ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಶೇ.6ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿದ ಕೆಇಆರ್‌ಸಿ

By Nayana
|
Google Oneindia Kannada News

ಬೆಂಗಳೂರು, ಮೇ 14: ರಾಜ್ಯಾದ್ಯಂತ ಸೋಮವಾರದಿಂದ ವಿದ್ಯುತ್ ದರ ಹೆಚ್ಚಳಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.

ಮೇ 14ರಿಂದ ವಿದ್ಯುತ್ ಬೆಲೆ ಹೆಚ್ಚಳ ಸಾಧ್ಯತೆಮೇ 14ರಿಂದ ವಿದ್ಯುತ್ ಬೆಲೆ ಹೆಚ್ಚಳ ಸಾಧ್ಯತೆ

ಕೆಇಆರ್‌ಸಿ ಅಧ್ಯಕ್ಷ ಶಂಕಲಿಂಗೇಗೌಡ ಮಾತನಾಡಿ, ಬೆಸ್ಕಾಂನಲ್ಲಿ ಶೇ.13, ಮೆಸ್ಕಾಂನಲ್ಲಿ ಶೇ.19, ಜೆಸ್ಕಾಂ ಶೇ.26, ಸೆಸ್ಕ್ ಶೇ 18ರಷ್ಟು ಹೆಚ್ಚಳ ಮಾಡಿದೆ. ಹಾಗೂ ಒಟ್ಟಾರೆ ರಾಜ್ಯಾದ್ಯಂತ ಶೇ.6ಷ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಸ್ಕಾಂನಲ್ಲಿ ಶೇ.13 ಅಂದರೆ 82 ಪೈಸೆ, ಮೆಸ್ಕಾಂನಲ್ಲಿ ಶೇ.19 ಅಂದರೆ 1.23, ಜೆಸ್ಕಾಂ ಶೇ.26 ಅಂದರೆ 1.62, ಹೆಸ್ಕಾಂ ಶೇ.19 ಅಂದರೆ 1.13, ಸೆಸ್ಕ್ ಶೇ 18ರಷ್ಟು ಅಂದರೆ 1.13ರೂ ಶುಲ್ಕ ಹೆಚ್ಚಳ ಮಾಡಿದೆ

KERC nod to hike electricity price by 6percent

ನಮ್ಮ ಮೆಟ್ರೋ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ ರಿಯಾಯಿತಿ ನೀಡಿ ಇಲ್ಲವಾದರೆ ಟಿಕೆಟ್‌ ಶುಲ್ಕವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಮನವಿ ಮಾಡಿತ್ತು. ಹಾಗಾಗಿ ಬಿಎಂಆರ್‌ಸಿಎಲ್‌ಗೆ ಪ್ರತಿ ಯೂನಿಟ್‌ಗೆ 1 ರೂ. ಕಡಿಮೆ ಮಾಡಲಾಗಿದೆ.

ಇದರಿಂದಾಗಿ ಮೆಟ್ರೋ ಟಿಕೆಟ್‌ ಶುಲ್ಕ ಹೆಚ್ಚಳವಾಗುವ ಸಾಧ್ಯತೆಗಳು ಕಡಿಮೆಯಾದಂತಾಗಿದೆ. ಇನ್ನು ರಾಜ್ಯಾದ್ಯಂತ ರೈಲ್ವೆಗೆ ನೀಡುತ್ತಿದ್ದ ವಿದ್ಯುತ್ ದರದ ಶುಲ್ಕವನ್ನೂ ಕೂಡ 40 ಪೈಸೆಯಷ್ಟು ಕಡಿಮೆ ಮಾಡಲಾಗಿದೆ. ಪ್ರತಿ ಯೂನಿಟ್‌ಗೆ 6 ರೂ. ವಿಧಿಸಲಾಗುತ್ತದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಬೆಸ್ಕಾ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ತೆರೆದಿದೆ. ಬೆಸ್ಕಾಂಗೆ ವಿಧಿಸುತ್ತಿದ್ದ ಶುಲ್ಕವನ್ನು 4.85 ಪೈಸೆ ಕಡಿಮೆ ಮಾಡಿದೆ.

ಇನ್ನುಮುಂದೆ ನಗರದಲ್ಲಿ ವಿದ್ಯುತ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವುದಾದರೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದು ಶಂಕರಲಿಂಗೇಗೌಡ ಸ್ಪಷ್ಟ ಪಡಿಸಿದ್ದಾರೆ. ಪರಿಷ್ಕೃತ ದರವು ಏಪ್ರಿಲ್ 1ರಿಂದ ಅನ್ವಯವಾಗಲಿದೆ.

English summary
Immediately after the election kerc decided to hike electricity price. On an average there will be 6 percent rise in the price in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X