ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಳುವಾರು ಮಹಮ್ಮದ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಮಾರು 24 ಭಾಷೆಗಳಲ್ಲಿನ ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ 2016ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡದ ಕಾದಂಬರಿಗಾರ ಬೊಳುವಾರು ಮಹಮ್ಮದ್ ಕುಂಞಿ ಅವರ ಸ್ವಾತಂತ್ರ್ಯ ಓಟ ಕೃತಿ 2016ನೇ ಪ್ರಶಸ್ತಿಗೆ ಆಯ್ಕೆಯಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 21 : ಸುಮಾರು 24 ಭಾಷೆಗಳಲ್ಲಿನ ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ 2016ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡದ ಕಾದಂಬರಿಗಾರ ಬೊಳುವಾರು ಮಹಮ್ಮದ್ ಕುಂಞಿ ಅವರ ಸ್ವಾತಂತ್ರ್ಯ ಓಟ ಕೃತಿ 2016ನೇ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಒಂದು ಲಕ್ಷ ರೂ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ. ಅಕಾಡೆಮಿ ಪ್ರಶಸ್ತಿಯನ್ನು 2017ರಲ್ಲಿ ಫೆಬ್ರವರಿಯಲ್ಲಿ ಪ್ರದಾನ ಮಾಡಲಾಗುತ್ತದೆ. ಕಳೆದ ವರ್ಷ ಕೆ ವಿ ತಿರುಮಲೇಶ್ ಅವರ ಅಕ್ಷರ ಕಾವ್ಯ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕನ್ನಡ ವಿಭಾಗಗಳ ಆಯ್ಕೆ ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಎಚ್ ಸಿ ಬೋರಲಿಂಗಯ್ಯ, ಎಲ್ ಹನುಮಂತಯ್ಯ ಮತ್ತು ಎಸ್ ಜಿ ಸಿದ್ದರಾಮಯ್ಯನವರು ಇದ್ದರು.

Kendra Sahitya Academy Award for Bolwar Mahammad Kunhi

ವಿಶಿಷ್ಟ ಸಂವೇದನೆಯ ಸಾಹಿತಿಯಾಗಿ ಹೊರಹೊಮ್ಮಿರುವ ಕುಂಞ ಅವರು. ಒಂದು ತುಂಡು ಗೋಡೆ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲಿ, ಅಂಕ ಅವರ ಗಮನಾರ್ಹ ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. 'ಜಿಹಾದ್', 'ಓದಿರಿ' ಅವರ ಪ್ರಮುಖ ಕಾದಂಬರಿ. ಪಿ ಶೇಷಾದ್ರಿ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ 'ಮುನ್ನುಡಿ' ಬೊಳುವಾರು ಅವರ ಕತೆಯನ್ನು ಆಧರಿಸಿದೆ.

ಮಹಮ್ಮದ್ ಕುಂಞ ಅವರು ಮಕ್ಕಳ ಸಾಹಿತ್ಯಕ್ಕೆ ನೀಡುರುವ ಕೊಡುಗೆ ಅಮೂಲ್ಯವಾದುದು. ದಕ್ಷಿಣ ಕನ್ನಡದ ಪುತ್ತೂರಿನವರಾಗಿದ್ದು ಬೆಂಗಳೂರಿನಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕುಂಞ ಅವರ 'ತಟ್ಟು ಚಪ್ಪಾಳೆ ಪುಟ್ಟ ಮಗು' ಮಕ್ಕಳ ಸಾಹಿತ್ಯದ ಶಿಖರಪ್ರಾಯ ಕೃತಿಯಾಗಿದೆ.

ಕುಂಞ ಅವರ 'ಪಾಪು ಗಾಂಧಿ, ಗಾಂಧಿ ಬಾಪು' ಆದ ಕಥೆ ಕೃತಿಗೆ 2010 ಮಕ್ಕಳ ವಿಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Sahitya Akademi has announced today (December 21) its annual Sahitya Akademi Award 2016 in 24 languages including Kannada. Kannada story writer, novelist Bolwar Mahammad Kunhi bagged the award for his novel Swatantryada Ota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X