ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KCET ಫಲಿತಾಂಶ 2020: ಯಾವ ವಿಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್?

|
Google Oneindia Kannada News

ಬೆಂಗಳೂರು, ಆಗಸ್ಟ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಪ್ರಕಟಿಸಿದೆ.

Recommended Video

Dubai ಫ್ಲೈಟ್ ಹತ್ತಿದ RCB ಪ್ಲೇಯರ್ಸ್ | Oneindia Kannada

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಕೆಸಿಇಟಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದಾರೆ. 2020ನೇ ಸಾಲಿನಲ್ಲಿ 1.53 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪ್ರವೇಶಾತಿಯ ಅರ್ಹತೆ ಪಡೆದುಕೊಂಡಿದ್ದಾರೆ.

ಕರ್ನಾಟಕ: ಕೆಸಿಇಟಿ ಪರೀಕ್ಷೆಗಳಲ್ಲಿ ಟಾಪ್-5 ವಿದ್ಯಾರ್ಥಿಗಳ ಪಟ್ಟಿಕರ್ನಾಟಕ: ಕೆಸಿಇಟಿ ಪರೀಕ್ಷೆಗಳಲ್ಲಿ ಟಾಪ್-5 ವಿದ್ಯಾರ್ಥಿಗಳ ಪಟ್ಟಿ

ಕಳೆದ ಜುಲೈ.30 ಮತ್ತು ಜುಲೈ.31ರಂದು ರಾಜ್ಯಾದ್ಯಂತ ಕೆಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸರ್ಕಾರವು ಈ ಮೊದಲು ಆಗಸ್ಟ್.20ರಂದು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಕೆಲವು ತಾಂತ್ರಿಕ ದೋಷಗಳಿಂದಾಗಿ ಶುಕ್ರವಾರ ಫಲಿತಾಂಶ ಪ್ರಕಟಿಸಿತು. ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ kea.kar.nic.in ಲಿಂಕ್ ನ್ನು ಬಳಸಿಕೊಂಡು ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹದು.

KCET Results Declared: 1.53 Lakh Students Qualified For Engineering Seats


ಯಾವ ವಿಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್?:

2020ನೇ ಶೈಕ್ಷಣಿಕ ಸಾಲಿನಲ್ಲಿ 1.53 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳಿಗೆ ಅರ್ಹತೆ ಪಡೆದುಕಂಡಿದ್ದಾರೆ. 1.55 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಾರ್ಮಸಿ ಕೋರ್ಸ್ ‌ಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇನ್ನು, 1.29 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯುಷ್ ಕೋರ್ಸ್ ‌ಗಳಿಗೆ ಮತ್ತು ಸುಮಾರು 1.27 ಲಕ್ಷ ವಿದ್ಯಾರ್ಥಿಗಳು ಕೃಷಿಗೆ ವೈದ್ಯಕೀಯ ಕೋರ್ಸ್ ಗಳಿಗೆ ಅರ್ಹತೆ ಪಡೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.

English summary
KCET Results Declared: 1.53 Lakh Students Qualified For Engineering Seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X