'ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ'

Posted By:
Subscribe to Oneindia Kannada

ಬೆಂಗಳೂರು, ಜನವರಿ 07: ರಾಜ್ಯದ ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರಬೇಕು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ .ಜಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.

ರಾಜ್ಯದ ಹಲವು ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಹಾಗೂ ಮಾಹಿತಿಗಳು ಇಂಗ್ಲಿಷ್ ಭಾಷೆಯಲ್ಲಿವೆ. ಎಲ್ಲ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ನ ಮುಖ್ಯ ಪುಟಗಳು ಕನ್ನಡ ಭಾಷೆಯಲ್ಲಿರುವಂತೆ ಮರು ವಿನ್ಯಾಸಗೊಳಿಸಿ, ಕನ್ನಡದಲ್ಲಿ ಮಾಹಿತಿ ಸಿಗುವಂತೆ ಬದಲಿಸಿ, ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸಬಹುದು ಎಂದು ಪ್ರಾಧಿಕಾರ ತಿಳಿಸಿದೆ.

KDA SG Siddaramaiah urges University to use Kannada on their websites

ಕಲಬುರಗಿ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ 15 ವಿವಿಗಳ ವೆಬ್ ಮುಖ ಪುಟದಲ್ಲಿ ಆಂಗ್ಲ ಭಾಷೆ ಹಾಗೂ ಕನ್ನಡ ಭಾಷೆ ಆಯ್ಕೆಯನ್ನು ನೀಡಿವೆ. ಆದರೆ, ಕನ್ನಡದ ಆಯ್ಕೆ ಮುಖ್ಯಪುಟಗಳಿಗೆ ಮಾತ್ರ ಸೀಮಿತವಾಗಿವೆ. ಒಳಪುಟಗಳ ಮಾಹಿತಿಗಳು ಇಂಗ್ಲಿಷ್‌ನಲ್ಲಿ ವೆ. ಹಂಪಿ ಕನ್ನಡ ವಿವಿ ಹೊರತುಪಡಿಸಿ, ಇನ್ನುಳಿದ ವಿವಿಗಳು ವಿದ್ಯಾರ್ಥಿ, ಸಾರ್ವಜನಿಕರಿಗೆ ಕನ್ನಡದಲ್ಲಿ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1983 ರಲ್ಲಿ ರಾಜ್ಯ ಸರಕಾರವು ಎಲ್ಲ ಹಂತದಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆಯ್ನು ಅನುಷ್ಠಾನಗೊಳಿಸಲು ಆದೇಶಿಸಿದೆ. ಆದುದರಿಂದ, ಕೂಡಲೇ, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, 15 ದಿನಗಳೊಳಗೆ ವೆಬ್‌ಸೈಟ್‌ಗಳಲ್ಲಿ ಇಂಗ್ಲಿಷ್ ಕೈಬಿಡಬೇಕು. ಪ್ರಧಾನ ಪುಟದೊಂದಿಗೆ ಒಳಮಾಹಿತಿಗಳು ಸಹ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ರೂಪಿಸಬೇಕು. ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸುವುದಕ್ಕೆ ಅಭ್ಯಂತವಿರಲ್ಲ. ಇಲ್ಲದಿದಲ್ಲಿ, ಈ ಸಂಬಂಧ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Development authority chairmen S G Siddaramaiah has set 15 day deadline to all Universities in Karnataka to provide information in Kannada language on their websites.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