ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ, ಕೇರಳದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ತಾತ್ಕಾಲಿಕ ನಿಷೇಧ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಕರ್ನಾಟಕ ಹಾಗೂ ಕೇರಳ ರಾಜ್ಯದ ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಗೆ ತಾತ್ಕಾಲಿಕ ನಿರ್ಭಂಧ ಹೇರಿ ಸರ್ಕಾರಗಳು ಆದೇಶ ಹೊರಡಿಸಿದೆ. ತಮಿಳುನಾಡಿನ ಥಾನಿ ಅರಣ್ಯದಲ್ಲಿ ಭಾನುವಾರ ಸಂಜೆ ಉಂಟಾದ ಕಾಡ್ಗಿಚ್ಚಿನಿಂದಾಗಿ 10 ಮಂದಿ ಚಾರಣಿಗರು ಸಾವನ್ನಪ್ಪಿದ್ದರು.

ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಚಾರಣಿಗರು ಬೇರೆ ಬೇರೆ ಗುಂಪುಗಳಲ್ಲಿ ಅರಣ್ಯ ಪ್ರದೇಶದಲ್ಲಿ ತೆರಳಿದ್ದಾಗ ಬೆಂಕಿ ದುರಂತದಲ್ಲಿ ಸಿಲುಕಿಕೊಂಡು ಸಾವಿಗೀಡಾಗಿದ್ದರು.

ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ

ಈ ಮಧ್ಯೆ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಕಟಣೆ ನೀಡಿ ಅರಣ್ಯ ಪ್ರದೇಶದೊಳಗೆ ತೆರಳಿದ್ದ ಚಾರಣಿಗರು ರಾಜ್ಯ ಸರ್ಕಾರದಿಂದ ಯಾವುದೇ ರೀತಿ ಅನುಮತಿ ಪಡೆದಿರಲಿಲ್ಲ , ಅರಣ್ಯ ಪ್ರದೇಶದಲ್ಲಿ ಚಾರಣಿಗರು ಇರುವ ಕುರಿತು ಸರ್ಕಾರಕ್ಕೆ ಯಾವುದೇ ಮಾಹಿತಿ ಇರಲಿಲ್ಲ.ಹೀಗಾಗಿ ಬೆಂಕಿ ಅನಾಹುತದಲ್ಲಿ ಮಡಿದವರು ಅಕ್ರಮ ಚಾರಣಿಗರು ಎಂದು ಪರಿಗಣಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೇರಳದಲ್ಲಿ ಸದ್ಯಕ್ಕೆ ಟ್ರೆಕ್ಕಿಂಗ್ ಹೋಗುವಂತಿಲ್ಲ

ಕೇರಳದಲ್ಲಿ ಸದ್ಯಕ್ಕೆ ಟ್ರೆಕ್ಕಿಂಗ್ ಹೋಗುವಂತಿಲ್ಲ

ವನ್ಯಜೀವಿ ಅಭಯಾರಣ್ಯದಲ್ಲಿ ಟ್ರೆಕ್ಕಿಂಗ್ ಹಾಗೂ ಮಾನವ ಪ್ರವೇಶವನ್ನು ಕೇರಳ ಅರಣ್ಯ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅರಣ್ಯದ ಎಲ್ಲ ಗಡಿಗಳಲ್ಲಿ ಬದೋಬಸ್ತ್ ನ್ನು ಕೇರಳ ಸರ್ಕಾರ ಬಿಗಿಗೊಳಿಸಿದೆ.

ಬೆಂಕಿ ತಗುಲಿದ ಅರಣ್ಯ ಪ್ರದೇಶದ ಗಡಿ ಪ್ರದೇಶದಲ್ಲಿ ಮಾನವ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅರಣ್ಯ ಅಧಿಕಾರಿಗಳು ಸತತ ಕಣ್ಗಾವಲು ಹಾಕಿದ್ದಾರೆ. ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಹಾಗೂ ಪ್ರವಾಸಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ನಿಷೇಧ ಹೇರಿದ್ದು, ಒಂದು ವೇಳೆ ಟ್ರಕ್ಕಿಂಗ್ ಹಾಗೂ ಪ್ರವಾಸಿಗರು ವೀಕ್ಷಣೆಗೆ ತೆರಳುವುದಾದರೆ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆದು ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ತೆರಳಬೇಕು ಎಂದು ಕೇರಳ ಸರ್ಕಾರ ಸ್ಪಷ್ಟ ಪಡಿಸಿದೆ.

ಬೇಸಿಗೆ ಮುಗಿಯುವವರೆಗೆ ಟ್ರೆಕ್ಕಿಂಗ್ ಇಲ್ಲ

ಬೇಸಿಗೆ ಮುಗಿಯುವವರೆಗೆ ಟ್ರೆಕ್ಕಿಂಗ್ ಇಲ್ಲ

ಈ ಮಧ್ಯೆ ಕರ್ನಾಟಕ ಸರ್ಕಾರ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಮಾನವನ ಸಂಚಾರ ಹಾಗೂ ಟ್ರೆಕ್ಕಿಂಗ್ ಗೆ ಸಂಪೂರ್ಣ ನಿಷೇಧ ಹೇರಿದ್ದು, ಬೇಸಿಗೆ ಧಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಳ್ಳಬಹುದಾದ ಕಾರಣ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ತಿಳಿಸಿದೆ.

