• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿಮಾನಿಗಳಿಗೆ ಖುಷಿ ಸುದ್ದಿ: ನಿಗದಿಯಂತೆ ಕೆಜಿಎಫ್ ಬಿಡುಗಡೆ ಆಗುತ್ತದೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಕೆಜಿಎಫ್ ಚಿತ್ರದ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಜಗತ್ತಿನಾದ್ಯಂತ 2000 ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಿಯೇ ಸಿದ್ಧ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು?

ಅಭಿಮಾನಿಗಳು ಸಹಜವಾಗಿಯೇ ಗೊಂದಲಕ್ಕೆ ಒಳಗಾಗಿದ್ದಾರೆ. ಯಾರೂ ಆತಂಕ ಒಡುವ ಅಗತ್ಯವಿಲ್ಲ. ನಿಗದಿಯಂತೆಯೇ ಬೆಳಗಿನಿಂದಲೇ ಪ್ರದರ್ಶನ ನಡೆಯಲಿವೆ. ಎಲ್ಲ ವಿತರಕರಿಗೂ ಸಿನಿಮಾದ ಹಕ್ಕುಗಳನ್ನು ನೀಡಲಾಗಿದೆ ಎಂದು ವಿಜಯ್ ತಿಳಿಸಿದ್ದಾರೆ.

ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆ ಮಧ್ಯಂತರ ತಡೆಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆ ಮಧ್ಯಂತರ ತಡೆ

ಅರ್ಜಿದಾರರು ನಮ್ಮ ಸಿನಿಮಾವನ್ನು ನೋಡದೆಯೇ ಕೋರ್ಟಿಗೆ ಹೋಗಿದ್ದಾರೆ. ಈ ಸಿನಿಮಾಕ್ಕೂ ರೌಡಿ ತಂಗಂ ಬದುಕಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಸಿವಿಲ್ ಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆಯ ಪ್ರತಿ ನಮಗೆ ಸಿಕ್ಕಿಲ್ಲ. ಹೀಗಾಗಿ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿಯಿಲ್ಲ. ನಾಳೆ ಕೆಜಿಎಫ್ ಖಂಡಿತವಾಗಿಯೂ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ದೂರುದಾರ ಯಾರು ಎಂಬುದೇ ನಮಗೆ ತಿಳಿದಿಲ್ಲ. ನಮಗೆ ಕೋರ್ಟ್‌ನಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ವಿಜಯ್ ತಿಳಿಸಿದ್ದಾರೆ.

English summary
KGF producer Vijay Kiragandur clarified that KGF movie will be released as per scheduled. The order copy of city civil court is not yet recieved, so there is no problem to release it, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X