ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಕೇಂದ್ರ ಸರ್ಕಾರದ ಘೋಷಣೆ ಮಾಡಿರುವ ಕಿಸಾನ್ ರೈಲು ಕರ್ನಾಟಕದಲ್ಲಿಯೂ ಸಂಚಾರ ನಡೆಸಲಿದೆ. ಈಗಾಗಲೇ ಆರಂಭವಾಗಿರುವ ದೇಶದ ಮೊದಲ ಕಿಸಾನ್ ರೈಲು ನವದೆಹಲಿ ತಲುಪಿದೆ.

ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಕಿಸಾಸ್ ರೈಲು ಸಂಚಾರದ ಬಗ್ಗೆ ಮಾಹಿತಿ ನೀಡಿದೆ. ಕೃಷಿ ಉತ್ಪನ್ನಗಳನ್ನು ಕಡಿಮ ಖರ್ಚಿನಲ್ಲಿ ರಾಜ್ಯಗಳಿಗೆ ಸಾಗಾಟ ಮಾಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ.

ಭಾರತೀಯ ರೈಲ್ವೆಯ ಕ್ಲೋನ್ ರೈಲು ಯೋಜನೆ ಬಗ್ಗೆ ತಿಳಿಯಿರಿ ಭಾರತೀಯ ರೈಲ್ವೆಯ ಕ್ಲೋನ್ ರೈಲು ಯೋಜನೆ ಬಗ್ಗೆ ತಿಳಿಯಿರಿ

19/9/2020 ರಿಂದ 17/10/2020ರವರೆಗೆ ಕಿಸಾನ್ ರೈಲು ಮೈಸೂರು, ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ನಡುವೆ ಸಂಚಾರ ನಡೆಸಲಿದೆ. ರೈಲು ಪ್ರತಿ ಶನಿವಾರದಂದು ಬೆಂಗಳೂರಿನಿಂದ ಸಂಚಾರ ನಡೆಸಲಿದೆ.

ಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆ

Kisan Rail Train Service In Karnataka Schedule

ರೈಲ್ವೆಯು ನೀಡಿರುವ ಮಾಹಿತಿ ಅನ್ವಯ 22/9/2020 ರಿಂದ 20/10/2020ರವರೆಗೆ ಹಜರತ್ ನಿಜಾಮುದ್ದೀನ್ ಮತ್ತು ಬೆಂಗಳೂರು ನಡುವೆ ಕಿಸಾನ್ ವಿಶೇಷ ರೈಲು ಸಂಚಾರ ನಡೆಸಲಿದೆ. ಪ್ರತಿ ಮಂಗಳವಾರದಂದು ನಿಜಾಮುದ್ದೀನ್ ನಿಲ್ದಾಣದಿಂದ ರೈಲು ಹೊರಡಲಿದೆ.

ರೈಲ್ವೆ ಸಾಧನೆ; ಹಾಸನದಿಂದ ಹೌರಾಕ್ಕೆ 17 ಟನ್ ಶುಂಠಿ ಸಾಗಣೆ ರೈಲ್ವೆ ಸಾಧನೆ; ಹಾಸನದಿಂದ ಹೌರಾಕ್ಕೆ 17 ಟನ್ ಶುಂಠಿ ಸಾಗಣೆ

ರೈಲು ಮಾರ್ಗ : ಕೆಎಸ್‌ಆರ್‌ ಬೆಂಗಳೂರಿನಿಂದ ಹೊರಡುವ ಕಿಸಾನ್ ರೈಲು ಮೈಸೂರು, ಹಾಸನ, ಅರಸೀಕೆರೆ, ಕಡೂರು, ಹರಿಹರ, ದಾವಣಗೆರೆ, ಹುಬ್ಬಳ್ಳಿ ಬೆಳಗಾವಿ, ಮೀರಜ್ ಪುಣೆ, ಭೋಪಾಲ್, ಝಾನ್ಸಿ ಮೂಲಕ ಹಜರತ್ ನಿಜಾಮುದ್ದೀನ್ ತಲುಪಲಿದೆ.

ದೇಶದ ಯಾವುದೇ ಮೂಲೆಯಲ್ಲಿಯೂ ಕೃಷಿ ಉತ್ಪನ್ನಗಳು ಇದ್ದರೆ ಅದನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಕಿಸಾನ್ ರೈಲು ಯೋಜನೆ ಜಾರಿಗೆ ತಂದಿದೆ. 2020ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು.

Recommended Video

Ragini ಪ್ರೀತಿಯ ಮನೆಯನ್ನು ಮಾರಾಟಕ್ಕಿಟ್ಟ ಪೋಷಕರು | Oneindia Kannada

ದಕ್ಷಿಣ ಭಾರತದಿಂದ ಮೊದಲ ಕಿಸಾನ್ ರೈಲು ಆಂಧ್ರ ಪ್ರದೇಶದ ಅನಂತಪುರದಿಂದ 332 ಟನ್‌ಗಳಷ್ಟು ತಾಜಾ ಹಣ್ಣು, ತರಕಾರಿಯನ್ನು ಹೊತ್ತು ದೆಹಲಿಗೆ ತಲುಪಿದೆ. ಆಗಸ್ಟ್ 7ರಂದು ದೇಶದ ಮೊದಲ ಕಿಸಾನ್ ರೈಲು ಮಹಾರಾಷ್ಟ್ರದ ದೇವಳಾಯಿಂದ ಬಿಹಾರದ ದಾನಾಪುರಕ್ಕೆ ಸಂಚಾರ ನಡೆಸಿತ್ತು.

English summary
South western railway said that Kisan rain will run in Karnataka from 19/9/2020. Train will run from Bengaluru to Hazrat Nizamuddina here is the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X