ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಹೀಗೆ ಮಾಡಿ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಇದೇ ಆಗಸ್ಟ್ 28 ರಿಂದ 30ರವರೆಗೆ ನಡೆಯಲಿದ್ದು, ಪರೀಕ್ಷಾ ಪ್ರವೇಶಪತ್ರವನ್ನು ಬಿಡುಗಡೆ ಮಾಡಲಾಗಿದೆ.

ವಿದ್ಯಾರ್ಥಿಗಳ ಫಲಿತಾಂಶವನ್ನು ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಿಇಟಿ ಅಂಕಗಳ ಆಧಾರದ ಮೇಲೆ ಮಾತ್ರ ರಾಂಕ್ ಕೊಡಲಾಗುವುದು. ಅದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯನ್ನು ಮಾಡಲಾಗುವುದು.

ಕರ್ನಾಟಕ ಸಿಇಟಿ: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಅಣಕು ಪರೀಕ್ಷೆಕರ್ನಾಟಕ ಸಿಇಟಿ: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಅಣಕು ಪರೀಕ್ಷೆ

ಪರೀಕ್ಷೆ ನಡೆಸಲು ರಾಜ್ಯಾದ್ಯಂತ 500 ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಪರೀಕ್ಷೆ ಬರೆಯಬೇಕಿದೆ.

KCET Admit Card 2021 Released, Here Is How To Download The Admit Card

ಕೆಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು kea.kar.nic.in ಎಂಬ ಅಧಿಕೃತ ವೆಬ್​ಸೈಟ್​ನಿಂದ ಪ್ರವೇಶಾತಿ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಆದರೆ, ಡೌನ್​ಲೋಡ್​ಗೂ ಮುನ್ನ ಕೆಲ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದ್ದು, ತಮ್ಮ ಲಾಗಿನ್​ ವಿವರಗಳನ್ನು ಸಲ್ಲಿಸಬೇಕಾಗಿದೆ.

ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಇಟಿ ಪ್ರೆಪ್‌ಮಾಸ್ಟರ್ ಅಣಕು ಪರೀಕ್ಷೆಯನ್ನು ಇದೇ ಆಗಸ್ಟ್ 14 ಹಾಗೂ 21ರಂದು ನಡೆಸಲಾಗುತ್ತಿದೆ.

ಆಕಾಂಕ್ಷಿಗಳು www.cetprepmaster.in ಅಲ್ಲಿ ನೋಂದಣಿ ಮಾಡಿ ಅಣಕು ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಣಕು ಪರೀಕ್ಷೆ ಸಂಜೆ 6 ಗಂಟೆಗೆ ನಡೆಯಲಿದೆ. ಅಭ್ಯರ್ಥಿಗಳು ಕ್ಯೂಆರ್ ಕೋಡ್ ಮೂಲಕ ಪ್ರೆಪ್‌ಮಾಸ್ಟರ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.

ಸೀಟು ಹಂಚಿಕೆಗೆ ಈ ವರ್ಷ ಪಿಯುಸಿಯ ಶೇ.50 ಅಂಕ ಪರಿಗಣಿಸದೇ ಇರಲು ಸಭೆಯಲ್ಲಿ ತೀರ್ಮಾನ ತೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದು, ಒಂದು ವೇಳೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾದರೆ ಮಾತ್ರ ದಿನಾಂಕವನ್ನು ಮುಂದೂಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

ಅದರಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಗೂ 98 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿ ಇನ್ನಿತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತದೆ.

ಒಮ್ಮೆ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಂಡ ನಂತರ ಅದರಲ್ಲಿರುವ ಮಾಹಿತಿಗಳೆಲ್ಲವೂ ಸರಿಯಾಗಿದೆಯೇ ಎಂಬುದನ್ನು ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬೇಕು, ಪರೀಕ್ಷೆಗೆ ಹೋಗುವಾಗ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಜೊತೆಗೆ ಐಡಿ ಕಾರ್ಡ್ ಕೂಡ ತೆಗೆದುಕೊಂಡು ಹೋಗಬೇಕು.

Recommended Video

ಡ್ರೆಸ್ಸಿಂಗ್ ರೂಮ್ ನಲ್ಲಿ KL ರಾಹುಲ್ ದಂಗಾದ ವಿಡಿಯೊ ವೈರಲ್ | Oneindia Kannada

ಸಿಇಟಿ ಪ್ರವೇಶಪತ್ರವನ್ನು ಹೀಗೆ ಡೌನ್‌ಲೋಡ್ ಮಾಡಿ
*ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ kea.kar.nic.in ಗೆ ಲಾಗ್‌ಇನ್ ಆಗಿ.
*ವೆಬ್​ಸೈಟ್​ ತೆರೆಯುತ್ತಿದ್ದಂತೆಯೇ ಮುಖಪುಟದಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳು ಸಿಗಲಿದ್ದು, ಅದರಲ್ಲಿ KCET Admit Card 2021 ಎಂಬ ಲಿಂಕ್​ ಮೇಲೆ ಕ್ಲಿಕ್ ಮಾಡಿ
*ಲಿಂಕ್​ ಓಪನ್ ಆದ ಬಳಿಕ ನಿಮಗೆ ಲಾಗಿನ್​ ಆಗಲು ಆಯ್ಕೆ ಕಾಣಿಸಲಿದ್ದು, ಅದರಲ್ಲಿ ನಿಮ್ಮ ಲಾಗಿನ್​ ವಿವರಗಳನ್ನು ಸರಿಯಾಗಿ ನಮೂದಿಸಿ
*ಲಾಗಿನ್​ ಆದ ಬಳಿಕ ಪರೀಕ್ಷೆಯ ಪ್ರವೇಶಾತಿ ಪತ್ರವು ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲಿದೆ
ಪ್ರವೇಶಾತಿ ಪತ್ರದಲ್ಲಿರುವ ವಿವರಗಳನ್ನು ಒಮ್ಮೆ ಸರಿಯಾಗಿ ಗಮನಿಸಿ
ಬಳಿಕ ಅದೇ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಿ
*ಮುಂದಿನ ಅವಶ್ಯಕತೆಗೆ ಅನುಗುಣವಾಗಿ ಡೌನ್​ಲೋಡ್​ ಮಾಡಿದ ಪ್ರವೇಶಾತಿ ಪತ್ರದ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಿ

English summary
The admit card for the Karnataka Common Entrance Test (KCET 2021) has been released. The candidates who will appear in the CET exam can download the hall ticket on the official website- kea.kar.nic.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X