ಈಗಾಗಲೇ ನಂದಿಬೆಟ್ಟ, ಕೊಡಗು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ವರ್ಷ ಸಂಭವಿಸಿದ್ದ ಅಗ್ನಿದುರಂತಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ. ಬೇಸಿಗೆ ಮುಗಿಯುವವರೆಗೆ ಅಥವಾ ಒಂದೆರೆಡು ಮಳೆ ಬೀಳುವವರೆಗೆ ಚಾರಣಕ್ಕೆ ಅವಕಾಶವಿಲ್ಲವೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಾರಣ ಪ್ರಿಯರನ್ನು ಸ್ವಾಗತಿಸುತ್ತಿದೆ ಉತ್ತರಕನ್ನಡಚಾರಣ ಪ್ರಿಯರನ್ನು ಸ್ವಾಗತಿಸುತ್ತಿದೆ ಉತ್ತರಕನ್ನಡ

ಚಾರಣಿಗರಿಗೆ ಖುಷಿಕೊಡುವ ನಂದಿ ಬೆಟ್ಟ

ಚಾರಣಿಗರಿಗೆ ಖುಷಿಕೊಡುವ ನಂದಿ ಬೆಟ್ಟ

ನಂದಿಬೆಟ್ಟ ಬೆಂಗಳೂರಿನಿಂದ 60ಕಿ.ಮೀ ದೂರದಲ್ಲಿದೆ. ಪಾಲಾರ್, ಅರ್ಕಾವತಿ ಹಾಗೂ ಪೆನ್ನಾರ್ ನದಿಗೆ ನಂದಿಬೆಟ್ಟವೇ ಉಗಮಸ್ಥಾನವಾಗಿದೆ. ಅಲ್ಲಿ ಸುಮಾರು 1200 ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು. ಅಲ್ಲಿ ಭೋಗನಂದೀಶ್ವರ ದೇವಸ್ಥಾನ, ಸಾವಿರ ವರ್ಷ ಹಳೆಯ ನಂದಿಯನ್ನು ವೀಕ್ಷಿಸಬಹುದು. ನಂದಿ ಬೆಟ್ಟದಲ್ಲಿ ಸೈಕ್ಲಿಂಗ್, ಅರಣ್ಯ ಉಳಿಸಲು ಓಟ ಹೀಗೆ ಅನೇಕ ಚಟುವಟಿಕೆಗಳನ್ನೂ ಕೂಡ ನಡೆಸಲಾಗುತ್ತದೆ.

ಇಬ್ಬನಿ ತುಂಬಿದ ಕೊಡಚಾದ್ರಿ, ಗಗನಚುಂಬಿ ಬೆಟ್ಟಗಳ ಸಾಲು

ಇಬ್ಬನಿ ತುಂಬಿದ ಕೊಡಚಾದ್ರಿ, ಗಗನಚುಂಬಿ ಬೆಟ್ಟಗಳ ಸಾಲು

ಕೊಡಚಾದ್ರಿ ಬೆಟ್ಟಗಳ ಸಾಲು ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು 1343 ಮೀ.ಇದೆ. ಕೊಡಚಾದ್ರಿ ಬೆಟ್ಟವು ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗೂ ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗವಾಗಿದೆ.ಕೊಡಚಾದ್ರಿಯನ್ನು ಪ್ರವಾಸಿಗರ ಸ್ವರ್ಗವೆಂದೇ ಹೇಳಬಹುದು. ಚಾರಣಿಗರ ಮನ ತಣಿಸುವಷ್ಟು ಹೇರಳವಾದ ಸ್ಥಳಗಳನ್ನು ಹೊಂದಿರುವ ಪಶ್ಚಿಮಘಟ್ಟಗಳು ಒಂದೆಡೆ ಮರಕಡಿವವರಿಂದ ನಿನಾಶದತ್ತ ಸರಿಯುತ್ತಿದ್ದರೆ ಮತ್ತೊಂದೆಡೆ ಮಣ್ಣು ಸವಕಳಿಯಿಂದ ನಾಶವಾಗುತ್ತಿದೆ.

ಕೊಡಗಿನ ಗಡಿಭಾಗದಲ್ಲೊಂದು 'ಕಲ್ಯಾಳ ಜಲಪಾತ'ಕೊಡಗಿನ ಗಡಿಭಾಗದಲ್ಲೊಂದು 'ಕಲ್ಯಾಳ ಜಲಪಾತ'

ಚಾರಣಿಗರ ಮನಸ್ಸು ಅರಳಿಸುವ ಅರಣ್ಯ

ಚಾರಣಿಗರ ಮನಸ್ಸು ಅರಳಿಸುವ ಅರಣ್ಯ

ಕುದುರೇಮುಖವು ಕರ್ನಾಟಕದ ಪ್ರಸಿದ್ಧ ಚಾರಣ ಅರಣ್ಯ ಪ್ರದೇಶದಲ್ಲಿ ಒಂದಾಗಿದೆ.ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಕಾರ್ಕಳದಿಂದ 48 ಕಿ.ಮೀ ದೂರದಲ್ಲಿದೆ. ಕಳಸದಿಂದ20ಕಿ.ಮೀ ದೂರದಲ್ಲಿದೆ.ಅದರ ಜತೆಯಲ್ಲಿ ಸಂಸೆ ಪರ್ವತವನ್ನೂ ಕೂಡ ನೋಡಬಹುದು. ಮುಳ್ಳಯನಗಿರಿ ನಂತರದಲ್ಲಿ ಅತಿ ಎತ್ತರದ ಪರ್ವತ ಎಂದೇ ಕುದುರೆ ಮುಖ ಪ್ರಸಿದ್ಧವಾಗಿದೆ.

English summary
The Tamil Nadu government had said the trekkers who were trapped in Theni had not taken the required permission to be in the area. Kerala and Karnataka have temporarily banned trekking in forests after a fire in the Theni district in Tamil Nadu on Sunday evening. killed 10 trekkers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X