ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಜೂ.14ಕ್ಕೆ ಬೆಂಗಳೂರಿಗೆ ವೇಣುಗೋಪಾಲ್

By Nayana
|
Google Oneindia Kannada News

Recommended Video

ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕಾತಿಗೆ ಜೂನ್ 14ರಂದು ಬೆಂಗಳೂರಿಗೆ ಬರಲಿದ್ದಾರೆ ಕೆ ಸಿ ವೇಣುಗೋಪಾಲ್

ಬೆಂಗಳೂರು, ಜೂನ್ 13: ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿದೆ. ಹಲವು ಹೆಸರುಗಳು ಕೇಳಿಬಂದಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೂನ್ 14ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ.

ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿದೆ. ಇದರಲ್ಲಿ ಗುಂಪುಗಾರಿಕೆ ಇಲ್ಲ, ಲೋಕಸಭಾ ಚುನಾವಣೆ ತಯಾರಿ ಆಗಬೇಕಿದೆ, ಪಕ್ಷ ಬಲವರ್ಧನೆ, ಸಂಘಟನೆ ಆಗಬೇಕಿದೆ ಎಂದರು.

ಕಾಂಗ್ರೆಸ್‌ನಲ್ಲಿ ನಾನೂ ಸೀನಿಯರ್ ಲೀಡರ್: ದಿನೇಶ್‌ ಗುಂಡೂರಾವ್ ಕಾಂಗ್ರೆಸ್‌ನಲ್ಲಿ ನಾನೂ ಸೀನಿಯರ್ ಲೀಡರ್: ದಿನೇಶ್‌ ಗುಂಡೂರಾವ್

ನಾನು ಎಐಸಿಸಿ ನಿರ್ಧಾರಕ್ಕೆ ಸದಾ ಬದ್ಧನಾಗಿರುತ್ತೇನೆ, ಕೆಸಿ ವೇಣುಗೋಪಾಲ್ ಅವರು ನಗರಕ್ಕೆ ಬರುತ್ತಿದ್ದು, ಇದೆಲ್ಲದಕ್ಕೂ ಉತ್ತರ ಸಿಗಲಿದೆ, ಅಧ್ಯಕ್ಷ ಸ್ಥಾನದ ಪೈಪೋಟಿ ಮುಂದಿವರೆದಿದೆ, ಆದರೆ ನಾನಂತೂ ಪೈಪೋಟಿ ಮಾಡುವುದಿಲ್ಲ, ಮುಂದೆಯೂ ಪಕ್ಷ ನೀಡುವ ಆದೇಶಕ್ಕೆ ಬದ್ಧನಾಗಿರುತ್ತೇನೆ ಎಂದು ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

KC Venugopal likely to announce new KPCC chief

ಜಿ. ಪರಮೇಶ್ವರ್ ಡಿಸಿಎಂ ಜತೆಗೆ ಎರಡು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ, ಹೀಗಾಗಿ ಹೊಸಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಖಂಡಿತವಾಗಿ ನಿಭಾಯಿಸುತ್ತೇನೆ, ಹಿಂದೆನೂ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದರು.

English summary
KPCC working president Dinesh Gundurao said AICC general secretary K.C.Venugopal who is visiting Bangalore on June 14 expected to announce new KPCC president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X