ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KCET 2022ಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ

|
Google Oneindia Kannada News

ಬೆಂಗಳೂರು, ಮೇ29: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸಾಮಾನ್ಯ ಪರೀಕ್ಷೆ KCET 2022ರ ಅರ್ಜಿಯನ್ನು ಮೇ 29 ಅಂದರೇ ಇಂದು ಪುನಃ ತೆರೆದಿದೆ. ಕೆಇಎನ ಅಧಿಕೃತ ವೆಬ್ ಸೈಟ್ kea.kar.nic.in ನಲ್ಲಿ 2022ರ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಈ ಹಿಂದೆ KCET2022ರ ಮೇ 12, 2022 ರಂದು ಮುಕ್ತಾಯಗೊಳಿಸಿತ್ತು . ಆದರೆ ಪರೀಕ್ಷಾ ಪ್ರಾಧಿಕಾರವೂ
ಅರ್ಜಿಯ ಪ್ರಕ್ರಿಯನ್ನು ಪುನಃ ತೆರಲು ನಿರ್ಧರಿಸಿ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ.

ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಗೆ ಅವಕಾಶ ಮಾಡಿಕೊಡುವಂತೆ ಕೋರಿಕೆಯನ್ನು ಸಲ್ಲಿಸಿದ್ದರು. ಇದಕ್ಕಾಗಿ CET2022ಕ್ಕೆ ಹಾಜರಾಗಲು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವನ್ನು ನೀಡಲಾಗುತ್ತಿದೆ.

ನೋಂದಾಯಿಸದ ಅಥವಾ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸದವರು ಹೊಸದಾಗಿ ನೊಂದಾಯಿಸಿಕೊಳ್ಳಲು ಅವಕಾಶವನ್ನು ನೀಡಲಾಗುತ್ತದೆ. ಶುಲ್ಕವನ್ನು ಪಾವತಿಸಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೇ 29ರಿಂದ ರಾತ್ರಿ 8 ಗಂಟೆಗೆ ಮುಂಚಿತವಾಗಿ 2022ರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ' ಎಂದು ತನ್ನ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.

KCET2022 application window reopen on May 29

ಮೇ 29 ರಿಂದ 30 ರವರೆಗೆ ರಾತ್ರಿ 8 ಗಂಟೆಯ ಮೊದಲು 2022 ರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

KCET 2022 ಅರ್ಜಿ ಪ್ರಕ್ರಿಯೆ ಹೇಗೆ..? ಅರ್ಜಿ ಸಲ್ಲಿಸುವ ಕ್ರಮಗಳು

* KEA ಅಧಿಕೃತ ವೆಬ್‌ಸೈಟ್‌ಗೆ ಹೋಗಿ - kea.kar.nic.in

* ಅಧಿಕೃತ ವೆಬ್‌ಸೈಟ್‌ಗೆ ಹೋಗುತ್ತಿದ್ದಂತೆ ಮುಖಪುಟದಲ್ಲಿ 'Karnataka CET application' ಲಿಂಕ್ ಅನ್ನು ಒತ್ತಿರಿ.

* ಅಪ್ಲಿಕೇಷನ್ ತೆರೆಯುತ್ತಿದ್ದಂತೆ ನಿಮ್ಮ ಹೆಸರನ್ನು ನೊಂದಾಯಿಸಿ ಮತ್ತು KCET ಅರ್ಜಿ ನಮೂನೆ 2022 ಅನ್ನು ಭರ್ತಿ ಮಾಡಿ.

* ಸ್ಕಾನ್ ಮಾಡಿದ ಭಾವಚಿತ್ರ ಮತ್ತು ಸಹಿ ಮೊದಲಾದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* ಆನ್‌ಲೈನ್ ಮೂಲಕೇ ನೋಂದಣಿ ಶುಲ್ಕವನ್ನು ಪಾವತಿಸಿ.

KCET2022 application window reopen on May 29

KCET 2022: ಪರೀಕ್ಷೆಯ ದಿನಾಂಕ; KCET 2022ರ ಪರೀಕ್ಷೆಯು ಜೂನ್ 16 ರಂದು ಪ್ರಾರಂಭವಾಗುತ್ತದೆ. ಜೂನ್ 16ರಂದು ಪ್ರಾರಂಭವಾಗುವ ಪರೀಕ್ಷೆಯು ಜೂನ್18ರ ವರೆಗೂ ಮುಂದುವರೆಯುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಜೂನ್ 1 ರಂದು ಪ್ರವೇಶ ಪತ್ರ (hall ticket) ಸಿಗುವ ನಿರೀಕ್ಷೆಯಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಚ್ kea.kar.nic.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗದುಕೊಳ್ಳಬಹುದಾಗಿದೆ.

KCET 2022ರ ಪರೀಕ್ಷೆಗೆ ಮತ್ತೊಂದು ಅವಕಾಶಕ್ಕೆ ಸಂತಸ; KCET 2022ರ ಪರೀಕ್ಷೆಗೆ ಮತ್ತೊಂದು ಅವಕಾಶವನ್ನು ಒದಗಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ನಮಗೆ ಇದರಿಂದ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Recommended Video

IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada

English summary
KCET2022 application window reopen on may 29. Karnataka examination authority(KEA) will reopen the application process for the karnataka common entrance test, or KCET 2022,today may 29,2022. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X