ವಿದ್ಯುತ್ ದರ ಏರಿಕೆ, ಮಂಗಳವಾರ ಪೂರ್ಣಪಟ್ಟಿ ನಿರೀಕ್ಷಿಸಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ಎಸ್ಕಾಂಗಳ ಬೇಡಿಕೆಗೆ ಕೊನೆಗೂ ಮಣಿದಿರುವ ಸರ್ಕಾರ ವಿದ್ಯುತ್ ದರ ಏರಿಕೆಗೆ ಅಸ್ತು ಎಂದಿದೆ. ಏಪ್ರಿಲ್ 11ರಂದು ಬೆಳಗ್ಗೆ ವಿದ್ಯುತ್ ದರ ಏರಿಕೆ ಪಟ್ಟಿ ಪ್ರಕಟವಾಗಲಿದೆ. ವಿದ್ಯುತ್ ದರ ಹೆಚ್ಚಳ ಪಟ್ಟಿ ಪ್ರಕಟಿಸಲು ಕೆಇಆರ್‍ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ಮುಂದಾಗಿದೆ.

ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2017-18ನೆ ಸಾಲಿನ ವಿದ್ಯುತ್‌ಚ್ಛಕ್ತಿ ದರ ಪರಿಷ್ಕರಣೆ ಸಂಬಂಧ ಮಂಗಳವಾರ ಬೆಳಗ್ಗೆ 11.30ಕ್ಕೆ ತನ್ನ ಆದೇಶ ಪ್ರಕಟಿಸಲಿದೆ.

ಎಲ್ಲಾ ಎಸ್ಕಾಂಗಳು (ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿ) ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯೂನಿಟ್ ಗೆ 1.40ಪೈಸೆ ಹೆಚ್ಚಳಕ್ಕೆ ಆಗ್ರಹಿಸಲಾಗಿತ್ತು. ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳಲ್ಲಿ ಪ್ರತಿ ಯೂನಿಟ್‍ಗೆ 40 ಪೈಸೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ತೀರ್ಮಾನಿಸಿದೆ.

KERC to announce Electricity Price hike on April 11

ಈ ಬಾರಿ ರಾಜ್ಯದಲ್ಲಿ 140ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿರುವ ಕಾರಣ ದರ ಹೆಚ್ಚಳ ಮಾಡಿದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಮುಂಗಾರು ಮಳೆ ಕೂಡಾ ಕ್ಷೀಣ ಎಂದು ಸ್ಕೈಮಾಟ್ ಹವಾಮಾನ ಮುನ್ಸೂಚನೆ ನೀಡಿದೆ.

ಕಳೆದ ಬಾರಿ ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KERC to hike Electricity price, Pay more for Bills, electricity tariff has been increased by the Karnataka Electricity Regulatory Commission (KERC).It would come into effect from April 11.
Please Wait while comments are loading...