ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

By Nayana
|
Google Oneindia Kannada News

ಬೆಂಗಳೂರು, ಜು.11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 2,878 ಸರ್ಕಾರಿ ಕೋಟಾ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ.

ಈ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಸೇರಿ ಒಟ್ಟಾರೆ 55,216 ಸೀಟುಗಳು ಲಭ್ಯವಾಗಲಿದೆ. ಕಳೆದ ವರ್ಷ 52,878 ಸೀಟುಗಳು ಲಭ್ಯವಿದ್ದು ಈ ಬಾರಿ ಯಾವುದೇ ಎಂಜಿನಿಯರಿಂಗ್‌ ಕಾಲೇಜುಗಳು ಮುಚ್ಚದಿರುವುದು, ಕಾಲೇಜುಗಳ ಇನ್‌ಟೇಕ್‌ ಹೆಚ್ಚಳ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಒಂದು ಕಾಲೇಜಿಗೆ ಮಾನ್ಯತೆ ನೀಡದಿರುವ ಉದರಿಂದ ಈ ಬಾರಿ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ.

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ

ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದ ಸರ್ಕಾರ, ಸೋಮವಾರ ಅಂತಿಮವಾಗಿ ಶೇ.8ರಷ್ಟು ಶುಲ್ಕ ಮಾತ್ರ ಹೆಚ್ಚಳ ಮಾಡಲು ತಿಳಿಸಿಸಿದೆ. ಈಗಾಗಲೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಆಕಾಂಕ್ಷಿಗಳ ಇಚ್ಛೆ ಮತ್ತು ಆಯ್ಕೆಗಳನ್ನು ದಾಖಲಿಸಿದ್ದು, ಬುಧವಾರ(ಜು.11) ಕೆಇಎ ಅಣಕು ಸೀಟು ಹಂಚಿಕೆ ಮಾಡಲಿದೆ.

KEA releases seat matrix for engineering courses

ನೀಟ್‌-2018ರ ಪ್ರಥಮ ಸ್ಥಾನ ಆಧಾರದಲ್ಲಿ ಪರೀಕ್ಷಾ ಪ್ರಾಧಿಕಾರದ ದಾಖಲಾತಿ ಪರಿಶೀಲನೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಇಚ್ಛೆ, ಆಯ್ಕೆಗಳನ್ನು ಮಂಗಳವಾರ ಸಂಜೆವರೆಗೂ ದಾಖಲಿಸಿದ್ದಾರೆ.

English summary
Karnataka Examination Authority has released seat matrix for engineering courses and 2,878 seats have been increased comparing to last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X