ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರಿಗೆ ಉಚಿತ ತರಬೇತಿ ನೀಡುವ 'ಕೌಶಲ್ಯ ಕರ್ನಾಟಕ'

ಯುವಕರಿಗೆ ಉಚಿತ ತರಬೇತಿ ನೀಡುವ ಈ 'ಕೌಶಲ್ಯ ಕರ್ನಾಟಕ' ಅಭಿಯಾನಕ್ಕೆ 'ರಾಜಕುಮಾರ' ಖ್ಯಾತಿಯ ನಟ ಪುನೀತ್ ರಾಜಕುಮಾರ್ ಅವರು ರಾಯಭಾರಿಯಾಗಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ಮೇ 15 : 'ಕುಶಲತೆಯ ಬೆಂಬಲ ಯುವ ಕೈಗಳಿಗೆ ಬಲ' ಎಂಬ ಘೋಷಣೆಯೊಂದಿಗೆ ಕರ್ನಾಟಕದಲ್ಲಿ 5 ಲಕ್ಷ ಯುವಜನತೆಗೆ ಉಚಿತ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿದ್ದರಾಮಯ್ಯ ಅವರು ಸೋಮವಾರ, ಮೇ 15ರಂದು ಆರಂಭಿಸಿದರು.

ಯುವಕರಿಗೆ ಉಚಿತ ತರಬೇತಿ ನೀಡುವ ಈ 'ಕೌಶಲ್ಯ ಕರ್ನಾಟಕ' ಅಭಿಯಾನಕ್ಕೆ 'ರಾಜಕುಮಾರ' ಖ್ಯಾತಿಯ ನಟ ಪುನೀತ್ ರಾಜಕುಮಾರ್ ಅವರು ರಾಯಭಾರಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ www.kaushalkar.com ವೆಬ್ ಸೈಟ್ ಮತ್ತು kaushalkar app ಕೂಡ ಬಿಡುಗಡೆಯಾಯಿತು. ವೆಬ್ ಸೈಟ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದು, ಗೂಗಲ್ ಪ್ಲೇ ಮೂಲಕ ಆ್ಯಪ್ ಕೂಡ ಇನ್‌ಸ್ಟಾಲ್ ಮಾಡಿಕೊಂಡು ಯುವಕರು ಉಚಿತವಾಗಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. [ಕೆಪಿಎಸ್ಸಿಯಿಂದ ಗೆಜೆಟೆಡ್ ಪ್ರೊಬೇಷನರ್ಸ್ 401 ಹುದ್ದೆಗೆ ಅರ್ಜಿ]

Kaushalya Karnataka – Free Enrolment and Training for Youth Enhancing Skill Empowering Youth

"ಕಾಯಕವೇ ಕೈಲಾಸ ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿ ಕೌಶಲ್ಯ ಕ್ರಾಂತಿಯ ಮೂಲಕ ನವನಾಡನ್ನು ನಿರ್ಮಿಸೋಣ. ಯುವಜನತೆ ಕಾರ್ಯಕ್ರಮದ ಲಾಭ ಪಡೆಯಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುವಜನತೆಗೆ ಕರೆ ನೀಡಿದರು.

ಪುನೀತ್ ರಾಜ್ ಕುಮಾರ್ ಅವರು, "ಕೌಶಲ್ಯ ಕರ್ನಾಟಕದ ರಾಜ್ಯ ರಾಯಭಾರಿಯಾಗಿದ್ದ ನನ್ನ ಪುಣ್ಯ. ಜನರು ಈ ವೆಬ್ ಸೈಟ್ ಮತ್ತು ಆಪ್ ಬಳಸಿ, ತಮಗೆ ಇಷ್ಟವಾದ ಉದ್ಯೋಗದ ತರಬೇತಿ ಪಡೆದುಕೊಳ್ಳಬೇಕು. ಜೈ ಕರ್ನಾಟಕ ಮಾತೆ" ಎಂದು ಎರಡು ಮಾತಾಡಿದರು.

Free Enrolment and Training for Youth Enhancing Skill Empowering Youth

ತಾಲ್ಲೂಕು ಕೌಶಲ್ಯ ಶಿಬಿರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ತರಬೇತಿಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಕರ್ನಾಟಕ ಜ್ಞಾನ ಆಯೋಗದ ಮಾಹಿತಿಯಂತೆ 2030ರ ವೇಳೆಗೆ 1 ಕೋಟಿ 38 ಲಕ್ಷ ಯುವಜನತೆಗೆ ತರಬೇತಿ ನೀಡುವ ಅಗತ್ಯವಿದೆ. ಈ ಬೇಡಿಕೆಗೆ ತಕ್ಕಂತೆ ಸರಕಾರ ಉದ್ಯೋಗದ ತರಬೇತಿ ನೀಡಲಿದೆ.

ಸಿದ್ದರಾಮಯ್ಯ ಅವರು ಆರಂಭಿಸಿರುವ ಈ ಅಭಿಯಾನವನ್ನು ಕರ್ನಾಟಕದ ಜನತೆ ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿಗಳ ಕನಸಿನ ಯೋಜನೆಗೆ ರಾಜಕುಮಾರನ ರಾಯಭಾರ. ನಿರುದ್ಯೋಗ ನಿವಾರಣೆಯತ್ತ ದಾಪುಗಾಲು ಹಾಕುತ್ತಿರುವ, ಈ ಯೋಜನೆ ಯಶಸ್ವಿಯಾಗಲಿ ಎಂದು ಒಬ್ಬರು ಹಾರೈಸಿದ್ದಾರೆ.

{promotion-urls}

English summary
KAUSHALYA KARNATAKA – Enhancing Skill Empowering Youth, Free Enrolment and Training for All Aspirants in Karnataka. Siddaramaiah launched kaushalkar.com website and kaushalkar app. Kannada actor Puneeth Rajkumar is the brand ambassador for this campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X