ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ : ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 30 : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿದೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿಯೂ ದರ ಹೆಚ್ಚಳವಾಗಿದ್ದು, ಏ.1ರಿಂದ ನೂತನ ದರ ಜಾರಿಗೆ ಬರಲಿದೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಅವರು ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು. 2016-17ನೇ ಸಾಲಿಗೆ ಜಾರಿಗೆ ಬರುವಂತೆ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು. [ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

kerc

ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಶೇ 9ರಷ್ಟು ದರ ಹೆಚ್ಚಳ ಮಾಡಲಾಗಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ಗೃಹ ಬಳಕೆ

ನಗರ ಪ್ರದೇಶ : ನಗರ ಪ್ರದೇಶದಲ್ಲಿ ಗೃಹ ಬಳಕೆಗೆ 30 ಯೂನಿಟ್ ವರೆಗೆ 3 ರೂ., 31-100 ಯೂನಿಟ್‌ಗೆ 4.40 ರೂ., 101-200 ಯೂನಿಟ್ ವರೆಗೆ 5.90 ರೂ., 200 ಯೂನಿಟ್ ಮೀರಿದರೆ 6.90 ರೂ.ಗಳು

ಗ್ರಾಮೀಣ ಪ್ರದೇಶ : ಗ್ರಾಮೀಣ ಪ್ರದೇಶದಲ್ಲಿ ಗೃಹ ಬಳಕೆಗೆ 30 ಯೂನಿಟ್ ವರೆಗೆ 2.90 ರೂ., 31-100 ಯೂನಿಟ್ 4.10 ರೂ., 101-200 ಯೂನಿಟ್ 5.60 ರೂ., 200 ಯೂನಿಟ್ ಮೀರಿದರೆ 6.40 ರೂ.

ಹುಕ್ಕೇರಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 38 ಪೈಸೆ, ಮಂಗಳೂರು ಎಸ್‌ಇಝಡ್ ವ್ಯಾಪ್ತಿಯಲ್ಲಿ 6.05 ಪೈಸೆ ಹೆಚ್ಚಳ, ಮಂಗಳೂರು ವಿಕಾಸ್ ಕಂಪನಿ ವ್ಯಾಪ್ತಿಯಲ್ಲಿ 6.55ಪೈಸೆ ಹೆಚ್ಚಳ ಮಾಡಲಾಗಿದೆ.

ಕೈಗಾರಿಕೆ

ಬೆಸ್ಕಾಂ ವ್ಯಾಪ್ತಿಯಲ್ಲಿ ಎಲ್‌ಟಿ ಕೈಗಾರಿಕೆಗಳಿಗೆ ಸರಾಸರಿ 15 ರಿಂದ 30 ಪೈಸೆ ಹೆಚ್ಚಳ. ಮೊದಲ 500 ಯೂನಿಟ್‌ಗೆ 4.90 ಪೈಸೆಯಿಂದ 5 ರೂ. 10 ಪೈಸೆಗೆ ಹೆಚ್ಚಳ, 500 ಯೂನಿಟ್‍ಗಿಂತ ಹೆಚ್ಚಿನ ಬಳಕೆಗೆ 6 ರೂ. ನಿಂದ 6.30 ಪೈಸೆಗೆ ಏರಿಕೆ.

ಬೆಸ್ಕಾಂ ಹೊರತು ಪಡಿಸಿ ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಮೊದಲ 500 ಯೂನಿಟ್‌ಗೆ 4.75 ಪೈಸೆಯಿಂದ 4. 95 ಪೈಸೆಗೆ ಹೆಚ್ಚಳ. 501 ರಿಂದ 1000 ಯೂನಿಟ್‍ವರೆಗೆ 5.55ರಿಂದ 5.85 ಪೈಸೆಗೆ ಹೆಚ್ಚಳ. 1000 ಯೂನಿಟ್ ಮೇಲ್ಪಟ್ಟು 5.85ರಿಂದ 6.15 ಪೈಸೆಗೆ ಹೆಚ್ಚಳ.

ವಾಣಿಜ್ಯ ಬಳಕೆ

ವಾಣಿಜ್ಯ ಬಳಕೆಯ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳ. ಮೊದಲ 50 ಯೂನಿಟ್‌ಗೆ 6.95 ರೂ. ನಿಂದ 7.15 ಪೈಸೆಗೆ ಏರಿಕೆ. 50 ಯೂನಿಟ್ ನಂತರದ ಬಳಕೆಗೆ 7.95 ರೂ. ನಿಂದ 8.15 ಪೈಸೆಗೆ ಹೆಚ್ಚಳ.

ವಾಣಿಜ್ಯ ಬಳಕೆ (ಗ್ರಾಮೀಣ ಪ್ರದೇಶ) : ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆಗೆ ಮೊದಲ 50 ಯೂನಿಟ್‍ಗೆ 6.45 ರೂ.ನಿಂದ 6.65 ಪೈಸೆಗೆ ಹೆಚ್ಚಳ. 50 ಯೂನಿಟ್ ನಂತರದ ಬಳಕೆಗೆ 7.45 ರೂ.ನಿಂದ 7.65 ಪೈಸೆಗೆ ಹೆಚ್ಚಳ.

* ಕುಡಿಯುವ ನೀರು ಸರಬರಾಜು, ಬೀದಿದೀಪ ಬಳಕೆಯ ವಿದ್ಯುತ್‍ ದರ ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಳ.

English summary
The Karnataka Electricity Regulatory Commission (KERC) hiked power tariff On March 30th 2016. New tariff will come to effect form April 1, 2016. KERC chairman M.K.Shankaralinge Gowda said, commission has ordered for 9 percent power tariff hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X