• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿರಣ್‌ ಮಜುಂದಾರ್‌ ಟ್ವೀಟ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ

By Nayana
|

ಬೆಂಗಳೂರು, ಜು.10: ರಾಜ್ಯದ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಸಾಹಿತಿಗಳು ವಿರೋಧಿಸಿದ ಬೆನ್ನಲ್ಲೇ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ವಿವಾದಾತ್ಮಕ ಟ್ವೀಟ್‌ ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ,

ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಕಾಳಜಿ ಇಲ್ಲದ ಅನಗತ್ಯ ತಂಟೆಕೋರ ಸಣ್ಣ ಮತ್ತು ಅಪ್ರಸ್ತುತ ಹೋರಾಟಗಾರರ ಗುಂಪಿಗೆ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ ಎಂದು ಕಿರಣ್‌ ಮಜುಂದಾರ್‌ ಶಾ ಟ್ವೀಟ್‌ ಮಾಡಿದ್ದರು.

ಕೇಂದ್ರ ಸಚಿವ ರಾಜ್ಯವರ್ಧನ್ ರಿಂದ ಬಯೋಕಾನ್ ಮಜುಂದಾರ್ ಭೇಟಿ

ಇದಕ್ಕೆ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌. ಜಿ. ಸಿದ್ದರಾಮಯ್ಯ ಕಿಡಿಕಾರಿದ್ದು ಇಂತಹ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಿ ಎಂದು ತಾಕೀತು ಮಾಡಿ ಷಾಗೆ ಪತ್ರ ಬರೆದಿದ್ದಾರೆ. ಕನ್ನಡದ ಸೌಲಭ್ಯಗಳನ್ನು ಬಳಸಿಕೊಂಡು, ಈ ರೀತಿ ಹೇಳಿಕೆ ನೀಡಿರುವುದು ಕನ್ನಡ ವಿರೋಧಿ ನಡೆಯಗಿದೆ. ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೀರಿ, ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಕೋನದಲ್ಲಿ ನೋಡುವ ನಿಮಗೆ ಭಾಷೆ ಮೂಲಭೂತ ಜವಾಬ್ದಾರಿಯನ್ನು ಅರ್ಥೈಸುವ ಕೆಲಸ ಕನ್ನಡ ಹೋರಾಟಗಾರರ ಜತೆಗೂಡಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಆಂಗ್ಲ ಮಾಧ್ಯಮವೊಂದೇ ಬದುಕನ್ನು ಉದ್ಧಾರ ಮಾಡುತ್ತದೆ ಎಂದು ಅರ್ಥೈಸಿಕೊಳ್ಳುವ ನೀವು ಹಳ್ಳಿಗಾಡಿನ ಅಸಹಾಯಕ ಹೆಣ್ಣುಮಕ್ಕಳೊಂದಿಗೆ ಒಂದಷಟು ಕಾಲ ಕಳೆಯಿರಿ ಎಂದು ಶಾಗೆ ತಿರುಗೇಟು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada development authority chairman S.G. Siddaramaiah has expressed unhappiness over comment made by Biocon chief Kiran Muzumdar Shaw as irresponsible. Earlier latter was criticized Kannada literates and thinkers stand on English medium schools by the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more