ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ KCET ದಾಖಲೆಗಳ ಪರಿಶೀಲನೆ ಪ್ರಾರಂಭ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಗೆ ಸಂಬಂಧಿಸಿದಂತೆ 2022ನೇ ಸಾಲಿನ ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ಸೇರಿದ ಅಧಿಕೃತ kea.kar.nic.in ಮತ್ತು cetonline.karnataka.gov.in/kea ವೆಬ್‌ಸೈಟ್‌ಗಳಲ್ಲಿ 2022ರ ಆಗಸ್ಟ್ 22ರ ಸೋಮವಾರದಿಂದಲೇ ಪ್ರಕ್ರಿಯೆ ಶುರುವಾಗಿದೆ.

ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ KCET ದಾಖಲೆ ಪರಿಶೀಲನೆ 2022 ದಿನಾಂಕಗಳನ್ನು ಸಹ ಪ್ರಕಟಿಸಿದೆ. ಈ ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳು ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿರಲಿದೆ. ಈ ಕುರಿತು ಮಾಹಿತಿಗಾಗಿ ಮುಂದೆ ಓದಿ.

ಸಿಇಟಿ ಬಿಕ್ಕಟ್ಟು: 75:25 ಅನುಪಾತ ಸೂತ್ರ ತಿರಸ್ಕರಿಸಿದ ಕೆಇಎಸಿಇಟಿ ಬಿಕ್ಕಟ್ಟು: 75:25 ಅನುಪಾತ ಸೂತ್ರ ತಿರಸ್ಕರಿಸಿದ ಕೆಇಎ

ದಾಖಲೆಗಳ ಬಗ್ಗೆ ಮಾಹಿತಿ ಪರಿಶೀಲನೆಗೆ ಸೂಚನೆ:

2022ರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯು ಆಗಸ್ಟ್ 22 ರಂದು ಪ್ರಾರಂಭವಾಗಲಿದೆ ಮತ್ತು ಸೆಪ್ಟೆಂಬರ್ 7ರವರೆಗೆ ಪ್ರಕ್ರಿಯೆ ನಡೆಯುತ್ತದೆ.

KCET Document Verification 2022 is starts; Here read link, shift, date, time other details

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2022 ತೆಗೆದುಕೊಳ್ಳುವ ಅಭ್ಯರ್ಥಿಗಳು ಹೆಚ್ಚಿನ ಮತ್ತು ನವೀಕರಿಸಿದ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅವರು ದಾಖಲೆಗಳ ಪರಿಶೀಲನೆಯನ್ನು ಸಮಯಕ್ಕೆ ಪೂರ್ಣಗೊಳಿಸಬೇಕು ಮತ್ತು ಪರಿಶೀಲನೆ ದಿನಾಂಕದಂದು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ.

ಮೂರು ಶಿಫ್ಟಿನಲ್ಲಿ ದಾಖಲೆಗಳ ಪರಿಶೀಲನೆ:

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ದಾಖಲೆಗಳ ಪರಿಶೀಲನೆಯು ಪ್ರತಿ ದಿನ ಮೂರು ಪಾಳಿಯಲ್ಲಿ ನಡೆಯಲಿದೆ. KEA ಪ್ರತಿ ದಿನ 5000 ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತದೆ.

ಯಾವ ಸಮಯಕ್ಕೆ ಯಾರ ದಾಖಲೆ ಪರಿಶೀಲನೆ?:

KCET ದಾಖಲೆ ಪರಿಶೀಲನೆ 2022 ರ ವೇಳಾಪಟ್ಟಿಯ ಪ್ರಕಾರ, 1-1800 ರ ಶ್ರೇಣಿಯಲ್ಲಿರುವ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಮೊದಲ ದಿನದಲ್ಲಿ ಪರಿಶೀಲಿಸುತ್ತಾರೆ, ಅಂದರೆ ಬೆಳಿಗ್ಗೆ 9:30 ರಿಂದ 11ರವರೆಗೆ ನಡೆಯಲಿದೆ. 1801-3600 ರ ಶ್ರೇಣಿಯಲ್ಲಿರುವ ಅಭ್ಯರ್ಥಿಗಳ ಡಾಕ್ಯುಮೆಂಟ್ ಪರಿಶೀಲನೆ ಪ್ರಕ್ರಿಯೆಯ ಎರಡನೇ ಶಿಫ್ಟ್ ನಲ್ಲಿ ಅಂದರೆ ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 1:15 ರವರೆಗೆ ನಡೆಸಲಾಗುತ್ತದೆ. ಅದೇ ರೀತಿ ಮಧ್ಯಾಹ್ನದ ಪಾಳಿಯಲ್ಲಿ ಅಂದರೆ ಮಧ್ಯಾಹ್ನ 2 ಗಂಟೆಯಿಂದ 3601-5000 ಶ್ರೇಣಿಯ ಅಭ್ಯರ್ಥಿಗಳು ತಮ್ಮ KCET ದಾಖಲೆ ಪರಿಶೀಲನೆ ಅನ್ನು ಪೂರ್ಣಗೊಳಿಸುತ್ತಾರೆ.

ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in ಅಥವಾ cetonline.karnataka.gov.in/kea ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

English summary
Karnataka Common Entrance Test Document Verification 2022 is starts; Here read link, shift, date, time other details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X