿ ಪ್ರಯಾಣ ಮಾಡುವ ಉದ್ದೇಶದಿಂದ ಕಾರನ್ನು ನೀಡಿದ್ದೇನೆ. ಇದರ ಮೂಲಕ ಒಂದೇ ದಿನದಲ್ಲಿ ಹೆಚ್ಚಿನ ಪ್ರದೇಶಗಳಿಗೆ ಭೇಟಿ ಕೊಡಲು ಅನುಕೂಲವಾಗುತ್ತದೆ' ಎಂದು ನಿರಾಣಿ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

'ಕಾರನ್ನು ಉಡುಗೊರೆ ಕೊಟ್ಟಿಲ್ಲ'

'ಕಾರನ್ನು ಉಡುಗೊರೆ ಕೊಟ್ಟಿಲ್ಲ'

'ಈ ಕಾರನ್ನು ನಾನು ಉಡುಗೊರೆಯಾಗಿ ಯಡಿಯೂರಪ್ಪ ಅವರಿಗೆ ಕೊಟ್ಟಿಲ್ಲ. ಕಾರು ನಮ್ಮ ಸಕ್ಕರೆ ಕಾರ್ಖಾನೆಗೆ ಸೇರಿದ್ದು. ಯಡಿಯೂರಪ್ಪ ಅವರು ಅಗತ್ಯ ಇರುವಷ್ಟು ದಿನ ಬಳಸುತ್ತಾರೆ. ಬೇಡ ಎನಿಸಿದಾಗ ಮರಳಿಸುತ್ತಾರೆ' ಎಂದು ನಿರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.

ಬ್ರಿಜೇಶ್ ಕಾಳಪ್ಪ ಫೇಸ್ ಬುಕ್ ಪುಟ

ಎಐಸಿಸಿ ವಕ್ತಾರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಅವರು ಕಾರಿನ ಬಗ್ಗೆ ಫೇಸ್‌ ಬುಕ್‌ನಲ್ಲಿ ಬರೆದಿದ್ದಾರೆ.

ಕಾರಿನ ಬಗ್ಗೆ ಕಾಂಗ್ರೆಸ್ ಟೀಕೆ

ಕಾಂಗ್ರೆಸ್ ಈ ಕಾರಿನ ಬಗ್ಗೆ ಟೀಕೆ ಮಾಡಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka BJP president B.S.Yeddyurappa now on the news with his new car a Land Cruiser, which costs about Rs 1 crore. Party clarified that the luxury vehicle has been loaned to Yeddyurappa by his loyalist Murugesh Nirani.
Please Wait while comments are loading...