ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'KSRTC' ಇನ್ಮುಂದೆ ಕರ್ನಾಟಕದ್ದೇ ಸ್ವತ್ತು!

By Mahesh
|
Google Oneindia Kannada News

ಕೊಚ್ಚಿ/ಬೆಂಗಳೂರು, ನ.26: ಕರ್ನಾಟಕ ಹಾಗೂ ತೆಲಂಗಾಣ ಒಂದೇ ರಾಜ್ಯಪಕ್ಷಿ ಹೊಂದಿರುವುದರ ಬಗ್ಗೆ ನಿಮಗೆ ತಿಳಿದಿದೆ. ಅದೇ ರೀತಿ ಕೇರಳ ಹಾಗೂ ಕರ್ನಾಟಕದ ಸಾರಿಗೆ ಸಂಸ್ಥೆಗಳನ್ನು 'KSRTC' ಎಂದೇ ಕರೆಯಲಾಗುತ್ತದೆ. ಆದರೆ 'KSRTC' ಎಂಬ ಪದ ಯಾರ ಸ್ವತ್ತು ಎಂಬುದು ಈಗ ಚರ್ಚಾರ್ಹ ವಿಷಯವಾಗಿದೆ.

ಮೊದಲೇ ಆರ್ಥಿಕ ದುಃಸ್ಥಿತಿಯಲ್ಲಿರುವ ಕೇರಳದ ರಾಜ್ಯ ಸಾರಿಗೆ ಸಂಸ್ಥೆ ಈಗ 'KSRTC' ಪದ ಸಂಪತ್ತನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. KSRTC ಎಂಬ ಟ್ರೇಡ್ ಮಾರ್ಕ್ ನಮ್ಮ ಸ್ವತ್ತು. ಗಂಡಬೇರುಂಢ ಲಾಂಛನದೊಂದಿಗೆ KSRTC ಪದ ಬಳಕೆ ಮಾಡುತ್ತಾ ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾದಿಸಿದೆ. ಈ ಬಗ್ಗೆ ಕೈಗಾರಿಕಾ ಸಚಿವಾಲಯದ ಅಡಿ ಬರುವ ಟ್ರೇಡ್ ಮಾರ್ಕ್ಸ್ ನೋಂದಣಿ ವಿಭಾಗಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಟ್ರೇಡ್ ಮಾರ್ಕ್ಸ್ ನೋಂದಣಿ ಪುರಸ್ಕರಿಸಿದೆ.

Kerala may soon lose KSRTC word mark to Karnataka

ಆದರೆ, ಕೇರಳ ಆರ್ ಟಿಸಿ ತನ್ನ ಪಟ್ಟು ಬಿಡದೆ KSRTC ಮಾರ್ಕ್ ಪಡೆಯಲು ಕೊನೆಯ ಯತ್ನ ನಡೆಸಿದೆ. 2013ರಲ್ಲೇ ಕರ್ನಾಟಕ KSRTC ಟ್ರೇಡ್ ಮಾರ್ಕ್ ನೋಂದಣಿ ಮಾಡಿಸಿದೆ. ಅದರೆ, ಇದಕ್ಕೆ ಆಕ್ಷೇಪಣೆ ಸಲ್ಲಿಸಿ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕೇರಳ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಚಾಕೋ ಹೇಳಿದ್ದಾರೆ. [ಸೋಷಿಯಲ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ]

ಇದೇ ರೀತಿ ಸಮಸ್ಯೆ ಆಂಧ್ರಪ್ರದೇಶ ಬಸ್ ಗಳ ನಡುವೆಯೂ ಇದೆ. 'ಗರುಡ' ಸಾರಿಗೆ ಸೇವೆ ಬಸ್ ಗಳನ್ನು ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ಬಳಸುತ್ತಿದ್ದು, ಗರುಡ ಪದ ಬಳಕೆ ಇನ್ನೂ ಕೆಲವು ರಾಜ್ಯಗಳಲ್ಲಿವೆ.

Association of State Road Transport Undertakings (ASRTU) ಮುಂತಾದ ಸಾರಿಗೆ ಉನ್ನತ ಸಂಸ್ಥೆಗಳು ಕೂಡಾ KSRTC ಎಂದರೆ ಕರ್ನಾಟಕ ಸಾರಿಗೆ ಸಂಸ್ಥೆ ಎಂದೇ ಪರಿಗಣಿಸಿರುವುದು ಕೇರಳಕ್ಕೆ ಮುಳುವಾಗಿದೆ. ನಾವು KSRTC ಹಾಗೂ ಕೇರಳ ಆರ್ ಟಿಸಿ ಎಂದು ಬಳಸಲು ಅನುಮತಿ ನೀಡುವಂತೆ ಕೋರುತ್ತೇವೆ ಎಂದು ಅಂಟೋನಿ ಚಾಕೋ ಹೇಳಿದ್ದಾರೆ.

English summary
The Kerala State Road Transport Corporation (KSRTC), battling a severe financial crisis, is now on the verge of losing the right to use the word-mark ‘KSRTC’ on its buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X