ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.23ರಿಂದ ಮೂರು ದಿನ ಕಿತ್ತೂರು ಉತ್ಸವ, ಅದ್ಧೂರಿ ಆಚರಣೆ: ಗೋವಿಂದ ಕಾರಜೋಳ

|
Google Oneindia Kannada News

ಬೆಂಗಳೂರು, ಅ.1: ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯೋತ್ಸವದ ನೆನಪಿಗಾಗಿ ಬೆಳಗಾವಿಯ ಕಿತ್ತೂರಿನಲ್ಲಿ ಅಕ್ಟೋಬರ್ 23,24 ಮತ್ತು 25 ರಂದು ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಈ ವೇಳೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಉತ್ಸವವನ್ನು ಕಿತ್ತೂರಿನಲ್ಲಿಯೇ ಆಚರಿಸಲಿದ್ದು, ನಾಳೆ ನಗರದ ಟೌನ್ ಹಾಲ್‌ನಲ್ಲಿ ವೀರ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುತ್ತಾರೆ ಎಂದರು.

ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜ್ಯೋತಿ ಯಾತ್ರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ತಲುಪಿ ಆಯಾ ಜಿಲ್ಲಾಡಳಿತದಿಂದ ಪೂಜೆ ನೆರವೇರಿಸಲಾಗುತ್ತದೆ. ಅಲ್ಲದೇ ಮಾರ್ಗದುದ್ದಕ್ಕೂ ಎಲ್ಲಾ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಯೋದರಿಗೂ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ:

ಇನ್ನೂ ಭಾರತ್ ಜೋಡೋ ಯಾತ್ರೆ ವಿಚಾರವಾಗೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, "ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ ಅದಕ್ಕಾಗಿ ರಾಹುಲ್ ಗಾಂಧಿ ಹೊಸ ಹೊಸ ಪ್ರಯೋಗವನ್ನು ಮಾಡುತ್ತಿದ್ದಾರೆ, ಅವರ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ, ಸುರಕ್ಷತೆಯ ದೃಷ್ಟಿಯಿಂದ ನಮ್ಮ ಸರ್ಕಾರದಿಂದ ಭದ್ರತೆಯನ್ನು ಕೊಡುತ್ತವೆ," ಎಂದರು.

Kittur utsava 2022: Three days gand Kitturu utsava from oct 23: Minister Govinda Karajola

ಗುಂಡ್ಲುಪೇಟೆಯಲ್ಲಿ ಬ್ಯಾನರ್ ಹರಿದು ಹಾಕಿದ್ದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಕನ್ನಡದಲ್ಲಿ ಬ್ಯಾನರ್ ಹಾಕದ ಹಿನ್ನೆಲೆ ಕನ್ನಡಾಭಿಮಾನಿಗಳು ಹಾಗೇ ಮಾಡಿರಬೇಕು. ಮಾತೃ ಭಾಷೆ ಅಂದರೆ ಎಲ್ಲಾರಿಗೂ ಅಭಿಮಾನ ಇರುತ್ತದೆ. ಅದಕ್ಕಾಗಿ ಹಾಗೇ ಮಾಡಿರಬಹುದು. ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆ ತರದ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು. ಕಾಂಗ್ರೆಸ್‌ನವರಿಗೆ ಬಿಜೆಪಿಯನ್ನು ದೂರುವುದು ಬಿಟ್ಟರೆ ಬೇರೆ ಉದ್ಯೋಗ ಇಲ್ಲ. 60 ವರ್ಷದ ಸಾಧನೆ ಹೇಳಿಕೊಳ್ಳಲು ಇಲ್ಲದ ಕಾರಣ ದೂರುತ್ತಾರೆ ಎಂದರು.

ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಯಾವುದೇ ಎಫೆಕ್ಟ್ ಆಗಲು ಸಾಧ್ಯವಿಲ್ಲ. ಮೋದಿಯವರನ್ನ ಕಟ್ಟಿ ಹಾಕಲು ರಾಹುಲ್ ಗಾಂಧಿ ಸರಿ ಸಮಾನವಾದ ನಾಯಕರಲ್ಲ. ಇವರ ಪಾದಯಾತ್ರೆಗೆ ಬಂದವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲ, ಏನು ಮಾತನಾಡುತ್ತಾರೆ ಎಂದ ನೋಡಲು ಬಂದವರು. ಬಂದವರೆಲ್ಲಾ ಕಾಂಗ್ರೆಸ್ ಮತಗಳಲ್ಲ. 6 ತಿಂಗಳ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾತ್ರ ಅಲ್ಲ, ರಾಜ್ಯಾದ್ಯಂತ ಪುಡಿ ರೌಡಿಗಳು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲ್ಲ, ಬರುವಂತಹ ಕೆಲಸವನ್ನು ಅವರು ಮಾಡಿಲ್ಲ ಎಂದರು.

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಎಣ್ಣೆ ಸೀಗೇಕಾಯಿ ಇದ್ದಂತೆ. ಎಣ್ಣೆ, ಸೀಗೇಕಾಯಿ ಸೇರಲು ಸಾಧ್ಯವಿಲ್ಲ, ಅವರನ್ನ ಬೇರೆಯವರು ಸೇರಿಸಲು ನೋಡ್ತಾರೆ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದು ಮಾತಿದೆ 36 ಅಂಕಿ ಅಂತ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅಂದ್ರೆ 36. 36 ಅಂದ್ರೆ ಎರಡು ಮುಖ ಸೇರಲು ಸಾಧ್ಯವಿಲ್ಲ. ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಒಂದೇ ಕುರ್ಚಿಯಲ್ಲಿ ಇಬ್ಬರು ಕೂರಲು ಸಾಧ್ಯವಿಲ್ಲ. ಇಬ್ಬರ ಸಿದ್ದಾಂತವೂ ಬೇರೆ ಬೇರೆ ಎಂದರು.

ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮೋಸ ಮಾಡಿದೆ:

ಮಲ್ಲಿಕಾರ್ಜುನ ಖರ್ಗೆಯವರು ಹನ್ನೊಂದು ಬಾರಿ ಗೆದ್ದರೂ ಕಾಂಗ್ರೆಸ್ ಅವರನ್ನು ಸಿಎಂ ಮಾಡಲಿಲ್ಲ. ಕಾಂಗ್ರೆಸ್ ಮುಳುಗುವ ಹಡಗು, ಅವಸಾನದ ಅಂಚಿನಲ್ಲಿ ಕಾಂಗ್ರೆಸ್ ಇದೆ. ಖರ್ಗೆಯವರನ್ನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದರೂ ಇದರಿಂದ ದಲಿತರಿಗೆ ಸಮಾಧಾನವೂ ತರಲ್ಲ, ಖುಷಿಯೂ ತರಲ್ಲ. ಕಾಂಗ್ರೆಸ್‌ಗೆ ದಲಿತರ ಮೇಲೆ ಕಾಳಜಿ ಇಲ್ಲ. ಈಗಲಾದರೂ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಣೆ ಮಾಡಲಿ ಎಂದು ನಾನು ಕಾಂಗ್ರೆಸ್‌ಗೆ ಸವಾಲು ಹಾಕುತ್ತೇನೆ. ದಲಿತ ವೋಟ್ ಮೇಲೆ ಕಾಂಗ್ರೆಸ್ 60 ವರ್ಷ ಆಳ್ವಿಕೆ ಮಾಡಿದೆ. ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದ ಮೇಲೆ ನಮ್ಮ ಜನ ಬಿಜೆಪಿ ಕಡೆ ಬರುತ್ತಿದ್ದಾರೆ. ಈಗ ದಲಿತ ಸಮುದಾಯ ಕಾಂಗ್ರೆಸ್ ನಂಬಲು ಸಾಧ್ಯವಿಲ್ಲ ಎಂದು ಕಾರಜೋಳ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

English summary
Water Resources Minister Govinda Karajol said that the Kittur utsava will be celebrated in a grand manner on October 23, 24 and 25 in Kittur, Belgaum district to commemorate the victory of the heroic Queen Kittur Chennamma against the British.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X