• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಹಿಂದಿ ಹೇರಿಕೆ' ಬಿಎಂಆರ್ ಸಿಎಲ್ ನಮ್ಮ ಮೆಟ್ರೋಗೆ ನೋಟಿಸ್

By Mahesh
|

ಬೆಂಗಳೂರು, ಜೂನ್ 22: ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ 'ನಮ್ಮ ಮೆಟ್ರೋ' ರೈಲಿನಲ್ಲಿ ಹಿಂದಿ ಹೇರಿಕೆಯಾಗುತ್ತಿದೆ. ಚೆನ್ನೈ, ಕೊಲ್ಕತ್ತಾ, ದೆಹಲಿ ಮುಂತಾದ ಕಡೆ ಇರುವ ಮೆಟ್ರೋ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಸೇರಿಸುವುದು ಏಕೆ ಎಂಬ ಕೂಗಿಗೆ ಬೆಲೆ ಸಿಕ್ಕಿದೆ.

ನಮ್ಮ ಮೆಟ್ರೋ ಭಾಷಾ ನೀತಿ ಪ್ರಶ್ನಿಸಿ ಬಿ.ಎಂ.ಆರ್ .ಸಿಎಲ್ ಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ) ನೋಟಿಸ್ ಜಾರಿಗೊಳಿಸಿದೆ.

ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತಲು ಹಾಗು ಸಮಾನ ಭಾಷಾ ನೀತಿಗಾಗಿ ಆಗ್ರಹಿಸಿ ಬನವಾಸಿ ಬಳಗವು ಟ್ವಿಟ್ಟರ್ ಅಭಿಯಾನ ನಡೆಸಿ, ಯಶಸ್ವಿಯಾಗಿತ್ತು. ನಮ್ಮ ಮೆಟ್ರೋ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ.

ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೋ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಟ್ವಿಟರ್ ಅಭಿಯಾನ ಕೈಗೊಳ್ಳಲಾಗಿತ್ತು. ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಅವರಿಗೆ ಬುಧವಾರದಂದು ಕಳಿಸಿರುವ ನೋಟಿಸ್‌ ಪ್ರತಿ ಇಲ್ಲಿದೆ.

'ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕು. ಆದರೆ, 'ನಮ್ಮ ಮೆಟ್ರೊ'ದ ನಾಮಫಲಕಗಳಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಸಿರುವುದು ಕಂಡುಬಂದಿದೆ.

ನಮ್ಮ ಮೆಟ್ರೋದಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 238 ಎಲ್‌ಇಟಿ 2008 (ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ- ನಾಮಫಲಕಗಳು) ಹಾಗೂ ಕೇಂದ್ರ ಗೃಹ ಸಚಿವಾಲಯದ ಪತ್ರ ಸಂಖ್ಯೆ: 12-18/95/ಆರ್‌ಐಓ ದಿನಾಂಕ: 6.2.1995ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ನೋಟಿಸ್‌ ತಲುಪಿದ 7 ದಿನಗಳ ಒಳಗಾಗಿ ಪ್ರಾಧಿಕಾರಕ್ಕೆ ಸಮಜಾಯಿಷಿ ನೀಡಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಅವರು ಹೇಳಿದ್ದಾರೆ.

English summary
Kannada Development Authority has sent a notice asking BMRCL Namma Metro to explain about the Hindi Imposition on Metro Train
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X