ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ 2020 ಫಲಿತಾಂಶ ಪ್ರಕಟ, ಡಿಸಿಎಂ ಸುದ್ದಿಗೋಷ್ಠಿ ವಿವರ

|
Google Oneindia Kannada News

ಬೆಂಗಳೂರು, ಆ. 21: 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆ ಫಲಿತಾಂಶವನ್ನು ಇಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಪ್ರಕಟಿಸಿದರು.

Recommended Video

ಕೊರೊನ ವಾರಿಯರ್ ನನ್ನು ಬಲಿ ಪಡೆದುಕೊಂಡ ಸರ್ಕಾರ..?! | Oneindia Kannada

ಉಪ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:

* ರಾಜ್ಯದ ಸಮಸ್ತ ಜನರಿಗೆ ಗೌರಿ-ಗಣೇಶ ಚತುರ್ಥಿಯ ಶುಭಾಶಯಗಳು.
* ಇಡೀ ಜಗತ್ತೇ ಕೋವಿಡ್‌ ಬಿಕ್ಕಟ್ಟಿನಲ್ಲಿದ್ದಾಗ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು.

* ಕೋವಿಡ್‌ ಮಹಾಮಾರಿ ಕರ್ನಾಟಕವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ಆವರಿಸಿಕೊಂಡು ಕಾಡುತ್ತಿತ್ತು. ಆದರೂ ಕರ್ನಾಟಕ ಸರಕಾರ ಪರಿಸ್ಥಿತಿಗೆ ಹೆದರಿ ಪಲಾಯನ ಮಾಡದೇ ವಿದ್ಯಾರ್ಥಿಗಳು ಮತ್ತು ಪೋಷಕರ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸಿತು. ಇದರಿಂದ ಎಂಥ ಸವಾಲಿನ ಪರಿಸ್ಥಿತಿಯಲ್ಲೂ ಇಂಥ ಪರೀಕ್ಷೆ ನಡೆಸಬಹುದೆನ್ನುವ ಬಗ್ಗೆ ಇಡೀ ದೇಶಕ್ಕೆ ಸಂದೇಶ ನೀಡಿತಲ್ಲದೆ, ಇತರೆ ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿತು.

ಗೌರಿ ಹಬ್ಬದಂದು ಫಲಿತಾಂಶ ಪ್ರಕಟವಾಗುತ್ತಿದೆ

ಗೌರಿ ಹಬ್ಬದಂದು ಫಲಿತಾಂಶ ಪ್ರಕಟವಾಗುತ್ತಿದೆ

* ಇಡೀ ಜಗತ್ತು 'ಕೋವಿಡ್‌'ಗೆ ಹೆದರಿತ್ತು. ಆದರೆ ಕರ್ನಾಟಕ ಆ ಮಹಾಮಾರಿಗೆ ಸಡ್ಡು ಹೊಡೆದು, ಆ ಸಂಕಷ್ಟ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿ ಪರೀಕ್ಷೆ ನಡೆಸಿ ಕೇವಲ 20 ದಿನಗಳಲಿಯೇ ಫಲಿತಾಂಶವನ್ನೂ ಪ್ರಕಟಿಸಲಾಗುತ್ತಿದೆ. ವರ ಮಹಾಲಕ್ಷ್ಮೀ ಹಬ್ಬದಂದು ಪರೀಕ್ಷೆ ನಡೆಯಿತು. ಗೌರಿ ಹಬ್ಬದಂದು ಫಲಿತಾಂಶ ಪ್ರಕಟವಾಗುತ್ತಿದೆ. ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ (ಕೆಇಎ) ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು. ಇದಕ್ಕಾಗಿ ನಾನು ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮುಖ್ಯಸ್ಥರು ಮತ್ತು ಇತರೆ ಎಲ್ಲ ಸಿಬ್ಬಂದಿಯನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ಸಿಇಟಿ ಪರೀಕ್ಷೆಯನ್ನು 127 ಸ್ಥಳಗಳಲ್ಲಿ ನಡೆಸಲಾಯಿತು

ಸಿಇಟಿ ಪರೀಕ್ಷೆಯನ್ನು 127 ಸ್ಥಳಗಳಲ್ಲಿ ನಡೆಸಲಾಯಿತು

* ಈ ವರ್ಷ ಸಿಇಟಿ ಪರೀಕ್ಷೆಯನ್ನು 127 ಸ್ಥಳಗಳಲ್ಲಿ ಮಾಡಲಾಗಿದೆ. ಹಿಂದೆಲ್ಲ ಕೇವಲ 53 ಜಾಗಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗಿತ್ತು. 75 ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್‌ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತೊಂದರೆ ಆಗದೊರಲಿ ಎಂದು ಈ ಕ್ರಮವನ್ನು ಕೈಗೊಳ್ಳಲಾಯಿತು.
* ಅತ್ಯಂತ ಗಮನಾರ್ಹ ಸಂಗತಿ ಎಂದರೆ ಕೋವಿಡ್‌ ಪಾಸಿಟೀವ್‌ ಆಗಿದ್ದ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

