ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಗೊಂದಲ: ಪ್ರವೇಶಾತಿಯ Rank ಪಟ್ಟಿಗೆ ತಡೆ ನೀಡಿದ ಪರೀಕ್ಷಾ ಪ್ರಾಧಿಕಾರ

|
Google Oneindia Kannada News

ಬೆಂಗಳೂರು, ನವೆಂಬರ್ 3: ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಸಕ್ತ ಸಾಲಿನ ಬಿಇ ಆರ್ಕಿಟೆಕ್ಚರ್ ಪದವಿ ಪ್ರವೇಶಾತಿಗೆ ಸಂಬಂಧಿಸಿದ ಶ್ರೇಯಾಂಕದ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಡೆಹಿಡಿದಿದೆ.

ಬಿಇ ವಾಸ್ತುಶಿಲ್ಪ ಪ್ರವೇಶಕ್ಕೆ ಸಂಬಂಧಿಸಿದಂತೆ ಶ್ರೇಯಾಂಕ ಪಟ್ಟಿಯನ್ನು ಅಕ್ಟೋಬರ್ 30ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಯು ಪಿಯುಸಿ ಅಥವಾ 12ನೇ ತರಗತಿಯಲ್ಲಿ ಗಳಿಸಿರುವ ಒಟ್ಟಾರೆಯ ಶೇ 50ರಷ್ಟು ಅಂಕಗಳು ಮತ್ತು ಜೆಇಇ/ನಾಟಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟಾರೆ ಅಂಕಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಗಳಿಸಿರುತ್ತಾರೋ ಅದರ ಶೇ 50ರಷ್ಟನ್ನು ಸೇರಿಸಿ ಈ ಶ್ರೇಯಾಂಕ (Rank) ಪಟ್ಟಿ ಪ್ರಕಟಿಸಲಾಗಿತ್ತು.

ಐಬಿಪಿಎಸ್‌ನಿಂದ ಕನ್ನಡಿಗರಿಗೆ ಮೋಸ, ಎಎಪಿಯಿಂದ ಎಚ್ಚರಿಕೆ ಐಬಿಪಿಎಸ್‌ನಿಂದ ಕನ್ನಡಿಗರಿಗೆ ಮೋಸ, ಎಎಪಿಯಿಂದ ಎಚ್ಚರಿಕೆ

ಆದರೆ ಈ ಬಾರಿ ಜೆಇಇ ಪರೀಕ್ಷೆಯ ಫಲಿತಾಂಶ ಅನೇಕರಲ್ಲಿ ಗೊಂದಲಗಳನ್ನು ಮೂಡಿಸಿದೆ. ಇದರ ಬಗ್ಗೆ ಅನೇಕ ವಿದ್ಯಾರ್ಥಿಗಳು ಎನ್‌ಟಿಎ ಮೊರೆ ಹೋಗಿದ್ದರು. ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಜೆಇಇ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಪರ್ಸಂಟೈಲ್ ಮಾದರಿಯಲ್ಲಿ ನೀಡಿತ್ತು.

KEA Holds CET Architecture Rankings After Students Requtests To Re Allocate

ಎನ್‌ಟಿಎ ನೀಡಿದ್ದ ಪರ್ಸಂಟೈಲ್ ಮಾದರಿ ಅಂಕಗಳ ಆಧಾರದಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳು ಶ್ರೇಯಾಂಕಗಳಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಆರೋಪಿಸಿದ್ದರು. ಹಾಗೆಯೇ ಈ ಫಲಿತಾಂಶವನ್ನು ಮರುಪರಿಶೀಲಿಸಲು ಕೋರಿದ್ದರು. ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದು ಬಿಇ ಆರ್ಕಿಟೆಕ್ಚರ್ ಪ್ರವೇಶಾತಿಗೆ ಸಂಬಂಧಿಸಿದಂತೆ ಪ್ರಕಟಿಸಲಾಗಿರುವ ಶ್ರೇಯಾಂಕ ಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಕೆಇಎ ತಿಳಿಸಿದೆ.

ನೀಟ್ ಅಂಕಗಳಲ್ಲಿ ವ್ಯತ್ಯಾಸ: ಕಂಗಾಲಾದ ವಿದ್ಯಾರ್ಥಿಗಳುನೀಟ್ ಅಂಕಗಳಲ್ಲಿ ವ್ಯತ್ಯಾಸ: ಕಂಗಾಲಾದ ವಿದ್ಯಾರ್ಥಿಗಳು

Recommended Video

Vote ಮಾಡಿದ ಎಲ್ಲರಿಗೂ ಧನ್ಯವಾದ | DK Shivakumar | Oneindia Kannada

ವಿದ್ಯಾರ್ಥಿಗಳ ಮನವಿ ಕುರಿತು ಸಂಬಂಧಿಸಿದ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದು ನಂತರ ಸೂಕ್ತ ಕ್ರಮವಹಿಸಲಾಗುವುದು ಎಂದು ಅದು ಹೇಳಿದೆ.

English summary
KEA holds the CET architecture Ranking list after students requested to re allocates rank on JEE percentile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X