ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ-ಸಿಇಟಿ ಫಲಿತಾಂಶ ಪರೀಕ್ಷಿಸುವುದು ಹೇಗೆ: ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಆಗಸ್ಟ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷಾ(KCET) ಫಲಿತಾಂಶವು ಶುಕ್ರವಾರ 12.30ಕ್ಕೆ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶ ಪರಿಶೀಲಿಸಿವುದು ಮತ್ತು ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸೂಕ್ತ ಮಾಹಿತಿ ಇಲ್ಲಿದೆ.

Recommended Video

ಸ್ಯಾಟಲೈಟ್ ನಲ್ಲಿ ಸೆರೆಯಾಯ್ತು Chinese ಮತ್ತೊಂದು ಮಂಗನಾಟ | Oneindia Kannada

ಕಳೆದ ಜುಲೈ.30 ಮತ್ತು ಜುಲೈ.31ರಂದು ರಾಜ್ಯಾದ್ಯಂತ ಕೆಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸರ್ಕಾರವು ಈ ಮೊದಲು ಆಗಸ್ಟ್.20ರಂದು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಈ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು.

ಸಿಇಟಿ ಫಲಿತಾಂಶ ಆಗಸ್ಟ್ 21ರಂದು ಪ್ರಕಟಸಿಇಟಿ ಫಲಿತಾಂಶ ಆಗಸ್ಟ್ 21ರಂದು ಪ್ರಕಟ

ಶುಕ್ರವಾರ 12.30ರ ವೇಳೆಗೆ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಕೆ-ಸಿಇಟಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಸರ್ಕಾರದ ಅಧಿಕೃತ ವೆಬ್ ಸೈಟ್ kea.kar.nic.in ಲಿಂಕ್ ನ್ನು ಬಳಸಿಕೊಂಡು ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹದು.

KCET Result 2020: Releasing today- How To Check And Download Scorecard


ಕೆ-ಸಿಇಟಿ-2020 ಫಲಿತಾಂಶ ಪರಿಶೀಲಿಸುವುದು ಹೇಗೆ:

- ಮೊದಲಿಗೆ kea.kar.nic.in ವೆಬ್ ಸೈಟ್ ಓಪನ್ ಮಾಡಬೇಕು

- ಹೋಮ್ ಪೇಜ್ ನಲ್ಲಿ ಕಾಣಿಸುವ ಅಡ್ಮಿಷನ್ಸ್ ಟ್ಯಾಪ್ ಮೇಲೆ ಕ್ಲಿಕ್ ಮಾಡಬೇಕು

- ಅಲ್ಲಿ ಕಾಣಿಸುವ UG-CET 2020 ಟ್ಯಾಬ್ ಮೇಲೆ ಕ್ಲಿಕ್ ಮಾಡಿ

- ನಂತರ ತೆರೆದುಕೊಳ್ಳುವ ಹೊಸ ಟ್ಯಾಬ್ ನಲ್ಲಿ KCET Result ಮೇಲೆ ಕ್ಲಿಕ್ ಮಾಡಿರಿ

- ಪರೀಕ್ಷಾರ್ಥಿಗಳು ತಮಗೆ ನೀಡಿದ KCET ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೂದಿಸಿ Enter ಬಟನ್ ಕ್ಲಿಕ್ ಮಾಡಬೇಕು

- ಈಗ ಪರದೆಯ ಮೇಲೆ ನಿಮ್ಮ ಫಲಿತಾಂಶವು ಕಾಣಿಸುತ್ತದೆ

- ಈ ಸ್ಕೋರ್ ಕಾರ್ಡ್ ನ್ನು ಡೌನ್ ಲೋಡ್ ಅಥವಾ ಸೇವ್ ಮಾಡಿಕೊಳ್ಳಬಹುದು

English summary
KCET Result 2020: Releasing today- How To Check And Download Scorecard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X