* ಒಟ್ಟು 497 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 67 ಕೇಂದ್ರಗಳನ್ನು ಹೆಚ್ಚು ಮಾಡಲಾಗಿತ್ತು. ತಾಲ್ಲೂಕು ಹಂತದಲ್ಲಿಯೂ ಪರೀಕ್ಷೆ ನಡೆಸಲಾಯಿತು.

ಕೋವಿಡ್ ಮುನ್ನೆಚ್ಚರಿಕೆ ಜೊತೆಗೆ ಪರೀಕ್ಷೆ ಆಯೋಜನೆ

ಕೋವಿಡ್ ಮುನ್ನೆಚ್ಚರಿಕೆ ಜೊತೆಗೆ ಪರೀಕ್ಷೆ ಆಯೋಜನೆ

ಏಪ್ರಿಲ್ 23-24ಕ್ಕೆ ಸಿಇಟಿ ಪರೀಕ್ಷೆ ನಿಗದಿಯಾಗಿತ್ತು. ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟ ಸಿಇಟಿ ನಂತರ ಬದಲಿ ದಿನಾಂಕದಂದು ಆಯೋಜಿಸಲಾಗಿತ್ತು. ಮೊದಲ ವರ್ಷ/ಸೆಮಿಸ್ಟರ್ ಇಂಜಿನಿಯರ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್, ಬಿ ಫಾರ್ಮಾ, ಫಾರ್ಮಾ ಡಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗುತ್ತದೆ.

ಕೋವಿಡ್ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಸಾರಿಗೆ, ವೈದ್ಯಕೀಯ, ರಕ್ಷಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕೋವಿಡ್ ಪಾಸಿಟೀವ್ ಬಂದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿತ್ತು. ದೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಪರಿಚಯಿಸಿ ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ಕೊಟ್ಟ ಕರ್ನಾಟಕ, ಪರೀಕ್ಷೆ ನಡೆಸುವುದರಲ್ಲಿಯೂ ಎತ್ತಿದ ಕೈ ಎಂದು ತೋರಿಸಿಕೊಟ್ಟಿತು.

ಫಲಿತಾಂಶ ನೋಡುವುದು ಹೇಗೆ?

ಸರ್ಕಾರದ ಅಧಿಕೃತ ವೆಬ್ ಸೈಟ್ kea.kar.nic.in ಲಿಂಕ್ ನ್ನು ಬಳಸಿಕೊಂಡು ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹದು.

ಮೊದಲಿಗೆ kea.kar.nic.in ವೆಬ್ ಸೈಟ್ ಓಪನ್ ಮಾಡಬೇಕು
- ಹೋಮ್ ಪೇಜ್ ನಲ್ಲಿ ಕಾಣಿಸುವ ಅಡ್ಮಿಷನ್ಸ್ ಟ್ಯಾಪ್ ಮೇಲೆ ಕ್ಲಿಕ್ ಮಾಡಬೇಕು
- ಅಲ್ಲಿ ಕಾಣಿಸುವ UG-CET 2020 ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ನಂತರ ತೆರೆದುಕೊಳ್ಳುವ ಹೊಸ ಟ್ಯಾಬ್ ನಲ್ಲಿ KCET Result ಮೇಲೆ ಕ್ಲಿಕ್ ಮಾಡಿರಿ
- ಪರೀಕ್ಷಾರ್ಥಿಗಳು ತಮಗೆ ನೀಡಿದ KCET ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೂದಿಸಿ Enter ಬಟನ್ ಕ್ಲಿಕ್ ಮಾಡಬೇಕು
- ಈಗ ಪರದೆಯ ಮೇಲೆ ನಿಮ್ಮ ಫಲಿತಾಂಶವು ಕಾಣಿಸುತ್ತದೆ, ಫಲಿತಾಂಶವನ್ನು ಪ್ರಿಂಟ್ ಮಾಡಿಕೊಳ್ಳಿ

English summary
Karnataka CET Result 2020 Results out toady. DCM Dr. Ashwath Narayan announced it, check kea.kar.nic.in for scorecard, pass percentage, toppers list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X