ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲು ಉತ್ಪಾದಕರಿಗೆ ಕೆಎಂಎಫ್‌ ಶಾಕ್: 2 ರೂ. ಕಡಿತ

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಸಂಘ ಹಾಗೂ ಅನೇಕ ಒಕ್ಕೂಟಗಳು ಸೇರಿ ಹಾಲಿನ ದರದಲ್ಲಿ 2 ರೂ. ಕಡಿತ ಮಾಡಿವೆ.

ಸರ್ಕಾರವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಆದರೆ ಹಾಲಿನ ಉತ್ಪಾದನೆ ಹೆಚ್ಚಾದರೆ ನಿರ್ವಹಣೆಯ ತೊಡಕನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿವೆ.

'ಹಾಲು ಮಾರಾಟಕ್ಕೆ ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿ ಬಳಸಿ''ಹಾಲು ಮಾರಾಟಕ್ಕೆ ಪ್ಲಾಸ್ಟಿಕ್ ಬದಲು ಗಾಜಿನ ಬಾಟಲಿ ಬಳಸಿ'

ಬೆಂಗಳೂರು ಹಾಲು ಒಕ್ಕೂಟದಲ್ಲಿ 2 ರೂ. ಕಡಿತ ಮಾಡಲಾಗಿದೆ. ಕೆಲವು ಒಕ್ಕೂಟಗಳು ಪ್ರತಿ ಲೀಟರ್‌ಗೆ 1.50-2 ರೂ ವರೆಗೆ ದರ ಕಡಿತ ಮಾಡಿವೆ. ಆದರೆ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಇಳಿಕೆಯಾಗುವುದಿಲ್ಲ.

KMF cut down Rs 2 per liter on milk purchasing

ರೈತರಿಗೆ ದರ ಕರಿಮೆಯಾದರೆ ಅದರ ಲಾಭ ಗ್ರಾಹಕರಿಗೆ ನೀಡುವಂತಾಗಬೇಕು, ಆದರೆ ಒಕ್ಕೂಟಗಳು ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೈತರಿಗೂ ನಷ್ಟ ಇತ್ತ ಖರೀದಿಸುವವರಿಗೂ ಇದರ ಲಾಭ ಸಿಗದಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಹಾಲು ಉತ್ಪಾದನೆ ಹೆಚ್ಚಳವಾಗುತ್ತಿದೆ. ಮೇ-ಜೂನ್ ತಿಂಗಳಲ್ಲಿ ಅಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಸಂಗ್ರಹಿಸಿ ಇಡಬೇಕು ಇಲ್ಲವೇ ಮಾರಾಟ ಮಾಡಬೇಕಾಗಿದೆ.

English summary
Milk federations under Karnataka Milk Federations have cut down on purchase of milk from farmers by Rs.1.50 to Rs.2 per liter from June 1. The federation has claimed that increasing milk production forced to do it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X