ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KCET Result 2022: ಸಿಇಟಿ ಫಲಿತಾಂಶ ಪ್ರಕಟ: ಫಲಿತಾಂಶ ನೋಡುವುದು ಹೇಗೆ

|
Google Oneindia Kannada News

2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2022ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ kea.kar.nic.in ಅಥವಾ https://cetonline.karnataka.gov.in/kea/ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದು. ಫಲಿತಾಂಶವನ್ನು ನೋಡಲು ಅಭ್ಯರ್ಥಿಗಳು ರೋಲ್‌ ನಂಬರ್, ಜನ್ಮ ದಿನಾಂಕ, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗುವ ಮೂಲಕ ಫಲಿತಾಂಶವನ್ನು ಚೆಕ್‌ ಮಾಡಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪ್ರವೇಶ ಪರೀಕ್ಷೆಯನ್ನು, ಇಂಜಿನಿಯರಿಂಗ್, ಆಯುರ್ವೇದ, ಫಾರ್ಮಸಿ, ಹೋಮಿಯೋಪತಿ, ಆರ್ಕಿಟಕ್ಚರ್‌, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಜೂನ್ 16,17,18 ರಂದು ಕೆಇಎ ಕಾಮನ್‌ ಎಂಟ್ರ್ಯಾನ್ಸ್ ಟೆಸ್ಟ್ ಅನ್ನು ನಡೆಸಿತ್ತು.

KCET Result 2022 Declared, How to check, Download Scorecard, Merit List


ಫಲಿತಾಂಶವನ್ನು ಚೆಕ್‌ ಮಾಡಲು ಅಭ್ಯರ್ಥಿಗಳಿಗೆ ರೋಲ್‌ ನಂಬರ್ ಬಹು ಮುಖ್ಯವಾಗಿದೆ. ಒಂದು ವೇಳೆ ಅಭ್ಯರ್ಥಿಗಳು ರೋಲ್‌ ನಂಬರ್‌ ಮರೆತುಹೊಗಿದ್ದರೆ, ಅಥವಾ ಪ್ರವೇಶ ಪತ್ರವನ್ನು ಕಳೆದುಕೊಂಡಿದ್ದರೇ ಆತಂಕ ಪಡುವ ಅವಶ್ಯಕತೆ ಇಲ್ಲ. ಅಭ್ಯರ್ಥಿಗಳು ಕೆಇಎ ಎಕ್ಸಿಕ್ಯೂಟಿವ್ ಡೈರಕ್ಟರ್ ಅವರ ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಅಪ್ಲಿಕೇಶನ್ ನಂಬರ್/ ರೋಲ್‌ ನಂಬರ್ ಪಡೆಯಬಹುದಾಗಿದೆ. ಟೆಲಿಫೋನ್ : 080-23460460, ವಾಟ್ಸಾಪ್ ನಂಬರ್ : 9741388123, ಇ-ಮೇಲ್ ವಿಳಾಸ : [email protected]

ಕೆಸಿಇಟಿ 2022 ಫಲಿತಾಂಶ ಚೆಕ್ ಮಾಡುವ ವಿಧಾನ ಇಲ್ಲಿದೆ-

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್‌ಸೈಟ್‌ kea.kar.nic.in, ಭೇಟಿ ನೀಡ ಅಥವಾ https://cetonline.karnataka.gov.in/kea/ ಗೆ ಭೇಟಿ ನೀಡಿ.

KCET Result 2022 Declared, How to check, Download Scorecard, Merit List

ಪೇಜ್‌ ಓಪನ್‌ ಆದ ಬಳಿಕ "KCET 2022 Result" ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮಗೆ ಕೆಇಎ ಹೊಸ ಪೇಜ್‌ ಓಪನ್‌ ಆಗುತ್ತದೆ.

ಓಪನ್‌ ಆದ ಪೇಜ್‌ ನಲ್ಲಿ ಅಭ್ಯರ್ಥಿಗಳು ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪಾಸ್‌ವರ್ಡ್‌, ಮಾಹಿತಿ ನೀಡಿ 'Submit' ಎಂಬಲ್ಲಿ ಕ್ಲಿಕ್ ಮಾಡಿ.

ನಂತರ ನಿಮ್ಮ ಫಲಿತಾಂಶ ಪರದೆಯ ಮೇಲೆ ಪ್ರದರ್ಶನವಾಗುತ್ತದೆ.

ಅದನ್ನು ಮುಂದಿನ ರೆಫ್ರನ್ಸ್‌ಗಾಗಿ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

English summary
KCET Result 2022 declared. How to get the result? Learn how to download mark sheet, merit list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X