ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ.ಜೆ. ಜಾರ್ಜ್ ಕಡೆಯಿಂದ ಭೂ ಕಬಳಿಕೆ ಪ್ರಯತ್ನ: ಹಿರೇಮಠ್ ಆರೋಪ

ಬೆಂಗಳೂರಿನ ಪಟ್ಟಂದೂರು ಅಗ್ರಹಾರದಲ್ಲಿನ ಸುಮಾರು 3 ಎಕರೆ 23 ಗುಂಟೆಯಷ್ಟು ಜಾಗವನ್ನು ಕಬಳಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಮ್ಮ ಪ್ರಭಾವ ಬೀರುತ್ತಿದ್ದಾರೆಂದು ಎಸ್.ಆರ್. ಹಿರೇಮಠ್ ಆರೋಪಿಸಿದ್ದಾರೆ.

|
Google Oneindia Kannada News

ಹುಬ್ಬಳ್ಳಿ, ಮೇ 31: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು, ತಮ್ಮ ಪ್ರಭಾವ ಬಳಸಿ ಭೂ ಅಕ್ರಮ ಎಸಗಿದ್ದಾರೆಂದು ನಿರ್ದಿಷ್ಟ ಸರ್ವೇ ನಂಬರಿನ ಜಮೀನೊಂದನ್ನು ಅಕ್ರಮವಾಗಿ ಕಬಳಿಸಲು ಹುನ್ನಾರ ನಡೆಸಿದ್ದಾರೆಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬೆಂಗಳೂರಿನ ಪಟ್ಟಂದೂರು ಅಗ್ರಹಾರ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 43ರ 3 ಎಕರೆ 23 ಗುಂಟೆಯಷ್ಟು ಭೂಮಿಯನ್ನು ಕಬಳಿಸಲು ಕೆ.ಜೆ. ಜಾರ್ಜ್ ಒಡೆತನದ ಪ್ರಿಸ್ಟೇಜ್ ಕಂಪನಿ ಯೋಜಿಸಿದೆ. ಈ ಹಿಂದೆ, ಜಾಯ್ ಐಸ್ ಕ್ರೀಂ ಕಂಪನಿಗೆ ನೀಡಲಾಗಿದ್ದ ಈ ಭೂಮಿಯನ್ನು ಪ್ರಿಸ್ಟೇಜ್ ಕಂಪನಿಯು ತನ್ನ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ನಡೆಸಿದೆ. ಇದಕ್ಕೆ ಕೆ.ಜೆ. ಜಾರ್ಜ್ ಅವರ ಪ್ರಭಾವದ ಬಳಕೆಯೂ ಆಗುತ್ತಿದೆ'' ಎಂದು ಅವರು ತಿಳಿಸಿದರು.

KJ George misusing his power to grab a land: SR Hiremath alleges

''ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಅವರು ಆಗ್ರಹಿಸಿದರು.

English summary
Samaja Parivarthana Samsthe's chief S.R. Hiremath has alleged that Karnataka minister K.J.George is using his powers to grab a land near Patandooru village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X