ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಪರ ಕೋರ್ಸ್‌ಗಳಿಗೆ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸಿದ ಕೆಇಎ

By Nayana
|
Google Oneindia Kannada News

ಬೆಂಗಳೂರು, ಜೂನ್‌ 28: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌ ಮತ್ತು ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಬುಧವಾರ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸಿದೆ.

32 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ 12,586 ಸೀಟುಗಳು ಲಭ್ಯವಿದೆ. ಇದರಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 10,424, ಹೈದರಾಬಾದ್‌ ಕರ್ನಾಟಕ ಮೀಸಲಾತಿ ಅಭ್ಯರ್ಥಿಗಳಿಗೆ 1666 ಹಾಗೂ ವಿಶೇಷ ಕೋಟಾದ ಅಭ್ಯರ್ಥಿಗಳಿಗೆ 496 ಸೀಟು ಮೀಸಲಿಡಲಾಗಿದೆ.

60 ಕ್ರೀಡೆಗಳಿಗೆ ಸಿಇಟಿ ಕೋಟಾ ಅನ್ವಯ: ಕೆಇಎ ಭರವಸೆ60 ಕ್ರೀಡೆಗಳಿಗೆ ಸಿಇಟಿ ಕೋಟಾ ಅನ್ವಯ: ಕೆಇಎ ಭರವಸೆ

ಆರ್ಕಿಟೆಕ್ಚರ್‌ನಲ್ಲಿ 114 ಸೀಟು, ಬಿಎಸ್ಸಿ ಎಜಿ, ಕೃಷಿ ಹಾಗೂ ಪಶು ಸಂಗೋಪನೆ, ತೋಟಗಾರಿಕೆ ಮತ್ತಿತರ ಕೋರ್ಸ್‌ಗಳಿಗೆ 2847 ಸೀಟುಗಳು ಲಭ್ಯವಿವೆ. ಸದ್ಯದಲ್ಲಿಯೇ ಶುಲ್ಕ ವಿವರ ಹಾಗೂ ಆಪ್ಷನ್‌ ಎಂಟ್ರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

KEA releases seat matrix for engineering courses

ಖಾಸಗಿ ಕಾಲೇಜುಗಳಲ್ಲಿನ ಸರಕಾರಿ ಕೋಟಾದ ಎಂಜಿನಿಯರಿಂಗ್‌ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಕಾಲೇಜಿನ ಆಡಳಿತ ಮಂಡಳಿಗಳು ಹಾಗೂ ಸರಕಾರದ ನಡುವೆ ಎರಡು-ಮೂರು ಸುತ್ತಿನ ಮಾತುಕತೆ ನಡೆದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಸರಕಾರ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿಯ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

English summary
Karnataka Examinations Authority has released seat matrix for engineering courses those who were cleared CET exams. In first phase 12,586 engineering seats are available in 32 colleges in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X