ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಾದರೆ ಪ್ರಧಾನಿ ಮೋದಿಯನ್ನು ಗುಂಡಿಕ್ಕಿ ಸಾಯಿಸಿ: ಬೇಳೂರು ಗೋಪಾಲಕೃಷ್ಣ ಉದ್ದಟತನ

|
Google Oneindia Kannada News

Recommended Video

ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಬೇಳೂರು ಗೋಪಾಲಕೃಷ್ಣ | Oneindia Kannada

ಬೆಂಗಳೂರು, ಮಾರ್ಚ್ 5: ಪುಲ್ವಾಮಾ ಘಟನೆಯನ್ನು ಇಡೀ ದೇಶ ಖಂಡಿಸಿದೆ. ಯಾರೂ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯವರ ಬಗ್ಗೆ ಕೆಲವರು ಮಾತನಾಡುತ್ತಾರೆ. ಅಂತವರು ಈ ದೇಶದಲ್ಲಿ ಇರಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಹೊರಟವರು ಈ ದೇಶದಲ್ಲಿ ಇರಬಾರದು ಎಂದು ಬಿಜೆಪಿಯನ್ನು ಉಲ್ಲೇಖಿಸುತ್ತಾ, ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣ

ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ ಹೋಗುವವರನ್ನು, ನಿಮಗೆ ತಾಕತ್ ಇದ್ದರೆ, ನಿಮ್ಮ ಮೋದಿಯವರನ್ನು ಮೊದಲು ಗುಂಡಿಕ್ಕಿ ಸಾಯಿಸಿ. ಹಾಗೆ ಮಾಡಿದರೆ ಈ ದೇಶದಲ್ಲಿ ಬೇರೆ ಯಾರನ್ನೂ ಸಾಯಿಸುವ ಅಗತ್ಯವಿಲ್ಲ ಎನ್ನುವ ವಿವಾದಕಾರಿ ಹೇಳಿಕೆಯನ್ನು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರುಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರು

ಈ ಬಗ್ಗೆ ವಿಡಿಯೋ ತುಣುಕು ಸಮೇತ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಘಟಕ, ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆಯ್ಕೆಯಾಗಿರುವ ಪ್ರಧಾನಿಯೊಬ್ಬರನ್ನು ಗುಂಡಿಕ್ಕಿ ಸಾಯಿಸಿ ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಬೇಳೂರು ಗೋಪಾಲಕೃಷ್ಣ ನೀಡಿದ್ದಾರೆ.

ಪ್ರಧಾನಿಯವರನ್ನು ಸಾಯಿಸಿ ಎನ್ನುವವರು ದೇಶಕ್ಕೆ ಅಪಾಯಕಾರಿ ಮನುಷ್ಯನಾಗುತ್ತಾರೆ. ಇಂತವರ ವಿರುದ್ದ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಕೇಂದ್ರ ಗೃಹಸಚಿವಾಲಯ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡಿದೆ.

ಫೆಬ್ರವರಿ ನಾಲ್ಕರಂದು ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ ನೀಡಿದ್ದ ಹೇಳಿಕೆಯನ್ನು, ಬಿಜೆಪಿ ಈಗ ಟ್ವೀಟ್ ಮಾಡಿದೆ.

 Kill PM Modi, Congress leader Beluru Gopalakrishna controversial statement

'ಯಡಿಯೂರಪ್ಪ ಅವರು ಯಾವುದೇ ಚಿಕಿತ್ಸೆ ಪಡೆದುಕೊಳ್ಳಲು ಕೇರಳಕ್ಕೆ ಹೋಗಿಲ್ಲ, ಬದಲಾಗಿ ಮಾಟ, ಮಂತ್ರ ಮಾಡಿಸಲು ಶೋಭಾ ಕರಂದ್ಲಾಜೆ ಅವರೊಂದಿಗೆ ಹೋಗಿದ್ದಾರೆ', ಈ ರೀತಿಯ ವಿವಾದಕಾರಿ ಹೇಳಿಕೆಯನ್ನು ನೀಡುವುದರಲ್ಲಿ ಬೇಳೂರು ಗೋಪಾಲಕೃಷ್ಣ ನಿಸ್ಸೀಮರು.

English summary
If required kill Indian Prime Minsiter Narendra Modi, Congress leader Belur Gopalakrishna controversial statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X