ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಸರಕಾರದ ಬಗ್ಗೆ ಕೇದಾರನಾಥ ಪೀಠದ ಜಗದ್ಗುರು ನುಡಿದ ಭವಿಷ್ಯ

|
Google Oneindia Kannada News

ಬೆಂಗಳೂರು, ಜ 5: ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ಕೇದಾರ ಪೀಠದ ಸ್ವಾಮೀಜಿ, ಬಿಎಸ್ವೈ ಸರಕಾರದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ದೇವರು, ದಿಂಡ್ರು, ಭವಿಷ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ಯಡಿಯೂರಪ್ಪನವರ ಸಮ್ಮುಖದಲ್ಲೇ ಸ್ವಾಮೀಜಿಗಳು ಸರಕಾರದ ಮುಂದಿನ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ.

ಅಸಲಿಗೆ ರಾಜಭವನದಲ್ಲಿ ಮೋದಿ - ಬಿಎಸ್ವೈ ನಡುವೆ ನಡೆದಿದ್ದಾರೂ ಏನು?ಅಸಲಿಗೆ ರಾಜಭವನದಲ್ಲಿ ಮೋದಿ - ಬಿಎಸ್ವೈ ನಡುವೆ ನಡೆದಿದ್ದಾರೂ ಏನು?

ಈ ಹಿಂದೆ, ನಾಗಸಾಧುಗಳು, ಯಡಿಯೂರಪ್ಪನವರ ನಿವಾಸಕ್ಕೆ ಬಂದು ಭವಿಷ್ಯ ನುಡಿದು, ಆಶೀರ್ವದಿಸಿ ಹೋಗಿದ್ದರು. ನಗರದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭವನ್ನು ಉದ್ಘಾಟಿಸಿ, ಕೇದಾರ ಪೀಠದ ಶ್ರೀಗಳು ಮಾತನಾಡುತ್ತಿದ್ದರು.

ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಆದ್ಯತೆ : ಯಡಿಯೂರಪ್ಪನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಆದ್ಯತೆ : ಯಡಿಯೂರಪ್ಪ

ಈ ಕಾರ್ಯಕ್ರಮದಲ್ಲಿ, ಕೇದಾರ ಶ್ರೀಗಳ ಹೊರತಾಗಿ, ಇತರ ಆರು ಪೀಠದ ಸ್ವಾಮೀಜಿಗಳು, ಶಾಸಕ ರವಿ ಸುಬ್ರಮಣ್ಯ ಕೂಡಾ ಭಾಗವಹಿಸಿದ್ದರು. ಬಿಎಸ್ವೈ ಸರಕಾರದ ಬಗ್ಗೆ ಶ್ರೀಗಳು ನುಡಿದದ್ದು ಹೀಗೆ:

ಕೇದಾರ ಪೀಠದ ಜಗದ್ಗುರು ಶ್ರೀಭೀಮಾಶಂಕರಲಿಂಗ ಸ್ವಾಮೀಜಿ

ಕೇದಾರ ಪೀಠದ ಜಗದ್ಗುರು ಶ್ರೀಭೀಮಾಶಂಕರಲಿಂಗ ಸ್ವಾಮೀಜಿ

ಉತ್ತರಾಖಾಂಡ್ ನ ಕೇದಾರ ಪೀಠದ ಜಗದ್ಗುರು ಶ್ರೀಭೀಮಾಶಂಕರಲಿಂಗ ಸ್ವಾಮೀಜಿ, ನಗರದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದೆ

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದೆ

"ಈ ಹಿಂದೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಭವಿಷ್ಯವನ್ನು ನಾನು ನುಡಿದಿದ್ದೆ. ಅದರಂತೇ, ಈಗ ಸಿಎಂ ಆಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ" ಎಂದು ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ನಾವು ಭಸ್ಮವನ್ನು ನೀಡಿದ್ದೇವೆ

ಯಡಿಯೂರಪ್ಪನವರಿಗೆ ನಾವು ಭಸ್ಮವನ್ನು ನೀಡಿದ್ದೇವೆ

"ಯಡಿಯೂರಪ್ಪನವರಿಗೆ ನಾವು ಭಸ್ಮವನ್ನು ನೀಡಿದ್ದೇವೆ. ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯನ್ನು ಪೂರೈಸಲಿದ್ದಾರೆ. ಈ ಅವಧಿಯಲ್ಲಿ ಅವರಿಗೆ ಯಾವುದೇ ತೊಂದರೆ ಬರುವುದಿಲ್ಲ" ಎನ್ನುವ ಭವಿಷ್ಯವನ್ನು ಸ್ವಾಮೀಜಿಗಳು ನುಡಿದಿದ್ದಾರೆ.

ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುತ್ತೇನೆ

ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುತ್ತೇನೆ

ಶ್ರೀಗಳ ಭವಿಷ್ಯದಿಂದ ಉಲ್ಲಸಿತರಾದಂತೆ ಕಂಡ ಮುಖ್ಯಮಂತ್ರಿ ಯಡಿಯೂರಪ್ಪ, "ನಾನು ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುತ್ತೇನೆ" ಎನ್ನುವ ಮಾತನ್ನಾಡಿದ್ದಾರೆ.

ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ

ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ

ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಕ್ಷೇತ್ರ ಗೆಲ್ಲುವ ಮೂಲಕ, ಯಡಿಯೂರಪ್ಪ ಸರಕಾರ ಸೇಫ್ ಆಗಿತ್ತು. ಇದಾದ ನಂತರ, ವರಿಷ್ಠರ ಮುಂದೆ, ಬಿಎಸ್ವೈ ಇನ್ನಷ್ಟು ಬಲಾಢ್ಯರಾದಂತೆ ಕಂಡು ಬರುತ್ತಿದೆ.

English summary
Kedar Peetha Seer Bheemashankaralinga Swamiji Prediction On BSY Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X