ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಿಇಟಿ 2016 ವೇಳಾಪಟ್ಟಿಯಲ್ಲಿ ಬದಲಾವಣೆ

By Mahesh
|
Google Oneindia Kannada News

ಬೆಂಗಳೂರು, ಡಿ. 10: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2016ನೇ ಸಾಲಿನ ಕರ್ನಾಟಕ ಸಿಇಟಿ ದಿನಾಂಕವನ್ನು ಪರಿಷ್ಕರಿಸಿದೆ. ಮೇ 1ರ ಬದಲಿಗೆ ಮೇ 4 ರಂದು ಪರೀಕ್ಷೆ ಆರಂಭವಾಗಲಿದೆ. ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2016-17ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 4 ರಿಂದ ಮೇ 6, 2016ರ ತನಕ ನಡೆಯಲಿದೆ.

ಇಂಜಿನಿಯರಿಂಗ್, ವೈದ್ಯಕೀಯ ಅಲ್ಲದೆ ದಂತ ವೈದ್ಯಕೀಯ, ಪಶು ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ ಮತ್ತು ಯೋಗ, ಕೃಷಿ ವಿಜ್ಞಾನ, ರೇಷ್ಮೆ, ತೋಟಗಾರಿಕೆ, ಬಿ-ಫಾರ್ಮ, ಫಾರ್ಮ-ಡಿ ಸೇರಿದಂತೆ ಹಲವು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆಯಲು ಸಿಇಟಿ ನಡೆಸಲಾಗುತ್ತದೆ.

KEA reschedules Dates of Karnataka Common Entrance TesT (CET)- 2016

* ಮೇ 4 ರ ಬುಧವಾರ
ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ,
ಮಧ್ಯಾಹ್ನ 2.30ರಿಂದ 3.50 ರವರೆಗೆ ಗಣಿತ

* ಮೇ 5ರಂದು ಗುರುವಾರ

ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ,
ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ

* ಮೇ 6ರಂದು ಶುಕ್ರವಾರ

ಬೆಳಿಗ್ಗೆ 11.30ರಿಂದ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆಯು ನಡೆಯುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ದಿನಾಂಕ ಬದಲಾವಣೆ ಏಕೆ?: ಸೆಂಟ್ರಲ್ ಬ್ಯೂರೋ ಆಫ್ ಸೆಕಂಡರಿ ಎಜುಕೇಷನ್ (ಸಿಬಿಎಸ್ ಇ) ನಡೆಯುವ ಆಲ್ ಇಂಡಿಯಾ ಪ್ರೀ ಮೆಡಿಕಲ್ ಟೆಸ್ಟ್ ಹಾಗೂ ಕರ್ನಾಟಕ ಸಿಇಟಿ ಒಂದೇ ದಿನ (ಮೇ. 01) ನಿಗದಿಯಾಗಿತ್ತು. ಸಿಇಟಿ ಹಾಗೂ ಎಐಪಿಎಂಟಿ ಎರಡು ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ದಿನಾಂಕವನ್ನು ಬದಲಾಯಿಸಲು ಕೆಇಎಗೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ನೋಡಿ

English summary
The Karnataka Examination Authority (KEA) on Thursday(Dec. 10) has re scheduled time table for for the Common Entrance Test (CET)-2016 for entry into various professional courses in State institutions. CET 2016 dates rescheduled as there is a clash with All India Pre Medical Test (AIPMT) conducted by CBSE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X