ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಣಮಟ್ಟದ ಹಾಲು, ಉತ್ಪನ್ನಗಳನ್ನು ತಯಾರಿಸುವಲ್ಲಿ ಸೈ ಎನಿಸಿಕೊಂಡ KMF

|
Google Oneindia Kannada News

ಬೆಂಗಳೂರು, ಜುಲೈ 24 : ದೇಶದಲ್ಲಿಯೇ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೈ ಎನಿಸಿಕೊಂಡಿದೆ.

ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮವು ನೀಡುವ ಉತ್ಕೃಷ್ಟ ಗುಣಮಟ್ಟದ 'ಕ್ವಾಲಿಟಿ ಮಾರ್ಕ್‌' ಪ್ರಮಾಣಪತ್ರವು ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ (ಕೆಎಂಎಫ್) ಡೇರಿಗಳಿಗೆ ದೊರೆತಿದೆ.

KMF gets 'Quality Mark' Certificate for safe and quality of milk and products

ಮಹಾಮಂಡಳಕ್ಕೆ ಸೇರಿದ ಬೆಂಗಳೂರು, ಶಿವಮೊಗ್ಗ, ಮಂಡ್ಯ ಡೇರಿಗಳಿಗೆ ಹಾಗೂ ಮದರ್ ಡೇರಿ, ಯಲಹಂಕ ಮತ್ತು ಚನ್ನರಾಯಪಟ್ಟಣದ ಆತ್ಯಾಧುನಿಕ ಘಟಕಗಳಿಗೆ ಈ ಪ್ರಮಾಣಪತ್ರ ಸಿಕ್ಕಿದೆ.

ಕೆಎಂಎಫ್ ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನಕೆಎಂಎಫ್ ನಂದಿನಿಯಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ

ದೆಹಲಿಯ ಕೃಷಿ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದ್ದರು.

ಮಹಾಮಂಡಳದ ಹಿರಿಯ ನಿರ್ದೇಶಕರಾದ ನರಸಿಂಹರೆಡ್ಡಿ, ಗೋವಿಂದೇಗೌಡ, ಡಾ.ಗುರುಲಿಂಗಯ್ಯ, ಹನುಮೇಶ್, ಡಾ.ಜಿ.ಟಿ.ಗೋಪಾಲ್, ಬಿ.ನಟರಾಜ್ ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದರು.

ಸಹಕಾರಿ ಡೇರಿಗಳಲ್ಲಿ ಉತ್ತಮ ನಿರ್ವಹಣೆ ಮಾಡಿ, ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವುದನ್ನು ಪರಿಗಣಿಸಿ 'ಕ್ವಾಲಿಟಿ ಮಾರ್ಕ್‌'ನೀಡಲಾಗಿದೆ.

ದೇಶದ ಎಲ್ಲ ರಾಜ್ಯಗಳ ಸಹಕಾರಿ ಡೇರಿಗಳು 'ಕ್ವಾಲಿಟಿ ಮಾರ್ಕ್‌'ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಆದರೆ, ಕರ್ನಾಟಕದ ಡೇರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿವೆ.

English summary
Karnataka Milk Federation gets "Quality Mark" Certificate for safe and quality of milk and products. Dairying and Fisheries has supported the National Dairy Development Board(NDDB) developed initiative of “Quality Mark” Award Scheme for dairy Cooperatives to promote and encourage enhancement of safety, quality and hygiene of milk and milk products manufactured by dairy cooperatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X