ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?

|
Google Oneindia Kannada News

ಬೆಂಗಳೂರು, ಜನವರಿ 05 : ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಿಸಿದೆ. ಜನವರಿ 5ರಿಂದ ರಾಜ್ಯಾದ್ಯಂತ ನೂತನ ದರ ಜಾರಿಗೆ ಬಂದಿದೆ. ಲೀಟರ್ ಮೊಸರಿನ ದರವನ್ನು 2 ರೂ. ಹೆಚ್ಚಿಸಲಾಗಿದೆ.

ಪ್ರಸ್ತುತ ಇರುವ ಪ್ಯಾಕಿಂಗ್ ವಸ್ತುಗಳ ದಾಸ್ತಾನು ಮುಗಿಯುವ ತನಕ ಹಾಲಿನ ಪ್ಯಾಕೆಟ್‌ಗಳ ಮೇಲೆ ಹಳೆಯ ದರ ಮುದ್ರಿತವಾಗಿರುತ್ತದೆ. ಆದರೆ, ಜನವರಿ 5ರಿಂದಲೇ ನೂತನ ದರ ಜಾರಿಯಲ್ಲಿರುತ್ತದೆ ಎಂದು ಕೆಎಂಎಫ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. [ಹೊಸವರ್ಷದ ಶುಭಾಶಯ, ಹಾಲಿನ ದರ 4 ರು. ಏರಿಕೆ!]

ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆಯಾ ಹೋಟೆಲ್‌ಗಳ ನಿರ್ವಹಣೆ ಆಧಾರದ ಮೇಲೆ 1 ರಿಂದ 2 ರೂ. ದರ ಹೆಚ್ಚಳವಾಗಬಹುದು ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಅವರು ತಿಳಿಸಿದ್ದಾರೆ.

kmf

ಪರಿಷ್ಕೃತ ಹಾಲಿನ ದರ ಪ್ರಮುಖ ನಗರಗಳಲ್ಲಿ

ಬೆಂಗಳೂರು : ಟೋನ್ಡ್ (33 ರೂ.), ಶುಭಂ ಸ್ಟ್ಯಾಂಡರ್ಡ್ (39 ರೂ.), ಸಮೃದ್ಧಿ (42 ರೂ.), ಸ್ಪೆಷಲ್ (39 ರೂ.), ಮೊಸರು 500 ಗ್ರಾಂ (20 ರೂ.) [ಲೀಟರ್ ಹಾಲಿಗೆ 30 ರು. ಕೊಟ್ಟರೆ ಸಾಕು: ರೇವಣ್ಣ]

ತುಮಕೂರು : ಟೋನ್ಡ್ (33), ಶುಭಂ ಸ್ಟ್ಯಾಂಡರ್ಡ್ (39), ಸಮೃದ್ಧಿ (42 ), ಸ್ಪೆಷಲ್ (39 ), ಮೊಸರು (20 ರೂ.)

ದಕ್ಷಿಣ ಕನ್ನಡ : ಟೋನ್ಡ್ 34, ಶುಭಂ ಸ್ಟ್ಯಾಂಡರ್ಡ್ (40), ಸಮೃದ್ಧಿ (42), ಮೊಸರು (19 ರೂ)

ಧಾರವಾಡ : ಟೋನ್ಡ್ (34), ಶುಭಂ ಸ್ಟ್ಯಾಂಡರ್ಡ್ (39), ಸ್ಪೆಷಲ್ (39), ಮೊಸರು (20)

ಬೆಳಗಾವಿ : ಟೋನ್ಡ್ (34), ಶುಭಂ ಸ್ಟ್ಯಾಂಡರ್ಡ್ (40), ಸಮೃದ್ಧಿ (39)

English summary
Karnataka Milk Federation (KMF) hiked milk prices by Rs 4 per liter. New price come to effect from January 5, 2016. Here is fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X