ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಚ್‌ಬಿ ಫ್ಲ್ಯಾಟ್‌ ಶೇ 2ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

|
Google Oneindia Kannada News

ಬೆಂಗಳೂರು, ಜನವರಿ 03 : ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಶೇ 2ರಷ್ಟು ರಿಯಾಯಿತಿ ದರದಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 1178 ಫ್ಲ್ಯಾಟ್‌ ಮಾರಾಟವಾಗದೇ ಉಳಿದಿವೆ.

ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೆಎಚ್‌ಬಿ ನಿರ್ಮಾಣ ಮಾಡಿರುವ ವಸತಿ ಸಮುಚ್ಛಯಗಳಲ್ಲಿ ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿವೆ. ಆದ್ದರಿಂದ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ' ಎಂದರು.

ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 1178 ಫ್ಲ್ಯಾಟ್‌ಗಳು ಮಾರಾಟವಾಗದೆ ಉಳಿದಿವೆ. ಇವುಗಳಲ್ಲಿ ಕೆಂಗೇರಿಯಲ್ಲಿ 70, ಡೈಮಂಡ್ ವಸತಿ ಸಂಕೀರ್ಣದಲ್ಲಿ 130 ಖಾಲಿ ಇವೆ. ರಾಜ್ಯದಲ್ಲಿ ಒಟ್ಟು 486 ಬಿಡಿ ಮನೆಗಳು, 4182 ನಿವೇಶನಗಳು ಮಾರಾಟವಾಗಿಲ್ಲ.

ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಸಿಕ್ತು, ರೇವಣ್ಣ ನೆರೆಹೊರೆ!ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಸಿಕ್ತು, ರೇವಣ್ಣ ನೆರೆಹೊರೆ!

KHB

'ಬೆಂಗಳೂರಿನ ಸೂರ್ಯನಗರ, ಕಲಬುರಗಿಯಲ್ಲಿ ಹೌಸಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯ ಪಗ್ರತಿಯಲ್ಲಿದೆ. ಯಲ್ಲಾಪುರ-ಹಾವೇರಿಯ ದೇವಗಿರಿ, ಬಳ್ಳಾರಿಯ ಕೊಳಗಲ್ಲು, ಮುಂಡರಗಿಯ ಹಲಕುಂದಿಯಲ್ಲಿ 222 ಕೋಟಿ ಮೊತ್ತದಲ್ಲಿ 4789 ನಿವೇಶಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ' ಎಂದು ಸಚಿವರು ವಿವರಣೆ ನೀಡಿದರು.

ಗೃಹ ಮಂಡಳಿ ಮನೆ ಪಡೆಯಲು ಇದ್ದ ನಿಯಮಾವಳಿ ಸಡಿಲಿಕೆಗೃಹ ಮಂಡಳಿ ಮನೆ ಪಡೆಯಲು ಇದ್ದ ನಿಯಮಾವಳಿ ಸಡಿಲಿಕೆ

'ಮುಂದಿನ 5 ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವರ್ಷ 4 ಲಕ್ಷ ಮನೆಗಳನ್ನು ಕಟ್ಟಲಾಗುತ್ತಿದೆ' ಎಂದು ಎಂ.ಟಿ.ಬಿ.ನಾಗರಾಜ್ ಮಾಹಿತಿ ನೀಡಿದರು.

English summary
Karnataka housing minister M.T.B.Nagaraj said that Karnataka Housing Board (KHB) all set to sale flats in the discount of 2%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X