ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷಾ ಪ್ರಾಧಿಕಾರಕ್ಕಿಲ್ಲ ಕನಿಷ್ಠ ಸಿಬ್ಬಂದಿ ನೇಮಕ ಭಾಗ್ಯ

By Nayana
|
Google Oneindia Kannada News

ಬೆಂಗಳೂರು, ಮೇ 1: ಪರೀಕ್ಷೆಗಳನ್ನು ಆಯೋಜಿಸಲು ಸಿಬ್ಬಂದಿಗಳ ಕೊರತೆ ಇರುವ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಗೊಂದಲಕ್ಕೆ ಸಿಲುಕಿದೆ.

ಪರೀಕ್ಷೆ ನಡೆಸುವಂತೆ ಕೆಇಎಗೆ ಹೆಚ್ಚು ಪ್ರಸ್ತಾವನೆಗಳು ಬರುತ್ತಿವೆ, ಆದರೆ ಈಗಿರುವ ಸಿಬ್ಬಂದಿ ಸಂಖ್ಯೆಯಲ್ಲಿ ಸಿಇಟಿ ನಡೆಸುವುದೇ ಕಷ್ಟವಾಗಿರುವಾಗ ಇತರೆ ಪರೀಕ್ಷೆಗಳನ್ನು ನಡೆಸುವುದು ಅಸಾಧ್ಯ ಎಂದು ಹೇಳಿದೆ.

ಕೆಇಎ: ವೃತ್ತಿಪರ ಕೌನ್ಸೆಲಿಂಗ್ ಗೆ ಮೊಬೈಲ್ ಆ್ಯಪ್ ಕೆಇಎ: ವೃತ್ತಿಪರ ಕೌನ್ಸೆಲಿಂಗ್ ಗೆ ಮೊಬೈಲ್ ಆ್ಯಪ್

ಕಿಇಎ ಯಲ್ಲಿ 60 ಪೂರ್ಣಕಾಲಿಕ ಮತ್ತು 40 ದಿನಗೂಲಿ ಆಧಾರದ ಮೇಲೆ ನೇಮಕ ವಾದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನಿಷ್ಠ 20 ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇದೆ. ಸದ್ಯ ಕೆಇಎ ಸಿಇಟಿ, ಪಿಜಿಸಿಇಟಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟು ಹಂಚಿಕೆ, ಎಂಬಿಎ ಮತ್ತು ಎಂಸಿಎ ಕೋರ್ಸ್ ಗಳ ಪ್ರವೇಶಕ್ಕೆ ಪರೀಕ್ಷೆ ನಡೆಸುತ್ತಿದೆ.

KEA runs out of required staff

ಇದರ ಜತೆಗೆ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಪರೀಕ್ಷೆ ನಡೆಸುವಂತೆ ಹೊಸ ಜವಾಬ್ದಾರಿಯನ್ನು ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ. ಮತ್ತೊಂದೆಡೆ ಪ್ರತಿ ವರ್ಷ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

2018-1.98 ಲಕ್ಷ, 2017-1.79 ಲಕ್ಷ, 2016-1.78 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಒಂದು ಪರೀಕ್ಷೆ ನಡೆಸಬೇಕಾದಲ್ಲಿ ಕೆಇಎ ಅಗತ್ಯ ಸಿದ್ಧತೆ ನಡೆಸಬೇಕು. ಅರ್ಜಿ ಆಹ್ವಾನಿಸುವುದು, ತಿದ್ದುಪಡಿಗೆ ಅವಕಾಶ ಕಲ್ಪಿಸುವುದು, ಅರ್ಜಿ ಪರಿಶೀಲಿಸುವುದು, ಪ್ರಶ್ನೆ ಪತ್ರಿಕೆ ರೂಪಿಸುವುದು, ಅನುವಾದ, ಪರೀಕ್ಷಾ ದಿನಾಂಕ ನಿಗದಿ, ಸಸೂತ್ರ ಪರೀಕ್ಷೆ, ದಾಖಲಾತಿ ಪರಿಶೀಲನೆ ಹೀಗೆ ಎಲ್ಲ ಕೆಲಸಗಳು ನಿಗದಿತ ಸಮಯದಲ್ಲೇ ನಡೆಯಬೇಕು. ಸರ್ಕಾರಕ್ಕೆ ಪತ್ರ ಬರೆದು ಕನಿಷ್ಠ 20 ಸಿಬ್ಬಂದಿಗಳನ್ನು ಒದಗಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Since Karnataka Examination Authority has formed in the state it has become one of the other authorities which run out of minimum requirements as the authority facing scarcity of minimum number of staff and officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X