ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ಕ್ರೀಡೆಗಳಿಗೆ ಸಿಇಟಿ ಕೋಟಾ ಅನ್ವಯ: ಕೆಇಎ ಭರವಸೆ

By Nayana
|
Google Oneindia Kannada News

ಬೆಂಗಳೂರು, ಜೂನ್ 6: ಕಬಡ್ಡಿ, ಚೆಸ್ ಸೇರಿದಂತೆ 22 ಕ್ರೀಡೆಗಳಿಗೆ ಸಿಟಿ ಕೋಟಾ ಇಲ್ಲ ಎಂಬ ಕ್ರೀಡಾ ಇಲಾಖೆಯ ಆದೇಶವನ್ನು ಪರಿಗಣಿಸುವುದಿಲ್ಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಒಲಂಪಿಕ್ಸ್‌ ಮಾನ್ಯತೆ ಪಡೆದಿರುವ ಕ್ರೀಡೆಗಳ ಸಾಧಕರನ್ನು ಮಾತ್ರ ವಿವಿಧ ವೃತ್ತಿಪರ ಕೋರ್ಸ್‌ಗಳ ಕ್ರೀಡಾ ಕೋಟಾದಲ್ಲಿ ಪರಿಗಣಿಸಬೇಕು ಎಂಬ ಕ್ರೀಡಾ ಇಲಾಖೆಯ ಆದೇಶ ನಮಗೆ ಅನ್ವಯವಾಗುವುದಿಲ್ಲ ಈ ಬಾರಿ ಎಂದಿನಂತೆ ಕ್ರೀಡಾ ಕೋಟಾದಡಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್ ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಒಲಿಂಪಿಕ್ಸ್ ಮಾನ್ಯತೆ ಪಡೆದ ಕ್ರೀಡೆಗಳು ಸೇರದಿಂತೆ ಸುಮಾರು 60ಕ್ರೀಡೆಗಳ ಸಾಧಕರಿಗೆ ಕ್ರೀಡಾ ಕೋಟಾದಡಿ ಸೀಟು ಹಂಚಿಕೆ ನಡೆಯಲಿದೆ. ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

KEA clarifies sports quota continues in seat allocation

ಈ ಸಂಬಂಧ ಕ್ರೀಡಾ ಇಲಾಖೆ ಹೊರಡಿಸಿರುವ ಆದೇಶವು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡ ಬಳಿಕ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ ಅದಕ್ಕೂ ಮೊದಲು ಅನ್ವಯವಾಗುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕ್ರೀಡಾ ಕೋಟಾದಡಿ ಸುಮಾರು 60 ಕ್ರೀಡೆಗಳ ಸಾಧಕರಿಗೆ ಪ್ರವೇಶಾವಕಾಶ ನೀಡುವ ಸೌಲಭ್ಯವನ್ನು ಸಿಇಟಿ ಹೊಂದಿದೆ. ಆದರೆ, ಚೆಸ್, ಕಬಡ್ಡಿ ಸೇರಿಂದತೆ ಒಲಿಂಪಿಕ್ಸ್‌ ನಲ್ಲಿ ಇನ್ನೂ ಮಾನ್ಯತೆ ಪಡೆಯದ 22 ಕ್ರೀಡೆಗಳನ್ನು ಪಟ್ಟಿ ಮಾಡಿ ಈಗಿರುವ ಕ್ರೀಡೆಗಳ ಸಾಧಕರನ್ನು ಸಿಇಟಿ ಕೋಟಾದಲ್ಲಿ ಪರಿಗಣಿಸದಂತೆ ಆದೇಶ ಹೊರಡಿಸಿತ್ತು.

ಈ ಆದೇಶ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಬಡ್ಡಿ, ಚೆಸ್ ಸೇರಿ ಹಲವು ಕ್ರೀಡೆಗಳನ್ನು ಕ್ರೀಡಾ ಕೋಟಾ ಪಟ್ಟಿಯಿಂದ ತೆಗೆದುಹಾಕಿರುವ ಆದೇಶ ವಿರೋಧಿಸಿ ಮಲ್ಲೇಶ್ವರದಲ್ಲಿರುವ ಸಿಇಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಇಟಿ ಕೈಪಿಡಿಯಲ್ಲಿ ವಿವಿಧ 60 ಕ್ರೀಡೆಗಳನ್ನು ನೀಡಲಾಗಿದ್ದು, ಅದರಂತೆಯೇ ಕ್ರೀಡಾ ಕೋಟಾ ನೀಡಬೇಕು. ಕ್ರೀಡಾ ಇಲಾಖೆ ಆದೇಶದಲ್ಲಿ ಕೇವಲ 32 ಕ್ರೀಡೆಗಳು ಮಾತ್ರ ಅನ್ವಯಿಸಲಿದೆ ಎಂಬುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

English summary
Karnataka Examination Authority has clarified that sports quota will be continued as per earlier norms in seat allocation of professional courses through CET.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X