ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"370 ನೇ ವಿಧಿ ಪ್ರಕಾರ ಕನ್ನಡಕ್ಕೆ ವಿಶೇಷ ಸ್ಥಾನ ಮಾನ ನೀಡಿ": ಕಾಂಗ್ರೆಸ್

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್‌ 19: ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರಕಾರ ಕನ್ನಡಕ್ಕೆ ಭಾಷಾ ಅಲ್ಪಸಂಖ್ಯಾತೆಯ ಆಧಾರದ ಮೇಲೆ ಸಂವಿಧಾನದ 370 ನೇ ವಿಧಿಯ ಪ್ರಕಾರ ಕನ್ನಡಕ್ಕೆ ವಿಶೇಷ ಸ್ಥಾನ ಮಾನ ನೀಡಲಿ ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್‌ ಶ್ರೀಪಾದ ರೇಣು ಹೇಳಿದ್ದಾರೆ.

ನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣುನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣು

ದೇಶದ ಶೇಕಡಾ 66 ಕ್ಕೂ ಹೆಚ್ಚು ಜನರಿಗೆ ಹಿಂದಿ ಭಾಷೆ ಅರ್ಥವೇ ಆಗುವುದಿಲ್ಲಾ. ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಕಡಿಮೆ ಜನ ಮಾತ್ರ ಹಿಂದಿಯನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸುತ್ತಾರೆ. ಹಾಗೆಯೇ, ಹಿಂದಿಯನ್ನು ಪ್ರಥಮ ಭಾಷೆಯನ್ನಾಗಿ ಬಳಸುವವರ ಪ್ರಮಾಣ ಕೂಡಾ ಕಡಿಮೆ ಇದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ, ಪೂರ್ವದ ಮಹರಾಷ್ಟ್ರ ಮತ್ತು ಗುಜರಾತ್‌ ನಲ್ಲಿ ಹಿಂದಿಯನ್ನು ಪ್ರಥಮ ಭಾಷೆಯಾಗಿ ಬಳಸುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. ಈ ರಾಜ್ಯಗಳಲ್ಲಿ ಹಿಂದಿಯನ್ನು ವ್ಯವಹಾರಿಕ ಭಾಷೆಯಾಗಿ ಬಳಸುವವರ ಪ್ರಮಾಣವೂ ಕಡಿಮೆ ಇದೆ. ಆದರೆ, ಇದನ್ನು ಯಾವುದನ್ನೂ ಗಣನೆಗೆ ತಗೆದುಕೊಳ್ಳದ ಕೇಂದ್ರ ಗೃಹ ಸಚಿವರು ಹಿಂದಿಯನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

Kengal Shreepada Renu demands Special status to Kannada

ಹಿಂದಿಯನ್ನು ನಮ್ಮ ರಾಜ್ಯಗಳ ಮೇಲೆ ಹೇರಲು ಮುಂದಾಗಿರುವ ಬಿಜೆಪಿ ಕನ್ನಡ ಭಾಷೆಗೆ ಅಲ್ಪಸಂಖ್ಯಾತ ಭಾಷೆಯನ್ನಾಗಿ ಮಾಡಲು ಮುಂದಡಿ ಯಿಟ್ಟಿದೆ. ಈ ಹಿನ್ನಲೆಯಲ್ಲಿ ನಾವೀಗ ಭಾಷಾ ಅಲ್ಪಸಂಖ್ಯಾತ ಮೀಸಲಾತಿಗೂ ಒತ್ತಾಯ ಮಾಡಬಹುದಾಗಿದೆ. ಹಾಗೆಯೇ, ಸಂವಿಧಾನದ 370 ನೇ ವಿಧಿಯನ್ನು ಅನುಷ್ಠಾನಗೊಳಿಸುವ ಮೂಲಕ ನಮ್ಮ ಭಾಷೆಗೆ ವಿಶೇಷ ಸ್ಥಾನ ಮಾನ ಕೂಡಾ ನೀಡಿ ಎಂದು ವ್ಯಂಗ್ಯವಾಡಿದರು.

ಹಿಂದಿ ಹೇರಿಕೆ ಬಗ್ಗೆ ಹೇಳಿಯೇ ಇಲ್ಲ: ಅಮಿತ್ ಶಾ ಸ್ಪಷ್ಟನೆಹಿಂದಿ ಹೇರಿಕೆ ಬಗ್ಗೆ ಹೇಳಿಯೇ ಇಲ್ಲ: ಅಮಿತ್ ಶಾ ಸ್ಪಷ್ಟನೆ

ರಾಜ್ಯದ ಆಸ್ಮಿತೆಯಾಗಿರುವ ಕನ್ನಡ ಭಾಷೆಯನ್ನು ತುಳಿಯುವ ಪ್ರಯತ್ನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಹೋರಾಟ ನಡೆಸಲಾಗುವುದು. ಹಿಂದಿ ಭಾಷೆಯನ್ನು ರಾಜ್ಯಗಳ ಮೇಲೆ ಹೇರುವುದಕ್ಕಿಂತಲೂ, ಆಯಾ ರಾಜ್ಯಗಳ ಆಸ್ಮಿತೆಗೆ ಮಹತ್ವ ನೀಡಿ ಎಂದು ಆಗ್ರಹಿಸಿದರು.

English summary
If BJP insists on 'One nation one language'. Kannadigas can demand reservation as linguistic minority. Please impose article 370 and give special status said Kengal Shreepada Renu, KPCC spokesman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X